ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ
Team Udayavani, May 6, 2020, 6:13 AM IST
ಮಂಗಳೂರು/ಉಡುಪಿ: ಕೋವಿಡ್-19ದಿಂದಾಗಿ ವಿದೇಶಗಳಲ್ಲಿ ಸಮಸ್ಯೆಗೆ ಸಿಲುಕಿರುವ ಕರಾವಳಿಗರನ್ನು ತವರಿಗೆ ಕರೆತರುವ ಪ್ರಕ್ರಿಯೆ ಆರಂಭವಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಈ ಸಂಬಂಧ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ದೇಶನ ನೀಡಿದ್ದು, ಬರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದೆ. ಏರ್‌ಪೋರ್ಟ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್, ಕ್ವಾರಂಟೈನ್‌ಗಾಗಿ ಮಂಗಳೂರು, ಉಡುಪಿಯ ಹೊಟೇಲ್, ವಸತಿಗೃಹಗಳನ್ನು ನಿಗದಿಪಡಿಸಲಾಗುತ್ತಿದೆ.
ಮೂಲಗಳ ಪ್ರಕಾರ ಮೇ 13ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ಬರುವ ಸಾಧ್ಯತೆಯಿದೆ. ಸೌದಿ ಅರೇಬಿಯಾ, ಕತಾರ್, ಯುಎಇ, ಅಮೆರಿಕ, ಕೆನಡಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರನ್ನು ವಿಮಾನ ನಿಲ್ದಾಣದಲ್ಲೇ ತಪಾಸಣೆಗೆ ಒಳಪಡಿಸಲಾ ಗುತ್ತದೆ. ಸೋಂಕು ಲಕ್ಷಣವಿದ್ದರೆ ಅಥವಾ ಬೇರೆ ಅನಾರೋಗ್ಯ ಸಮಸ್ಯೆಗಳಿದ್ದರೆ ಕ್ವಾರಂಟೈನ್ ಕಡ್ಡಾಯ. ಈ ಅವಧಿಯಲ್ಲಿ ನೆಗೆಟಿವ್ ಆದರೆ ಮಾತ್ರ ಮನೆಗೆ ಹೋಗಬಹುದು.
ಕ್ವಾರಂಟೈನ್ ಸೌಲಭ್ಯಕ್ಕೆ ಮಂಗಳೂರಿನ ಹೊಟೇಲ್, ವಸತಿ ನಿಲಯ, ಸಂಸ್ಥೆಗಳೊಂದಿಗೆ ಜಿಲ್ಲಾಡಳಿತ ಮಂಗಳವಾರ ಸಭೆ ನಡೆಸಿತು. ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಪ್ರತೀ ಕ್ವಾರಂಟೈನ್ ಕೇಂದ್ರಕ್ಕೆ ನೋಡಲ್ ಅ ಧಿಕಾರಿಯನ್ನು ನೇಮಿಸಲಾಗುವುದು. ವಸತಿ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು ಎಂದರು.
ಸಭೆಯಲ್ಲಿ ಮಹಾನಗರಪಾಲಿಕೆ ಪರಿಸರ ಅಭಿಯಂತರ ಮಧು, ವಿವಿಧ ಲಾಡ್ಜ್ಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಉಡುಪಿಯಲ್ಲೂ ಸಿದ್ಧತಾ ಸಭೆ ನಡೆದಿದ್ದು, ಪರೀಕ್ಷೆ, ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ಚರ್ಚಿಸಲಾಯಿತು. ಪ್ರಯಾ ಣಿಕರು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಲಾಡ್ಜ್ ಆಯ್ದು ಕೊಳ್ಳಬಹುದು. ವೆಚ್ಚ ಭರಿಸುವುದು ಕಷ್ಟವಾದರೆ ಹಾಸ್ಟೆಲ್‌ಗಳಲ್ಲಿ ಇರಬಹುದು. ಊಟದ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಕೆಲವರು ಹಡಗಿನ ಮೂಲಕವೂ ಆಗಮಿಸುವ ಕಾರಣ ಕಾರವಾರ ಬಂದರಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಇತರ ಬಂದರಿಗೆ ಆಗಮಿಸಿ ಬಳಿಕ ರಸ್ತೆ ಮೂಲಕ ರಾಜ್ಯಕ್ಕೆ ಬರುವವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲು ಸರಕಾರ ನಿರ್ಧರಿಸಿದೆ.
ವಿದೇಶದಿಂದ ಆಗಮಿಸುವವರ ಕ್ವಾರಂಟೈನ್‌ಗಾಗಿ ಎಲ್ಲ ಸಿದ್ಧತೆ ನಡೆಸಲಾಗಿದೆ. ಸುಮಾರು 4 ಸಾವಿರ ಮಂದಿ ಬರುವ ಸಾಧ್ಯತೆಯಿದೆ.
– ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ, ದ.ಕ.
ಉಡುಪಿ ಜಿಲ್ಲೆಗೆ ಎಷ್ಟು ಜನರು ಬರಬಹುದು ಎಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಬರುವವರಿಗೆ ಬೇಕಾದ ವ್ಯವಸ್ಥೆ ರೂಪಿಸಲು ಜಿಲ್ಲೆ ಸಜ್ಜಾಗಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.