ಬದುಕಿಗೂ ಪಾಠ ಕಲಿಸಿದ ಕೋವಿಡ್

Team Udayavani, May 5, 2020, 3:41 PM IST

ಬದುಕಿಗೂ ಪಾಠ ಕಲಿಸಿದ ಕೋವಿಡ್

ಮಣಿಪಾಲ: ಮಾನವರು ಸಾಮಾಜಿಕ ಜೀವಿಗಳು. ಇದು ಅರಿಸ್ಟಾಟಲ್‌ ಸೇರಿದಂತೆ ಹಲವಾರು ಚಿಂತಕರು ಸ್ಪಷ್ಟಪಡಿಸಿದ್ದಾರೆ. ಇದುವರೆಗಿನ ಯಾವುದೇ ದುರಂತ ಗಳೂ ಮಾನವರ ಮೂಲತತ್ವವಾದ ಸಾಂ ಕತೆಯನ್ನು ದೂರ ಮಾಡಿರಲಿಲ್ಲ. ಆದರೆ ಕೋವಿಡ್ ಅದಕ್ಕೆ ಅಪವಾದ.

ನಾವೀಗ ಕೋವಿಡ್ ಆಧರಿಸಿ ಹೊಸ ಕಾಲಘಟ್ಟವನ್ನು ನಿರ್ಧರಿಸಬಹುದು. ಕೋವಿಡ್ ಗಿಂತ ಮೊದಲು (ಬಿ.ಸಿ.-ಬಿಫೋರ್‌ ಕೋವಿಡ್) ಮತ್ತು ಕೋವಿಡ್ ಬಳಿಕ (ಎ.ಸಿ.- ಆಫ್ಟರ್‌ ಕೋವಿಡ್) ಎಂದೂ ಯೋಚಿಸಬಹುದು.

ಇಂಗ್ಗೆಂಡ್‌ನ‌ಲ್ಲಿ 1968ರಿಂದ ಆರಂಭವಾಗಿದ್ದ ಹಾಂಗ್‌ಕಾಂಗ್‌ ಜ್ವರಕ್ಕೆ ಸುಮಾರು 80,000 ಮಂದಿ, 1957-58ರಲ್ಲಿ ಕಂಡು ಬಂದಿದ್ದ ಏಷ್ಯನ್‌ ಜ್ವರದಿಂದ 33,000 ಮಂದಿ ಬಲಿಯಾಗಿದ್ದರು. ಅವೆಲ್ಲವನ್ನೂ ಮೀರಿಸಿ ಈ ಬಾರಿಯ ಕೋವಿಡ್ ಗೆ 45,000 ಮಂದಿ ಜೀವ ತೆತ್ತಿದ್ದಾರೆ. ಹಿಂದೆ ಯಾವತ್ತೂ ಲಾಕ್‌ಡೌನ್‌ ಜಾರಿಯಲ್ಲಿರಲಿಲ್ಲ. ಈ ಬಾರಿ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಸಾವಿನ ಪ್ರಮಾಣ ಏರಿರುವುದು ಕೋವಿಡ್ ತೀವ್ರತೆಗೆ ಸಾಕ್ಷಿ.

ಕೋವಿಡ್ ಕಾರಣದ ಸಾವು ನೋವಿನ ಸರಿಯಾದ ಚಿತ್ರಣ ಸಿಗಬೇಕಿದ್ದರೆ ವರ್ಷಗಳೇ ಬೇಕಾದೀತು. ಇದು ಆರ್ಥಿಕತೆ ಮತ್ತು ಸಾಮಾಜಿಕ ಜೀವನವನ್ನು ಗಂಭೀರವಾಗಿ ಕಾಡಿದೆ. ಜತೆಗೆ ನಮಗೆ ಸಾಕಷ್ಟು ಬದಲಾವಣೆಯ ಪಾಠ ಕಲಿಸಿದೆ.

– ಮುಖಗವಸು ಧರಿಸುವ ಸಂಸ್ಕೃತಿ, ಸಾಮಾಜಿಕ ಅಂತರ ಬದುಕಿನ ಭಾಗವಾಗಬಹುದು. ಹೊರಗಿನ ಸಮಾಜದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಖಾಸಗಿತನಕ್ಕೆ ಒತ್ತು, ದತ್ತಾಂಶ ಹಂಚಿಕೆ ಹವ್ಯಾಸ ಬೆಳೆಯಬಹುದು.

– ಮಿತವ್ಯಯ ಕೃತಿಗೆ ಬರಬಹುದು. ಅಂತಾರಾಷ್ಟ್ರೀಯ ಪ್ರವಾಸಗಳಿಗೆ ಸ್ವರ್ಯ ನಿರ್ಬಂಧ ವಿಧಿಸಿಕೊಳ್ಳುವ ಸಾಧ್ಯತೆಯಿದೆ.

