ಕೊಡಗು: ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭ
Team Udayavani, May 6, 2020, 6:40 AM IST
ಸಾಂದರ್ಭಿಕ ಚಿತ್ರ.
ಮಡಿಕೇರಿ: ಕೊಡಗು ಜಿಲ್ಲೆಯೊಳಗೆ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಹಸುರು ನಿಶಾನೆ ನೀಡಿದ್ದರೂ ಮೇ 18ರ ವರೆಗೆ ಖಾಸಗಿ ಬಸ್‌ಗಳು ಸಂಚರಿಸುವುದಿಲ್ಲ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬುಧವಾರದಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ಸಂಚರಿಸಲಿವೆ.
ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದರೂ ಶೇ. 50ರಷ್ಟು ಪ್ರಯಾಣಿಕರನ್ನು ಕರೆದೊಯ್ಯುವ ನಿಯಮದಿಂದಾಗಿ ನಷ್ಟ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಓಡಿಸದೇ ಇರಲು ಜಿಲ್ಲಾ ಖಾಸಗಿ ಬಸ್ ಮಾಲಕರು ನಿರ್ಧರಿಸಿದ್ದಾರೆ ಎಂದು ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ತಿಳಿಸಿದ್ದಾರೆ.
ಬುಧವಾರದಿಂದ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಜಿಲ್ಲೆಯೊಳಗೆ ಮಾತ್ರ ಬಸ್ ಸಂಚಾರ ಇರುತ್ತದೆ ಎಂದು ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಎಚ್. ಗೀತಾ ಹೇಳಿದ್ದಾರೆ.
ಮಡಿಕೇರಿ – ಕುಶಾಲನಗರ,ಮಡಿಕೇರಿ – ಗೋಣಿಕೊಪ್ಪ, ಮಡಿಕೇರಿ – ವೀರಾಜಪೇಟೆ, ಮಡಿಕೇರಿ -ಕೊಡ್ಲಿಪೇಟೆ, ಮಡಿಕೇರಿ – ಸೋಮವಾರಪೇಟೆಗಳಿಗೆ ಸರಕಾರಿ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಬೇಡಿಕೆ ಇದ್ದಲ್ಲಿ ಕುಶಾಲನಗರ -ಕೂಡಿಗೆ – ಶಿರಂಗಾಲದ ನಡುವೆಸರಕಾರಿ ಬಸ್ ಸಂಚಾರ ಕಲ್ಪಿಸಲಾ ಗುವುದು ಎಂದಿದ್ದಾರೆ.
ದರ ಹೆಚ್ಚಳವಿಲ್ಲ
ಬಸ್‌ನಲ್ಲಿ ಒಟ್ಟು ಸೀಟ್‌ಗಳ ಶೇ.50ರಷ್ಟು ಸೀಟ್‌ಗಳಲ್ಲಿ ಮಾತ್ರ ಪ್ರಯಾಣಿಕರು ಸಂಚರಿಸಬಹುದಾಗಿದೆ. ಆದರೆ ಪ್ರಯಾಣ ದರದಲ್ಲಿ ಹೆಚ್ಚಳವಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.