ಬುರ್ಜ್ ಖಲೀಫಾದ ಒಂದು ದೀಪ ಖರೀದಿಸಿ ಬಡವರಿಗೆ ಊಟ ಒದಗಿಸಲು ನೆರವಾಗಿ!
Team Udayavani, May 5, 2020, 7:47 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಿಶ್ವದ ಅತಿ ಎತ್ತರದ ಕಟ್ಟಡ ‘ಬುರ್ಜ್ ಖಲೀಫಾ’ ಕೋವಿಡ್ 19 ಸೋಂಕು ಬಾಧಿತರಿಗೆ ನೆರವು ನೀಡಲು ಇದೀಗ ಮುಂದೆ ಬಂದಿದೆ.
ಸುಮಾರು ಒಂದು ಕೋಟಿ ಮಂದಿ ಬಡವರಿಗೆ ಊಟ ಪೂರೈಸುವ ಅಭಿಯಾನವನ್ನು ಇದು ಪ್ರಾರಂಭಿಸಿದ್ದು ಬುರ್ಜ್ ಖಲೀಫಾ ಕೈಗೊಂಡಿರುವ ಈ ಅಭಿಯಾನ ವಿನೂತನವಾಗಿದ್ದು, ನಾವು, ನೀವೂ ಸಹ ಇದರಲ್ಲಿ ಭಾಗಿಗಳಾಗಬಹುದಾಗಿದೆ.
ಅದು ಹೇಗೆಂದರೆ, ತನ್ನ ಕಟ್ಟಡದಲ್ಲಿರುವ ಅಷ್ಟೂ ಲೈಟ್‌ಗಳನ್ನು ಆನ್ ಲೈನ್ ಮೂಲಕ ಹರಾಜು ಹಾಕಲಿರುವ ಬುರ್ಜ್ ಖಲೀಪಾ, ಈ ಲೈಟ್ ಗಳನ್ನು ಖರೀದಿಸಿ ದೇಣಿಗೆ ನೀಡುವಂತೆ ಜನರಲ್ಲಿ ಮನವಿಯನ್ನು ಮಾಡಿಕೊಂಡಿದೆ. ಈ ಕಟ್ಟಡದಲ್ಲಿ ಒಟ್ಟು 1.2 ಮಿಲಿಯನ್ ದೀಪಗಳಿವೆ.
ಒಂದು ಲೈಟ್‌ಗೆ 10 ದಿರ್ ಹಮ್ (206 ರೂ.) ನಿಗದಿಪಡಿಸಲಾಗಿದ್ದು, ಈ ಮೂಲಕ ಸಂಗ್ರಹವಾಗುವ ಒಟ್ಟು ಮೊತ್ತದಲ್ಲಿ 1 ಕೋಟಿ ಮಂದಿಗೆ ಊಟ ಒದಗಿಸುವ ಯೋಜನೆ ಇದಾಗಿದೆ. 24 ಗಂಟೆಗಳ ಅವಧಿಯಲ್ಲಿ ಸಂಗ್ರಹವಾದ ಹಣದಲ್ಲಿ ಒಟ್ಟು 1.76 ಲಕ್ಷ ಮಂದಿಗೆ ಆಹಾರ ಪೂರೈಸಲಾಗಿದೆ.
ಆದರೆ, ಇಲ್ಲೊಂದು ವಿಶೇಷತೆಯಿದ್ದು ಇದು ಸಾಂಕೇತಿಕ ಹರಾಜು ಮಾತ್ರವೇ ಆಗಿರುತ್ತದೆ. ನೀವು ಆನ್ ಲೈನ್ ಮೂಲಕ ಲೈಟ್ ಖರೀದಿಸಿದ ತಕ್ಷಣ ನಿಮಗೇನೂ ಬುರ್ಜ್ ಖಲೀಫಾದ ಲೈಟ್ ಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ.
ಆದರೆ ತನ್ನಲ್ಲಿರುವ ಅಷ್ಟೂ ಲೈಟ್ ಗಳನ್ನು ಸಾಂಕೇತಿಕವಾಗಿ ಹರಾಜು ಹಾಕುವ ಮೂಲಕ ಮತ್ತು ಆ ಮೂಲಕ ಸಂಗ್ರಹವಾಗುವ ದೇಣಿಗೆ ಮೊತ್ತವನ್ನು ಕೋಟಿ ಹೊಟ್ಟೆಗಳ ಹಸಿವನ್ನು ನೀಗಿಸಲು ವಿನಿಯೋಗಿಸುತ್ತಿರುವ ವಿಧಾನ ಮಾತ್ರ ವಿನೂತನವೂ ಪ್ರಶಂಸನೀಯವೂ ಆಗಿದೆ.
ಹಾಗಾಗಿ ನಾವೂ ಬುರ್ಜ್ ಖಲೀಫಾದ ದೀಪಗಳನ್ನು ಸಾಂಕೇತಿಕವಾಗಿ ಖರೀದಿಸಿದರೆ ಈ ಅಭಿಯಾನಕ್ಕೆ ಬೆಂಬಲ ನೀಡಿದಂತಾಗುತ್ತದೆ ಮತ್ತು ನೀವು ಒಂದು ದೀಪವನ್ನು ಸಾಂಕೇತಿಕವಾಗಿ ಖರೀದಿಸಿದಲ್ಲಿ ಆ ಹಣದಿಂದ ಒಬ್ಬರ ಹಸಿವು ನೀಗಿಸಿದ ಪುಣ್ಯ ನಮ್ಮದಾಗುವುದು.
ಈ ಅಭಿಯಾನ ಪ್ರಾರಂಭಗೊಂಡಿರುವ ಕೇವಲ 24 ಗಂಟೆಗಳೊಗಾಗಿ 18 ಮಹಡಿಗಳಿರುವ ಈ ವಿಶ್ವ ವಿಖ್ಯಾತ ಕಟ್ಟಡದ 18 ಸಾವಿರ ದೀಪಗಳ ಸಾಂಕೇತಿಕ ಖರೀದಿ ಪ್ರಕ್ರಿಯೆ ನಡೆದಿದೆ. ರವಿವಾರ ಸಂಗ್ರಹವಾದ ದೇಣಿಗೆ ಮೊತ್ತವನ್ನು ಯು.ಎ.ಇ.ಯಲ್ಲಿ ಕೋವಿಡ್ 19 ವೈರಸ್ ಬಾಧಿತರಿಗೆ ಒಟ್ಟು 180,000 ಊಟಗಳನ್ನು ನೀಡಲು ವಿನಿಯೋಗಿಸಲಾಗುವುದು ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.