– ಪ್ರಗತಿ ಮತ್ತು ವಿಜ್ಞಾನಕ್ಕೆ ಇತಿಮಿತಿಗಳಿವೆ ಎಂಬ ಭಾವನೆ ಮೂಡಬಹುದು. ಜತೆಗೆ ನಮ್ಮ ಮಧ್ಯಕಾಲೀನ ಪೂರ್ವಜರಂತೆ ಆರೋಗ್ಯ ಭೀತಿ ಕಾಡದಿರದು.

– ಧಾರ್ಮಿಕ ಪ್ರಜ್ಞೆ ಮತ್ತಷ್ಟು ಹೆಚ್ಚಿದರೂ ಅಚ್ಚರಿ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಹಿಷ್ಣುತೆ ಹೀಗೆ ಪ್ರತಿ ಪರಿಕಲ್ಪನೆಯಲ್ಲೂ ಬದಲಾವಣೆಯಾಗಬಹುದು.

– ದೇಶದ ಗಡಿಯನ್ನು ಮುಕ್ತವಾಗಿರಿಸಿಕೊಳ್ಳುವ ಬಗ್ಗೆಯೂ ಮರುಚಿಂತನೆಯ ಸಾಧ್ಯತೆಯಿದೆ. ಹಿಂದೆಲ್ಲ ಯುದ್ಧದ ಕಾಲದಲ್ಲಿ ಮಾತ್ರ ಗಡಿಮುಚ್ಚಲಾಗುತ್ತಿತ್ತು.

– ದೇಶೀಯವಾಗಿ ಹೆಚ್ಚು ಪಿಪಿಇ ಕಿಟ್‌ ಹಾಗೂ ಅಗತ್ಯ ಔಷಧ ಉತ್ಪಾದನೆ ಬಗ್ಗೆ ಸರಕಾರ ಚಿಂತಿಸಬಹುದು. ಆರೋಗ್ಯ ಕ್ಷೇತ್ರದ ಸ್ವಾವಲಂಬನೆಯ ಅಗತ್ಯದ ಕುರಿತು ಪಾಠ ಕಲಿಸಿದೆ.

– ವಲಸೆ ನೀತಿಯಲ್ಲೂ ಬದಲಾವಣೆಯ ನಿರೀಕ್ಷೆಯಿದೆ. ವಿದೇಶಿ ಉದ್ಯೋಗದ ಆಸೆಗೆ ಕಡಿವಾಣ ಬಿದ್ದೀತು. ಜನರು ತಮ್ಮ ದೇಶದ ಸುರಕ್ಷೆಯನ್ನೂ ಗಮನದಲ್ಲಿಟ್ಟುಕೊಂಡಾರು.

– ನಿರುದ್ಯೋಗ ಪ್ರಮಾಣ ಏರಿಕೆಯಾದೀತು ಹಾಗೂ ಜನರ ಆರ್ಥಿಕ ಶಕ್ತಿ ಕಡಿಮೆಯಾಗ ಬಹುದು. ಇದು ನೇರವಾಗಿ ಮತ್ತು ಪರೋಕ್ಷವಾಗಿ ಹಲವು ಬದಲಾವಣೆಗೆ ಕಾರಣವಾದೀತು.

– ಸಾಂಕ್ರಾಮಿಕ ರೋಗಗಳು, ರೋಗನಿರೋಧಕ ಶಕ್ತಿ ವೃದ್ಧಿ, ಪರಮಾಣು ಪ್ರಸರಣ ಇತ್ಯಾದಿ ಕುರಿತು ಜನರಲ್ಲಿ ಹೆಚ್ಚಿನ ಕಾಳಜಿ ಮೂಡಬಹುದು.

– ಕಂಪೆನಿಗಳು ವೆಚ್ಚ ಕಡಿತ ಮಾಡಲು ಆಲೋಚಿಸುತ್ತವೆ. ಅದು ಹೊಸ ರೀತಿಯ ಕಾರ್ಯ ಶೈಲಿಗೆ ಕಾರಣವಾದೀತು. ಮನೆಯಿಂದಲೇ ಕೆಲಸ ಎಂಬುದಕ್ಕೆ ಹೆಚ್ಚು ಮನ್ನಣೆ ಸಿಗಬಹುದು. ಸಾಲಗಳು ದುಬಾರಿಯಾದೀತು.

– ಅನೇಕ ಸರಕು ಹಾಗೂ ಸೇವೆಗಳು ದುಬಾರಿಯಾದೀತು. ಈಗ ಅಗತ್ಯ ಎಂದುಕೊಂಡಂಥವು ಮುಂದೆ ವಿಲಾಸಿ ಸಾಲಿಗೆ ಸೇರಬಹುದು. ವ್ಯಾಪಾರ-ವ್ಯವಹಾರದಲ್ಲಿ ಹಿಂದಿನ ವೈಭವ ಮರುಕಳಿ ಸಲು ದೀರ್ಘ‌ ಕಾಲ ಬೇಕಾದೀತು.

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.