ಜೈಲಿಗಾದರೂ ಹಾಕಿ, ಅಲ್ಲಿ ಅನ್ನ ಸಿಗುತ್ತದೆ
Team Udayavani, May 7, 2020, 11:59 AM IST
ಮಣಿಪಾಲ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಸೋಂಕಿನಿಂದ ಪೌಷ್ಟಿಕತೆ ಆಹಾರ ಕೊರತೆ ಜಾಗತಿಕ ಮಟ್ಟವಾಗಿ ಹೆಚ್ಚಲಿದ್ದು, ಹಸಿವಿನಿಂದ ಬಲಿಯಾಗುವವರ ಪ್ರಮಾಣವೂ ದುಪ್ಪಟ್ಟಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿತ್ತು. ಇದೀಗ ಅಂಥ ಘಟನೆಗಳೇ ನಡೆಯುತ್ತಿದ್ದು,. ಬೀದಿ ಬದಿ ಮಕ್ಕಳು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿವೆ. ಕೀನ್ಯಾದ ಮೊಂಬಾಸದಲ್ಲಿನ ಘಟನೆ ಇತ್ತೀಚಿನದು.
ಜೈಲಲ್ಲಾದರೂ ಊಟ ಸಿಗುತ್ತದೆ
ಸದ್ಯ ಸ್ವತಃ ಬೀದಿ ಬದಿಯ ತರುಣರು, ಮಕ್ಕಳೂ ಹೇಳುತ್ತಿರುವ ಮಾತು. ನಮ್ಮನ್ನು ಬಂಧಿಸಿ ಕಾರಾಗೃಹಕ್ಕೆ ಕಳುಹಿಸಿ. ಅಲ್ಲಾದರೂ ಹೊಟ್ಟೆ ತುಂಬಾ ಊಟ, ವಸತಿ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆಗಳು ದೊರೆಯುತ್ತವೆ. ಏಕೆಂದರೆ ಉಳ್ಳವರಂತೆ ನಮಗೆ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಬೇಕಾದ್ದನ್ನು ಮಾಡಿ ತಿನ್ನಲು ಸಾಧ್ಯವಿಲ್ಲ. ನಮಗೆ ನಮ್ಮ ಹೊಟ್ಟೆಯೇ ಸಂಗ್ರಹಾಲಯ. ಆದರೆ ಅಲ್ಲಿ ಸಂಗ್ರಹಿಸೋಣ ಎಂದರೆ ತಿನ್ನಲು ಅನ್ನವೇ ಸಿಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಿದೆ ಎಂದು ಕೆಲವು ಯುವಕರು ದಿ ಗಾರ್ಡಿಯನ್ ನೊಂದಿಗೆ ಹಂಚಿಕೊಂಡಿದ್ದಾರೆ.
ಕೋವಿಡ್-19 ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್‌ಡೌನ್ ನಿಯಮಗಳು ಆಹಾರ ಮತ್ತು ಆಶ್ರಯಕ್ಕಾಗಿ ಬೀದಿ ಬದಿ ಅಂಗಡಿಗಳನ್ನೇ ನೆಚ್ಚಿಕೊಂಡಿದ್ದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಕಳ್ಳತನದಂತಹ ಅಪರಾಧ ಚಟುವಟಿಕೆಗಳಿಗೂ ಪ್ರೇರೆಪಿಸುತ್ತಿದೆ ಎನ್ನಲಾಗುತ್ತಿದೆ.
ಮಕ್ಕಳನ್ನು ಬಿಡುತ್ತಿರುವ ನಿರ್ಗತಿಕರು
ಸದ್ಯ ಶಾಲೆಗಳು ಮುಚ್ಚಿರುವುದರಿಂದ ಆದಾಯ ಮೂಲಗಳಿಲ್ಲದೇ ಕಂಗೆಟ್ಟಿರುವ ಕುಟುಂಬಗಳು ತಮ್ಮ ಮಕ್ಕಳನ್ನು ಬಿಡುತ್ತಿದ್ದಾರೆ. ಈ ಒಂದು ಘಟನೆಯಿಂದ ಬೀದಿ ಬದಿ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿಂದೆ ಎಬೋಲಾ ಕಾಣಿಸಿಕೊಂಡಾಗಲೂ ಕೆಲ ನಿರ್ಗತಿಕರು ಕುಟಂಬಗಳು ತಮ್ಮ ಮಕ್ಕಳನ್ನು ಬೀದಿ ಪಾಲು ಮಾಡಿದ್ದರು. ಇದರಿಂದ ಸೋಂಕು ಬಂದರೂ ತಿಳಿಯದು. ಇದೇ ಸ್ಥಿತಿ ಹಿಂದೆ ಎಬೋಲಾದ ಸಂದರ್ಭದಲ್ಲೂ ಘಟಿಸಿತ್ತು.
ಸರಕಾರವು ಬೀದಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳಿಗೆ ಆಶ್ರಯ ಕಲ್ಪಿಸುವ ಯೋಜನೆ ಘೋಷಿಸಿದೆ. ಆದರೆ ಅದಕ್ಕೆ ಯಾವ ಪೂರ್ವಸಿದ್ಧತೆಯೂ ನಡೆದಿಲ್ಲ ಎನ್ನಲಾಗಿದೆ. ಖಾಸಗಿ ಸಂಸ್ಥೆಯ ಮೂಲಕ ಕಡಿಮೆ ವೇತನಕ್ಕೆ ನೇಮಕಗೊಂಡ ಕೆಲ ಕೂಲಿ ಕಾರ್ಮಿಕರದ್ದೂ ಇದೇ ಅವಸ್ಥೆ.
ಕಳೆದ ವಾರ ಸಿಯೆರಾ ಲಿಯೋನ್ ನಗರದ ವಾಟರ್‌ಲೂನಲ್ಲಿ ಈ ಮಕ್ಕಳಿಗೆ ಆಹಾರ ವ್ಯವಸ್ಥೆ ಮಾಡುವಲ್ಲಿ ಕೆಲ ಎನ್‌ಜಿಒಗಳು ನಿರತವಾಗಿವೆ. ಈ ವರ್ಷ ಜಾಗತಿಕವಾಗಿ ಬೀದಿ ಬದಿ ಆಶ್ರಯಿಸುವ ಮಕ್ಕಳ ಪ್ರಮಾಣದಲ್ಲಿ 100 ಮಿಲಿಯನ್ ಅಷ್ಟು ಏರಿಕೆಯಾಗಲಿದ್ದು, ಸದ್ಯ ಕೀನ್ಯಾದಲ್ಲಿ ಎದುರಾಗಿರುವ ಪರಿಸ್ಥಿತಿಯೇ ಪ್ರಪಂಚದ ಇತರೆ ರಾಷ್ಟ್ರಗಳಲ್ಲೂ ಇವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.