ಕೋವಿಡ್-19 ಉತ್ತರ ಯೆಮನ್‌ನಲ್ಲಿ ಮೊದಲ ಸಾವು
Team Udayavani, May 7, 2020, 10:14 AM IST
ಹೌತಿ: ಹೌತಿ ಆಡಳಿತಕ್ಕೆ ಒಳಪಡುವ ಉತ್ತರ ಯೆಮನ್‌ನಲ್ಲಿ ಮೊದಲ ಕೋವಿಡ್-19 ಸಾವು ಪ್ರಕರಣ ದಾಖಲಾಗಿದ್ದು, ಸನಾ ನಗರದ ಹೊಟೇಲ್‌ನಲ್ಲಿ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ಘಟನೆ ಕುರಿತು ಅಧಿಕಾರಿಗಳು ದೃಢಪಡಿಸಿದ್ದು, ಮೃತ ವ್ಯಕ್ತಿಯನ್ನು ಸೊಮಾಲಿ ಪ್ರಜೆ ಎಂದು ಗುರುತಿಸಲಾಗಿದೆ.
ರಾಜಧಾನಿ ಸನಾದಲ್ಲಿ ಕಾರ್ಯಾಚರಿಸುತ್ತಿರುವ ಆ ಹೊಟೇಲ್ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು, ಘಟನೆ ತಿಳಿಯುತ್ತಿದ್ದಂತೆ ತತ್‌ಕ್ಷಣ ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿರುವುದಾಗಿ ಹೌತಿ ಸರಕಾರದ ಪ್ರತಿನಿಧಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ಅಲ್‌ಜಜೀರಾ ವರದಿ ಮಾಡಿದೆ.
ಮೃತಪಟ್ಟ ಆ ಸೊಮಾಲಿ ಸೋಂಕಿತ ವ್ಯಕ್ತಿ ಹೃದ್ರೋಗ ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿದ್ದ ಎನ್ನಲಾಗುತ್ತಿದೆ.
ಅರೇಬಿಯನ್ ಪೆನಿನ್ಸುಲಾದ ಭಾಗದಲ್ಲಿರುವ ಯೆಮೆನ್, ಆಫ್ರಿಕಾ ಮತ್ತಿತ್ತರ ಪ್ರದೇಶಗಳಿಂದ ವಲಸೆ ಬರುವ ಕಾರ್ಮಿಕರಿಗೆ ಮತ್ತು ನಿರಾಶ್ರಿತರಿಗೆ ಒಂದು ಆಶ್ರಯ ತಾಣವಾಗಿದೆ. ಈ ಪ್ರದೇಶ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.
ಎಪ್ರಿಲ್ 10 ರಂದು ತನ್ನ ಮೊದಲ ಕೋವಿಡ್-19 ಸೋಂಕು ಪ್ರಕರಣವನ್ನು ಪ್ರಕಟಿಸಿದ ಕೆಲ ರಾಷ್ಟ್ರಗಳ ಪೈಕಿ ಯೆಮೆನ್ ಕೂಡ ಒಂದಾಗಿದ್ದು,, ಪ್ರತ್ಯೇಕ ಆಡಳಿತವನ್ನು ನಡೆಸುತ್ತಿರುವವ ಏಡನ್ ಪ್ರದೇಶ ಸೇರಿ ಒಟ್ಟು 21 ಪ್ರಕರಣಗಳು ಇದುವರೆಗೆ ದಾಖಲಾಗಿವೆ. ಈ ಪೈಕಿ ಮೂವರು ಮೃತಪಟ್ಟಿದ್ದಾರೆ. ಹೌತಿ ಪ್ರದೇಶದ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಆ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kinya: ಬಾಡಿಗೆ ಮನೆಯಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಜೋಡಿ ಬಂಧನ
Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ
ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು
Kannada: ಬೆಳೆ ಕನ್ನಡ : ಸರಣಿ-1 ಕನ್ನಡ ಚಿತ್ರರಂಗ; ಬದಲಾದ ಬದುಕೇ ಸಿನೆಮಾ ಭಾಷೆಗೂ ಕುತ್ತು
New Delhi: ಹುಸಿ ಬಾಂಬ್ ಕರೆ ಪತ್ತೆಗೆ ಇಂಟರ್‌ಪೋಲ್ ಮೊರೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.