ಕೋವಿಡ್-19 ಭೀತಿಯ ಮಧ್ಯದಲ್ಲೂ ಮಾಸ್ಕ್ ಮುನ್ನೆಚ್ಚರಿಕೆ ಇಲ್ಲದೆ ಮಾಂಸ ಮಾರಾಟ
Team Udayavani, May 6, 2020, 1:56 PM IST
ಗಂಗಾವತಿ: ಕೋವಿಡ್-19 ರೋಗದ ಎಚ್ಚರಿಕೆಯ ಮಧ್ಯೆದಲ್ಲೂ ನಗರದ ಮಾಂಸ ಮಾರುಕಟ್ಟೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡದೇ ಮಟನ್ ಮತ್ತು ಚಿಕನ್ ಮಾಂಸ ಮಾರಾಟ ಮಾಡಲಾಗುತ್ತಿದೆ. ಪ್ರತಿ ಮಾಂಸದಂಗಡಿ ಮುಂದೆ ಕಡ್ಡಾಯವಾಗಿ ಸ್ಯಾನಿಟೈಜರ್ ಅಥವಾ ಸೋಪಿನ ನೀರುಬಿಡಬೇಕು. ಮಾಂಸ ಮಾರಾಟಗಾರರು ಮತ್ತು ಖರೀದಿದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಂಸ ಮಾರಾಟ ಮಾಡುವ ಸ್ಥಳದಲ್ಲಿ ಸ್ವಚ್ಚತೆ ಕಾಪಾಡಬೇಕೆಂಬ ನಿಯಮವನ್ನು ಜಿಲ್ಲಾಧಿಕಾರಿಗಳು ನೀಡಿದ್ದರೂ ಮಾಂಸ ಮಾರಾಟಗಾರರು ಮುನ್ನೆಚ್ಚರಿಕೆ ಉಲ್ಲಂಘಿಸಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಮಾಂಸ ಮಾರಾಟ ಮಾಡುವ ದೃಶ್ಯ ಸಾಮಾನ್ಯವಾಗಿದೆ.
ಆಟೋಮೊಬೈಲ್ ಅಂಗಡಿಗಳಲ್ಲಿ ನೂಕು ನುಗ್ಗಲು: ನಗರದಲ್ಲಿರುವ 20ಕ್ಕೂ ಹೆಚ್ಚು ಬೈಕ್ ಕಾರು ಸೇರಿ ದ್ವಿಚಕ್ರ ವಾಹನಗಳ ಬಿಡಿಭಾಗ ಮಾರಾಟ ಮಾಡುವ ಆಟೋಮೊಬೈಲ್ ಅಂಗಡಿಗಳಲ್ಲಿ ಕೊವಿಡ್-19 ಸುರಕ್ಷತಾ ಕ್ರಮ ಅನುಸರಿಸದೇ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತಿದೆ. ಸ್ವತಃ ಅಂಗಡಿ ಸಿಬ್ಬಂದಿ ವರ್ಗದವರು ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ಈ ಕುರಿತು ಜಾಗೃತಿ ಮೂಡಿಸಬೇಕಾಗಿರುವ ನಗರಸಭೆಯವರು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.