ಕಾಸರಗೋಡು: ಹೊಸ ಪ್ರಕರಣವಿಲ್ಲ
Team Udayavani, May 5, 2020, 4:54 AM IST
ಕಾಸರಗೋಡು: ಜಿಲ್ಲೆಯಲ್ಲಿ ಸತತ ನಾಲ್ಕನೇ ದಿನವಾದ ಸೋಮವಾರ ಕೂಡ ಹೊಸ ಕೋವಿಡ್-19 ಸೋಂಕು ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಈ ವರೆಗೆ 179 ಮಂದಿಗೆ ಸೋಂಕು ತಗಲಿದ್ದು, 172 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಶೇ. 96.6 ಮಂದಿ ಗುಣಮುಖರಾದಂತಾಗಿದೆ. 4,812 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸ ಲಾಗಿದೆ. 4,144 ಮಂದಿಯ ಫಲಿತಾಂಶ ನೆಗೆಟಿವ್ ಬಂದಿದೆ. 340 ಮಂದಿಯ ಫಲಿತಾಂಶ ಲಭಿಸಿಲ್ಲ.ಜಿಲ್ಲೆಯಲ್ಲಿ ಈಗ 6 ಮಂದಿ ಪಾಸಿಟವ್ ರೋಗಿಗಳಿದ್ದಾರೆ. ಓರ್ವರು ಕಣ್ಣೂರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಗಳಲ್ಲಿ 1,346 ಮಂದಿ, ಆಸ್ಪತ್ರೆಗಳಲ್ಲಿ 25 ಮಂದಿ ನಿಗಾದಲ್ಲಿದ್ದಾರೆ. ಒಬ್ಬರನ್ನು ಸೋಮವಾರ ಐಸೊಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ. 262 ಮಂದಿ ನಿಗಾ ಅವಧಿ ಪೂರ್ಣ ಗೊಳಿಸಿದ್ದಾರೆ.
ಕೇರಳದಲ್ಲಿ 61 ಮಂದಿ ಗುಣಮುಖ
ಕೇರಳದಲ್ಲಿ ಸೋಮವಾರ ಹೊಸದಾಗಿ ಕೋವಿಡ್-19 ವೈರಸ್ ಸೋಂಕು ಪ್ರಕರಣ ಕಂಡು ಬಂದಿಲ್ಲ. ಅದೇ ವೇಳೆ 61 ಮಂದಿ ಗುಣಮುಖರಾಗಿ ದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕೇವಲ 34 ಮಂದಿ ಮಾತ್ರವೇ ಚಿಕಿತ್ಸೆ ಯಲ್ಲಿದ್ದಾರೆ.
16 ಪ್ರಕರಣ ದಾಖಲು
ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 16 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.36 ಮಂದಿಯನ್ನು ಬಂಧಿಸಲಾಗಿದ್ದು,9 ವಾಹನಗಳನ್ನು ವಶಪಡಿಸಿಕೊಳ್ಳ ಲಾಗಿದೆ.
ನೋಂದಣಿ ಮಾಡದೆ ಬರುವುದು ಬೇಡ
ಗಡಿ ದಾಟಿ ಜಿಲ್ಲೆಯನ್ನು ಪ್ರವೇಶಿಸಲು ಬಯಸುವವರು www.registernorkaroots.org, ಅಥವಾ covid19 jagratha.kerala.nic.in ಎಂಬ ಪೋರ್ಟಲ್‌ಗಳಲ್ಲಿ ಮುಂಚಿತವಾಗಿ ನೋಂದಣಿ ನಡೆಸಿ ಮಂಜೂರಾತಿ ಪಡೆದಿರಬೇಕು. ಅದರ ಹೊರತು ತಲಪಾಡಿ ಚೆಕ್‌ಪೋಸ್ಟ್‌ಗೆ ಬರ ದಿರುವುದು ಉತ್ತಮ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ.
ನೋಂದಣಿ ಮಾಡದೆ ಬರುವವರಿಗಾಗಿ ಹೆಲ್ಪ್ಡೆಸ್ಕ್ ಗಳಲ್ಲಿ ಸ್ಪಾಟ್ ರಿಜಿಸ್ಟ್ರೇಶನ್ ವ್ಯವಸ್ಥೆ ಇದ್ದರೂ ಈಗಾಗಲೇ ನೋಂದಣಿ ಮಾಡಿದವರಿಗೆ ಆದ್ಯತೆ ಇದ್ದು, ಅನಂತರವಷ್ಟೇ ಉಳಿದವರನ್ನು ಪರಿಶೀಲಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.