ಗ್ರಾ.ಪಂ.ಗೆ 2,226 ರೈತ ಮಿತ್ರರ ನೇಮಕ
ಮಂಗಳೂರು: ಅಧಿಕಾರಿಗಳ ಜತೆ ಸಭೆಯಲ್ಲಿ ಸಚಿವ ಬಿ.ಸಿ. ಪಾಟೀಲ್
Team Udayavani, May 6, 2020, 6:10 AM IST
ಮಂಗಳೂರು: ರಾಜ್ಯದ ಪ್ರತೀ 2 ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಕರಿಗೆ ಒಬ್ಬರಂತೆ ಮಾಹಿತಿ, ಸಲಹೆ ನೀಡಲು ಒಟ್ಟು 2,226 ರೈತ ಮಿತ್ರರ ನೇಮಿಸಲು ಉದ್ದೇಶಿಸಿದ್ದು, ಸದ್ಯದಲ್ಲೇ ಅವರನ್ನು ನಿಯುಕ್ತಿ ಗೊಳಿಸಲಾಗುವುದು. ಕಿಸಾನ್ ಕಾರ್ಡ್ ಅನ್ನು ಮತ್ತಷ್ಟು ಲಾಭ ದಾಯಕ ವನ್ನಾಗಿಸುಲು ಉದ್ದೇಶಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ದ.ಕ. ಕೃಷಿ, ತೋಟಗಾರಿಕೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಕೃಷಿಕರ ಸಮಸ್ಯೆ, ಸವಾಲುಗಳ ಬಗ್ಗೆ ಅಧಿಕಾರಿಗಳ ಜತೆಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿ ಅವರು ಮಾತನಾಡಿದರು.
ರಾಜ್ಯದ 747 ರೈತ ಸಂಪರ್ಕ ಕೇಂದ್ರಗಳಲ್ಲಿ ಮೊಬೈಲ್ ಹೆಲ್ಪ್ ಕ್ಲಿನಿಕ್ ಆರಂಭಿಸಲು ಚಿಂತಿಸ ಲಾಗಿದೆ. ಇದರಲ್ಲಿ ಬೆಳೆ ಅಥವಾ ಮಣ್ಣು ಟೆಸ್ಟಿಂಗ್ ನಡೆಸಲಾಗುತ್ತಿದೆ. ಕೃಷಿಕ ರಿಗೆ ಕಟಾವು ಯಂತ್ರಗಳನ್ನು ಸಬ್ಸಿಡಿ ಆಧಾರ ದಲ್ಲಿ ನೀಡಲಾಗುತ್ತಿದೆ. ಸಹಕಾರಿ ತತ್ತ್ವದಡಿ ಇದನ್ನು ಪಡೆಯುವ ಬಗ್ಗೆಯೂ ಸರಕಾರ ಶೀಘ್ರ ತೀರ್ಮಾನಿಸಲಿದೆ. ರಾಜ್ಯದ 29 ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಿ ರೈತರ ಸಮಸ್ಯೆ, ಸಲಹೆಗಳನ್ನು ಪಟ್ಟಿ ಮಾಡಿ ಮುಂದಿನ 10 ದಿನದೊಳಗೆ ಮುಖ್ಯಮಂತ್ರಿ ಗಳಿಗೆ ನೀಡಲಾಗುವುದು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಮಾತ ನಾಡಿ, ದ.ಕ. ಜಿಲ್ಲೆಯಲ್ಲಿ ಕೃಷಿ ಮಾಡದೆ ಖಾಲಿಬಿಟ್ಟಿರುವ ಬರಡು ಭೂಮಿ ಎಷ್ಟಿದೆ, ಅದನ್ನು ಕೃಷಿ ಮಾಡಲು ಬೇರೆ ಯವ ರಿಗೆ ನೀಡಲು ಸಾಧ್ಯವೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಕೋವಿಡ್-19 ಕಾರಣದಿಂದಾಗಿ ಕೆಲವರು ಕೆಲಸ ವಿಲ್ಲದೆ ಕೃಷಿಯತ್ತ ಮನಸ್ಸು ಮಾಡಿದ್ದಾರೆ. ಅವರಿಗೆ ನೆರವಾಗಲು ಕೃಷಿ ಇಲಾಖೆ ಆಸಕ್ತಿ ತೋರಬೇಕು ಎಂದರು.
ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡ ಬೇಕು. ಕೆಲವು ಯೋಜನೆಗಳು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರ ಸಿಗುತ್ತಿದೆ. ಇದಕ್ಕೆ ಕಡಿವಾಣ ಅಗತ್ಯ ಎಂದರು. ಶಾಸಕರಾದ ಡಾ| ಭರತ್ ಶೆಟ್ಟಿ ವೈ., ಹರೀಶ್ ಪೂಂಜ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಡಿಸಿ ಸಿಂಧೂ ಬಿ. ರೂಪೇಶ್, ಸಿಇಒ ಡಾ| ಸೆಲ್ವಮಣಿ, ಕೃಷಿ ಜಂಟಿ ನಿರ್ದೇಶಕಿ ಸೀತಾ ಉಪಸ್ಥಿತರಿದ್ದರು.
ಬರಡು ಭೂಮಿಯ ಬಗ್ಗೆ ಸರ್ವೆ
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಜಿಲ್ಲೆ ಯಲ್ಲಿ ಕೃಷಿ, ಬರಡು ಭೂಮಿ ಎಷ್ಟಿದೆ ಎಂಬ ಬಗ್ಗೆ ಸಂಪೂರ್ಣ ಸರ್ವೆ ನಡೆಸಬೇಕು. ಯಂತ್ರೋಪಕರಣಗಳು ರೈತರಿಗೆ ಸಮರ್ಪಕವಾಗಿ ಸಿಗುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಮೈಲುತುತ್ತು, ಸುಣ್ಣ ನಿಗದಿತ ದರ ದಲ್ಲಿ ಸಿಗುತ್ತಿದೆಯೇ ಎಂಬ ಬಗ್ಗೆ ಇಲಾಖೆ ಪರಿಶೀಲಿಸ ಬೇಕು ಎಂದರು.
ತಾಲೂಕಿಗೊಂದು
ಕೋಲ್ಡ್ ಸ್ಟೋರೇಜ್
ಲಾಕ್‌ಡೌನ್ ಅವಧಿಯಲ್ಲಿ ಕೃಷಿ ಪೂರಕ ಚಟುವಟಿಕೆಗಳನ್ನು ನಡೆಸಲು, ಸಾಗಾಟಕ್ಕೆ ಯಾವುದೇ ಸಮಸ್ಯೆ ಆಗಬಾರದು. ಈ ಬಗ್ಗೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಬೀಜ, ರಸಗೊಬ್ಬರದ ಕೊರತೆ ಇಲ್ಲ. ದ.ಕ. ಜಿಲ್ಲೆಯಲ್ಲಿ ಕೃಷಿ ಯಂತ್ರಗಳು ಸಮರ್ಪಕವಾಗಿ ರೈತರಿಗೆ ಸಿಗುತ್ತಿಲ್ಲ ಎಂಬ ಅಪವಾದವಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ವಿಶೇಷ ನಿಗಾ ವಹಿಸ ಬೇಕು. ಯಂತ್ರಧಾರೆ ಯೋಜನೆ ಎಲ್ಲ ರೈತರಿಗೂ ಸಿಗಬೇಕಿದೆ. ಪ್ರತೀ ತಾಲೂಕಿಗೆ ಒಂದು ಕೋಲ್ಡ್ ಸ್ಟೋರೇಜ್ ಆರಂಭಿಸುವ ಬಗ್ಗೆ ಚಿಂತನೆಯಿದೆ ಎಂದು ಬಿ.ಸಿ. ಪಾಟೀಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ
Winter session: ವರ್ಷದ ಕೊನೆಯ ಸಂಸತ್ ಅಧಿವೇಶನ ಫಲಪ್ರದವಾಗಲಿ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.