ಮಾಮಿ ಜೀನ್ಸ್ ಮ್ಯಾಜಿಕ್ !
Team Udayavani, May 6, 2020, 8:56 AM IST
90ರ ದಶಕದ ಸಡಿಲವಾದ, ದೊಡ್ಡ ಗಾತ್ರದ, ಫಿಟ್ಟಿಂಗ್ ಇಲ್ಲದ ಪ್ಯಾಂಟ್‌ಗಳಿಂದ ಪ್ರೇರಣೆ ಪಡೆದು ತಯಾರಿಸಲಾದ ಜೀನ್ಸ್ ಗಳಿವು. ಧರಿಸಲು ಆರಾಮ ಎಂಬ ಕಾರಣಕ್ಕೆ, ತಾಯಂದಿರು ಹೆಚ್ಚು ಇಷ್ಟಪಡುತ್ತಿದ್ದ ಈ ಜೀನ್ಸ್, ಈಗ ಮತ್ತೆ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡುತ್ತಿದೆ.
ಹೈ ವೇನ್ಸ್ ಜೀನ್ಸ್ ಟ್ರೆಂಡ್ ಮರೆಯಾಗಿ, ಲೋ ವೇಸ್ಟ್ ಜೀನ್ಸ್ ಬಂತು. ನಂತರ, ಹೈ ವೇಸ್ಟ್ ಜೀನ್ಸ್ ಕಮ್ ಬ್ಯಾಕ್ ಮಾಡಿತು. ಹಾಗೆ ಮರಳಿ ಬಂದ ಈ ಜೀನ್ಸ್, ನಾನಾ ರೂಪಗಳನ್ನು
ಪಡೆಯಿತು. ಬೆಲ್ ಬಾಟಮ್ ಜೀನ್ಸ್, ಬೂಟ್ ಕಟ್ ಜೀನ್ಸ್ ಸೇರಿದಂತೆ, ಇತರ ಎಲ್ಲ ಹೈ ವೇಸ್ಟ್ ಜೀನ್ಸ್ ಪ್ಯಾಂಟ್‌ಗಳನ್ನು ಈಗ ಮತ್ತೆ ತೊಡಬಹುದು! ಅದರಲ್ಲೂ ಹೈ
ವೇಸ್ಟ್ ಉಳ್ಳ, ಬಹಳ ಸಡಿಲವಾದ, ದೊಡ್ಡ ಗಾತ್ರದ, ಡೆನಿಮ್ ಪ್ಯಾಂಟ್‌ಗಳ ಕಾಲ ಈಗ. ಇಂಥ ಡೆನಿಮ್ ಪ್ಯಾಂಟ್‌ಗಳನ್ನು, ಮಾಮಿ ಜೀನ್ಸ್ ಎಂದು ಕರೆಯಲಾಗುತ್ತದೆ.
ಏಕೆಂದರೆ, ಇವು ಸ್ಟೈಲ್‌ಗಿಂತ ಆರಾಮಕ್ಕೆ ಪ್ರಾಮುಖ್ಯತೆ ನೀಡುತ್ತವೆ.
ಬೋರಿಂಗ್ ಏನಲ್ಲ… ಹಾಗಂತ, ಈ ಮಾಮಿ ಜೀನ್ಸ್, ನೋಡಲು ಬೋರಿಂಗ್ ಅಥವಾ ಕಮ್ಮಿ ಸ್ಟೈಲಿಶ್ ಆಗಿಲ್ಲ. ಇವುಗಳಲ್ಲೂ ರಿಫ್ದ್ ಜೀನ್ಸ್, ಡಿಸ್ಟ್ರೆಸ್ಡ್ ಜೀನ್ಸ್, ಆ್ಯಸಿಡ್ ವಾಶ್ ಡೆನಿಮ…,
ಕಾರ್ಗೋ, ಮಿಲಿಟರಿ ಪ್ರಿಂಟ್, ಶ್ರೇಡೆಡ್ ಜೀನ್ಸ್ ಮಲ್ಟಿ ಪಾಕೆಟ್, ಬ್ಯಾಗಿ ಮುಂತಾದ ಆಯ್ಕೆಗಳಿವೆ. ನೀ ಲೆಂಥ್, ತ್ರೀ ಫೋರ್ಥ್, ಆಂಕಲ್ ಲೆಂಥ್, ಜೆಗಿಂಗ್ಸ್, ಶಾರ್ಟ್ಸ್, ಮುಂತಾದ ಪ್ರಕಾರಗಳೂ ಇವೆ. ಅಲ್ಲದೆ, ಇವು ಕೇವಲ ನೀಲಿ ಬಣ್ಣದಲ್ಲಷ್ಟೇ ಅಲ್ಲ, ಹಳದಿ, ಕೆಂಪು, ಹಸಿರು, ಹಾಗೂ ಇತರ ಬಣ್ಣಗಳಲ್ಲೂ ಲಭ್ಯವಿವೆ. ಜೀನ್ಸ್ ನಲ್ಲೂ ಚೆಕ್ಸ್ (ಅಂದರೆ ಚೌಕಾಕಾರ), ಚುಕ್ಕಿಗಳು, ಹೂವಿನ ಆಕೃತಿಯ ಮುದ್ರೆಗಳು, ಎಂಬ್ರಾಯxರಿ ಮುಂತಾದ ಆಯ್ಕೆಗಳಿವೆ. ಚಿನೊಸ್ ಹೆಸರಿನಲ್ಲಿ, ಬಣ್ಣಬಣ್ಣದ ಜೀನ್ಸ್ ಪ್ಯಾಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯ.
