ಕೋವಿಡ್ ವಿರುದ್ಧ ನೆದರ್ಲೆಂಡ್ ವಿಜ್ಞಾನಿಗಳಿಂದ ಪ್ರತಿಕಾಯ ಸೃಷ್ಟಿ
Team Udayavani, May 7, 2020, 12:21 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನೆದರ್ಲೆಂಡ್‌ನ ತಜ್ಞರು ಕೋವಿಡ್ ವೈರಸ್ಸನ್ನು ಮಣಿಸುವ ಮೊನೊಕ್ಲೊನಲ್ ಪ್ರತಿಕಾಯಗಳನ್ನು ಲ್ಯಾಬ್‌ನಲ್ಲಿ ಸೃಷ್ಟಿಸಿದ್ದಾರೆ.
ಆರಂಭಿಕ ಪರೀಕ್ಷೆಯಲ್ಲಿ ಪ್ರತಿಕಾಯಗಳು, ಕೋವಿಡ್ ವೈರಾಣುಗಳನ್ನು ತಟಸ್ಥಗೊಳಿಸಿದ್ದು, ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ‘47ಡಿ11 ಎಂಬ ಈ ಮೊನೊಕ್ಲೊನಲ್ ಪ್ರತಿಕಾಯ, ಕೋವಿಡ್ ವೈರಸ್ ನ ಮೇಲ್ಮೈನಲ್ಲಿರುವ ದುರ್ಬಲ ಕಿರೀಟದ ಮೇಲೆ ದಾಳಿ ಮಾಡಿ, ನಂತರ ದೇಹದ ಕೋಶದೊಳಕ್ಕೆ ಸೇರಿಕೊಳ್ಳುತ್ತದೆ’ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಮೊನೊಕ್ಲೊನಲ್ ಎನ್ನುವುದು ಲ್ಯಾಬ್‌ನಲ್ಲಿ ಸೃಷ್ಟಿಸಬಹುದಾದ, ಪ್ರೊಟಿನ್‌ಯುಕ್ತ ಪ್ರತಿಕಾಯ. ಸೋಂಕಿಗೆ ಕಾರಣವಾಗುವ ವೈರಸ್, ಬ್ಯಾಕ್ಟೀರಿಯಾಗಳನ್ನು ಬೇಗನೆ ಆಹುತಿ ತೆಗೆದುಕೊಳ್ಳುವ ಗುಣ ಹೊಂದಿದೆ. ಇದನ್ನು ಮೊದಲು ಇಲಿಗಳ ಮೇಲೆ ಪ್ರಯೋಗಿಸಿ, ನಂತರವಷ್ಟೇ ಮಾನವ ಆವೃತ್ತಿಯನ್ನು ಸೃಷ್ಟಿಸಬೇಕಾಗುತ್ತದೆ.
ಕ್ಯಾನ್ಸರ್ ಚಿಕಿತ್ಸೆಗೆ ಇವು ಬಳಕೆಯಾಗುತ್ತಿದ್ದು, ರೋಗಿಗಳಲ್ಲಿ ತಕ್ಕಮಟ್ಟಿಗೆ ಚೇತರಿಕೆ ನೀಡುವಲ್ಲಿಯೂ ಸಫಲವಾಗಿವೆ. ನೆದರ್ಲೆಂಡ್‌ನ ಅಟರೆಕ್ಟ್ ವಿವಿಯ ತಜ್ಞರಿಂದ ಮತ್ತಷ್ಟು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.