ತುಳು ಲಿಪಿ ಕಲಿಕೆಯತ್ತ ಕರಾವಳಿ ಜನರ ಚಿತ್ತ
ಲಾಕ್‌ಡೌನ್ ಸಮಯ ಸದ್ಬಳಕೆ ;ಸೋಶಿಯಲ್ ನೆಟ್‌ವರ್ಕ್ ಸಹಾಯ
Team Udayavani, May 6, 2020, 6:27 AM IST
ಉಡುಪಿ: ಲಾಕ್‌ಡೌನ್‌ನಿಂದ ಸದ್ಯ ಜನತೆ ಮನೆಯಲ್ಲೇ ಇದ್ದು ಆಫೀಸು ಕೆಲಸ ಬಳಿಕ ಟಿ.ವಿ., ಮೊಬೈಲ್ ಇತ್ಯಾದಿಗಳಲ್ಲಿ ಸಮಯ ಕಳೆದರೆ, ಉಡುಪಿ- ಮಂಗಳೂರು ಜನ ತುಳು ಭಾಷೆಯ ಕಲಿಕೆ ಮೂಲಕ ಈ ಲಾಕ್‌ಡೌನ್‌ನ ಸಮಯದ ಸದ್ಬಳಕೆ, ಭಾಷಾಭಿಮಾನದ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ ಸೋಶಿಯಲ್ ನೆಟ್‌ವರ್ಕ್ ಗಳಲ್ಲೂ ತುಳು ಅಕ್ಷರಗಳನ್ನು ಕಲಿಸುವ ಕಾರ್ಯ ನಡೆಯುತ್ತಿದ್ದು, ಫೇಸ್‌ಬುಕ್‌ಗಳಲ್ಲಿ ತುಳು ಪೇಜ್‌ಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿವೆ.
ಕಲಿಕೆಗೆ ಪ್ರೇರಣೆ
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌ನ ಫೇಸ್‌ಬುಕ್‌ಗಳಲ್ಲಿ ತುಳು ಲಿಪಿ ಕಲಿಕೆ ನೋಟ್ಸ್, ಪಿಡಿಎಫ್, ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಜನರನ್ನು ಭಾಷಾಭ್ಯಾಸಕ್ಕೆ ಹುರಿದುಂಬಿಸಲಾಗುತ್ತಿದೆ. ಆನ್‌ಲೈನ್ ತುಳುಲಿಪಿ, ಟ್ವಿಟ್ ತುಳುನಾಡು, ಜೈ ತುಳುನಾಡು ಸಹಿತ ಅನೇಕ ವಾಟ್ಸಾಪ್‌ಗ್ರೂಪ್ ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಜನರು ತಮ್ಮ ತಮ್ಮಲ್ಲೇ ಕಲಿಕ ವಾಟ್ಸಾಪ್ ಗ್ರೂಪ್ ಗಳನ್ನು ಮಾಡಿ ತುಳು ಲಿಪಿ ಕಲಿಕೆಯಲ್ಲಿ ನಿರತರಾಗುತ್ತಿದ್ದಾರೆ. ಹಾಗೇ ಫೇಸ್‌ಬುಕ್ ತುಳುನಾಡ ಪೇಜ್ ಗಳು ಜನರು ಸಂಶಯ ಗಳಿಗೆ ಪ್ರತಿಕ್ರಿಯಿಸಿ, ಅಕ್ಷರ ಕಲಿಸುವ, ಹೆಸರು, ಊರಿನ ಹೆಸರು, ದೇವಸ್ಥಾನಗಳ ಹೆಸರು, ಶುಭಾಶಯಗಳನ್ನು ತಿಳಿಸುವ ಬಗ್ಗೆ ತುಳು ಲಿಪಿಯಲ್ಲಿ ಬರೆದು ಪಿಎನ್‌ಜಿ ಫಾಮ್ಯಾಟ್ ಮೂಲಕ ಜನರಿಗೆ ನೀಡುತ್ತಿದೆ.
