ಔಷಧ ಅಂಗಡಿ ತೆರೆಯಲು ಆಗ್ರಹ
Team Udayavani, May 6, 2020, 2:41 PM IST
ಬನಹಟ್ಟಿ: ರಬಕವಿ ಬನಹಟ್ಟಿ ನಗರದ ಪ್ರದೇಶದಲ್ಲಿಯ ಔಷಧ ಅಂಗಡಿಗಳನ್ನು ತೆರೆಯುವಂತೆ ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಮದ್ಯದಂಗಡಿಗಳನ್ನು ಆರಂಭಿಸಿದ ಆಡಳಿತ, ಔಷಧ ಅಂಗಡಿಗಳನ್ನು ಬಂದ್ ಮಾಡಿ ರೋಗಿಗಳನ್ನು ಪರದಾಡುವಂತೆ ಮಾಡಿದೆ.
ಎರಡು ಮೂರು ದಿನಗಳಿಂದ ಜನರಿಗೆ ಔಷಧ ದೊರೆಯದೆ ಕಷ್ಟ ಪಡುತ್ತಿದ್ದಾರೆ. ಅದರಲ್ಲೂ ಬಡ ಜನರಿಗೆ ಅನುಕೂಲವಾಗುವ ಜನೌಷಧ ಕೇಂದ್ರ ಮುಚ್ಚಿರುವುದರಿಂದ 300 ರಿಂದ 400ರೂ. ಮೊತ್ತದ ಮಾತ್ರೆಗಳನ್ನು ಅಂದಾಜು ರೂ. 1 ಸಾವಿರ ಕೊಟ್ಟು ಖರೀದಿಸಬೇಕಾಗಿದೆ. ಮಹಾಲಿಂಗಪುರ ಮತ್ತು ಬೇರೆ ಪಟ್ಟಣಗಳಿಗೆ ಹೋಗಿ ಔಷಧ ತರಬೇಕಾಗಿದೆ.
ಔಷಧ ಅಂಗಡಿಗಳನ್ನು ಬಂದ್ ಮಾಡಿರುವುದು ಸೂಕ್ತವಾದ ಕ್ರಮವಲ್ಲ ಎಂದು ಪುಟಾಣಿ ತಿಳಿಸಿದರು.ಈ ಸಂದರ್ಭದಲ್ಲಿ ಮತ್ತೋರ್ವ ಹಿರಿಯ ವಕೀಲ ವಿಜಯ ಹೂಗಾರ ಮಾತನಾಡಿ, ಔಷಧ ಅಂಡಿಗಳಿಗೂ ಕೆಲವು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿ ಅವರಿಗೂ ಸಮಯವನ್ನು ನೀಡಿ ಆರಂಭಿಸಬೇಕು. ದಿನಸಿ ಮತ್ತು ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಮನೆ ಮನೆಗೆ ತಲುಪಿಸುವಂತೆ ಔಷಗಳನ್ನು ಮನೆ ಮನೆಗೆ ತಲುಪಿಸಲು ಸಾಧ್ಯವಿಲ್ಲ. ತಾಲೂಕು ಆಡಳಿತ ಔಷಧ ಅಂಗಡಿಯ ಮಾಲೀಕರಿಗೆ ಒಂದು ನಿರ್ದಿಷ್ಟ ಸಮಯವನ್ನು ನೀಡಿ ಔಷ ಧಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೂಗಾರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.