ಮನೆಯಲ್ಲೂ ತೊಡಬಹುದು
ಲಾಕ್‌ಡೌನ್‌ನ ಈ ಸಮಯದಲ್ಲಿ, ಬಹುತೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅವರೆಲ್ಲಾ ಈಗ ಮಾಮಿ ಜೀನ್ಸ್ ಮೊರೆ ಹೋಗಿದ್ದಾರೆ.
ಕಂಫರ್ಟ್ ಜೊತೆಗೆ, ಸ್ಟೈಲಿಶ್ ಕೂಡ ಆಗಿರುವ ಈ ಜೀನ್ಸ್ ಜೊತೆಗೆ ಕ್ರಾಪ್ ಟಾಪ್, ಟಿ ಶರ್ಟ್, ಸ್ಲಿವ್‌ಲೆಸ್ ಟಾಪ್ಸ್, ಶರ್ಟ್, ಟ್ಯಾಂಕ್ ಟಾಪ್, ಟ್ಯೂನಿಕ್, ಸ್ಪೋರ್ಟ್ಸ್ ಟಾಪ್ ಚೆನ್ನಾಗಿ ಸೂಟ್ ಆಗುತ್ತವೆ. ನಿಮ್ಮ ಬಳಿಯೂ ಮಾಮಿ ಜೀನ್ಸ್ ಇದ್ದರೆ, ಅದನ್ನು ತೊಟ್ಟು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಲ್ಲಿ ಟ್ರೆಂಡ್ ಸೃಷ್ಟಿಸಬಹುದು. ಲಾಕ್ ಡೌನ್‌ನ ಈ ಸಮಯದಲ್ಲಿ ಇದನ್ನು ತೊಟ್ಟು ಆಫೀಸ್ ಕೆಲಸ, ಮನೆ ಕೆಲಸ, ಗಾರ್ಡನಿಂಗ್, ವ್ಯಾಯಾಮ ಮತ್ತಿತರ ಕೆಲಸಗಳನ್ನು ಆರಾಮಾಗಿ ಮಾಡಬಹುದು.
ಬೇರೆ ಜೀನ್ಸ್ ಗೂ, ಇದಕ್ಕೂ ಏನು ವ್ಯತ್ಯಾಸ?
ಇದು, ಹೊಕ್ಕಳು ಮುಚ್ಚುವಂತಹ ಹೈ ವೇಫ್ದ್ ಜೀನ್ಸ್ ಸಡಿಲ ಆಗಿರುವ ಕಾರಣ, ಹಿಂದಿನ ಜೇಬುಗಳು ಮೈಗಂಟುವುದಿಲ್ಲ. ಇದರ ಜಿಪ್ ಕೂಡ ಉದ್ದ. ಬಟನ್, ಎಲಾಸ್ಟಿಕ್, ಡೆನಿಮ್ ಬೆಲ್ಟ… (ಸೊಂಟ ಪಟ್ಟಿ), ಬಕಲ್ ಅಥವಾ ಲಾಡಿಯೂ ಇರಬಹುದು. ಇದನ್ನು ತೊಡುವಾಗ, ಅಂಗಿಯನ್ನು ಪ್ಯಾಂಟ್‌ನೊಳಗೆ ಟಕ್ ಮಾಡಲಾಗುತ್ತದೆ. ಅಂದರೆ, ಇನ್ ಶರ್ಟ್ ಮಾಡಲಾಗುತ್ತದೆ.
ಓಲ್ಡ್ ಇಸ್ ಗೋಲ್ಡ್
ಧರಿಸಲು ಆರಾಮ ಎಂಬ ಕಾರಣಕ್ಕೆ, 90 ರ ದಶಕದಲ್ಲಿ ತಾಯಂದಿರು ಹೆಚ್ಚು ಇಷ್ಟಪಡುತ್ತಿದ್ದ ಈ ಜೀನ್ಸ್, ಈಗ ಮತ್ತೆ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೆಟ್ ಮಾಡುತ್ತಿದೆ. ಮುಂದೊಂದು ದಿನ ತಾಯಂದಿರಷ್ಟೇ ಅಲ್ಲ, ಎಲ್ಲ ವಯೋಮಾನದ ಯುವತಿಯರು, ಸೆಲೆಬ್ರಿಟಿಗಳು, ಇದನ್ನು ತೊಟ್ಟು ಸ್ಟೈಲ್ ಮಾಡಲಿದ್ದಾರೆ ಎಂದು ಆಗ ಯಾರೂ ಊಹಿಸಿರಲಿಲ್ಲ ಅನಿಸುತ್ತದೆ, ಅಲ್ಲವೆ?
ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.