ಹೊರರಾಜ್ಯವರಲ್ಲೂ ಆಸಕ್ತಿ
ಹೊರ ರಾಜ್ಯದಲ್ಲಿರುವ ಮಂದಿಯೂ ತುಳು ಲಿಪಿಯನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದು, ತಾಯಿ ನಾಡಿನ ಭಾಷೆಯನ್ನು ಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಆಸಕ್ತಿ ಹೆಚ್ಚಾಗುತ್ತಿದೆ
ಕಳೆದ ಒಂದು ತಿಂಗಳಿಂದ ಗೂಗಲ್, ಸಾಮಾಜಿಕ ಜಾಲತಾಣಗಳಲ್ಲಿ ತುಳು ಅಕ್ಷರವನ್ನು ಕಲಿಯುತ್ತಿದ್ದು, ಸದ್ಯ ವಾಕ್ಯಗಳನ್ನು ಬರೆಯಲು ಕಲಿತಿದ್ದೇನೆ. ಅನೇಕ ಮಂದಿ ಸಲಹೆ ಕೇಳುತ್ತಿದ್ದಾರೆ. ತುಳು ಲಿಪಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತಿದೆ ಎಂದು ಗೋವಾದಲ್ಲಿರುವ ಮಂಗಳೂರಿನ ಮೂಲದ ಅಭಯಚಂದ್ರ ಹೇಳುತ್ತಾರೆ.
ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ
ಲಾಕ್‌ಡೌನ್‌ನಿಂದ ವಿವಿಧ ಸಂಘಟನೆಗಳು ನಡೆಸಬೇಕಿದ್ದ ಕಾರ್ಯಾಗಾರಗಳಿಗೆ ತಡೆಯಾಗಿದ್ದು, ಮುಂದಿನ ದಿನಗಳಲ್ಲಿ ಉಡುಪಿ ಸೇರಿದಂತೆ ಮಂಗಳೂರು ಭಾಗದ ವಿವಿಧ ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ ಇದೆ. 30 ಪ್ರೊಫೆಶನಲ್ ಶಿಕ್ಷಕರು ತಯಾರಾಗಿದ್ದಾರೆ. ತುಳು ಅಕಾಡೆಮಿಯಿಂದಲೂ ಪ್ರೋತ್ಸಾಹ ಸಿಕ್ಕಿದೆ. ಉಡುಪಿ ಶಾಸಕರು ಕೂಡ ತುಳು ಕಲಿಕೆಗೆ ಪೋತ್ಸಾಹ ನೀಡುತ್ತಿದ್ದಾರೆ.
-ಶರತ್ ಕೊಡವೂರು, ಕಿರಣ್ ತುಳುವೆ, ಸದಾಶಿವ ಮುದ್ರಾಡಿ,
ತುಳು ಲಿಪಿ ಪ್ರಚಾರಕರು, ಜೈ ತುಳುನಾಡು ಪಡುಕೆರೆ
ತುಳು ಲಿಪಿ ಕಲಿಯುವ ಆಸಕ್ತಿ
ತುಳು ಪುಸ್ತಕ ನೋಡಿ ತುಳು ಲಿಪಿಯನ್ನು ಕಲಿತಿದ್ದೇವೆ. ಲಿಪಿ ಕಲಿಕೆಗೆ ನಿರಂತರ ಅಭ್ಯಾಸ ಬೇಕು. ಉಡುಪಿ ಭಾಗದಲ್ಲಿ ಅನೇಕರು ತುಳು ಲಿಪಿ ಕಲಿಯುವ ಆಸಕ್ತಿ ತೋರುತ್ತಿದ್ದಾರೆ. ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಲ್ಲಿ ಅನೇಕರು ನಮ್ಮಲ್ಲಿ ತುಳು ಬರಹದ ಬಗ್ಗೆ, ಹೆಸರುಗಳನ್ನು ಬರೆಯುವ ಬಗ್ಗೆ ವಿಚಾರಿಸುತ್ತಿದ್ದಾರೆ.
-ವಿಷ್ಣುಮೂರ್ತಿ, ಉಡುಪಿ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.