ಪಕ್ಕದಲ್ಲೇ ಇದ್ರೂ.. ಬಿಡುಗಡೆ ಇಲ್ಲ..!

23 ವಾರ್ಡ್‌ಗಳಲ್ಲಿರುವ ಕಾರ್ಮಿಕರಿಗೆ ತೊಂದರೆ ; ಲಾಕ್‌ಡೌನ್‌: ಮನೆಯಿಂದ ಹೊರಬರಲಾಗದ ಸ್ಥಿತಿ

Team Udayavani, May 7, 2020, 1:35 PM IST

ಪಕ್ಕದಲ್ಲೇ ಇದ್ರೂ.. ಬಿಡುಗಡೆ ಇಲ್ಲ..!

ಕೋವಿಡ್‌ ಪ್ರಕರಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಶಿವಾಜಿನಗರಕ್ಕೆ ಹೆಚ್ಚಿನ ಭದ್ರತೆ ಒದಗಿಸಿರುವುದು.

ಬೆಂಗಳೂರು: ನಗರಾದ್ಯಂತ ಸುಮಾರು 175 ವಾರ್ಡ್‌ಗಳಲ್ಲಿರುವ ಕಾರ್ಮಿಕರೆಲ್ಲರಿಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ಸ್ವತಃ ಸರ್ಕಾರ ಮತ್ತು ಪ್ರತಿಪಕ್ಷಗಳು ಮುಂದೆ ನಿಂತು, ಅವರೆಲ್ಲರಿಗೂ ಬೀಳ್ಕೊಟ್ಟಿದ್ದಾರೆ. ಆದರೆ, 23 ವಾರ್ಡ್‌ ಗಳಲ್ಲಿರುವ ಕಾರ್ಮಿಕರಿಗೆ ಮಾತ್ರ ಈ ಭಾಗ್ಯ ಇಲ್ಲ! ಕಾರಣ- ಅವರೆಲ್ಲಾ ನಿಯಂತ್ರಿತ ವಲಯದ ಗಡಿಯಲ್ಲಿದ್ದಾರೆ. ವಿವಿಧ ಭಾಗಗಳಲ್ಲಿ ನಡೆಯುತ್ತಿರುವಂತೆ ಸೀಲ್‌ಡೌನ್‌ ಆಗಿರುವ ಪಾದರಾಯನಪುರ, ಹೊಂಗಸಂವಾರ್ಡ್‌ಗಳಲ್ಲೂ ಮೂಲಸೌಕ¿ನಿರ್ಮಾಣ ಕಾಮಗಾರಿಗಳು ಯಲ್ಲಿವೆ. ಹಲವು ಪ್ರಕಾರದ ಉದಿಗಳಲ್ಲಿ ಕಾರ್ಯ ನಿರ್ವಹಿಸುತ್ತಿ ಕಾರ್ಮಿಕರೂ ಅಲ್ಲಿದ್ದಾರೆ. ನಿಯಮದ ಪ್ರಕಾರ ಅವರಾರೂ ಹೊರಗೆ ಬರುವಂತಿಲ್ಲ. ಹಾಗಾಗಿ, ತಮ್ಮದಲ್ಲದ ತಪ್ಪಿಗೆ ಆ ಕಾರ್ಮಿಕರೂ ದಿಗ್ಬಂಧನಕ್ಕೆ ಒಳಗಾಗಿದ್ದಾರೆ.

ಬಾಪೂಜಿನಗರಕ್ಕೆ ಹೊಂದಿ ಕೊಂಡೇ ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ ಇದೆ. ಅರೀತಿ, ಹಂಪಿನಗರ ಪಕ್ಕದಲ್ಲೇ ಅತ್ತಿರಾಧಾಕೃಷ್ಣ ದೇವಸ್ಥಾನ ವಾಡ್‌ಸಂಜಯನಗರ ವಾರ್ಡ್‌ ದೂರದಲ್ಲಿರುವ ತಮ್ಮೊಂದಿಗೆ ಇದುವರೆಗೆ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು ತವರಿನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ, ತಾವು ಹೋಗುವಂತಿಲ್ಲ. ಕೂಡಿ ಆಡಿದ ವಾರಿಗೆಯ ಕೂಲಿ ಕಾರ್ಮಿಕರ ಮಕ್ಕಳು, ಕೆಲಸ ಮುಗಿಸಿಕೊಂಡು ಜೋಪಡಿ ಅಂಗಳದಲ್ಲಿ ಹರಟುತ್ತಿದ್ದ ಕಾರ್ಮಿಕ ಮಹಿಳೆಯರಿಗೆ ಈ ಪ್ರತ್ಯೇಕತೆ ನುಂಗಲಾರದ ತುತ್ತಾಗಿದೆ.

ಇದ್ಯಾವ ನ್ಯಾಯ ಸಾರ್‌…?: “ತಿಂಗಳುಗಟ್ಟಲೆ ಬಂಧನದಿಂದ ಬಿಡುಗಡೆಗಾಗಿ ಕಾದುಕುಳಿತಿದ್ದೆವು. ನನ್ನ ಜತೆಗೇ ಕೆಲಸ ಮಾಡುತ್ತಿದ್ದ ದ್ಯಾವಮ್ಮ ಮಕ್ಕಳು- ಮರಿಗಳೊಂದಿಗೆ ಸೋಮವಾರ ಸಂಜೆಯೇ ಪ್ರಯಾಣ ಬೆಳೆಸಿದಳು. ನಾನು ಅದೆಂತಹಧ್ದೋ ವಾರ್ಡ್‌ನಲ್ಲಿ (ಕಂಟೈನ್ಮೆಂಟ್‌ ವಾರ್ಡ್‌) ಇದ್ದೀವಂತೆ. ಹಾಗಾಗಿ, ನಾವು ಹೋಗಲು ಸರ್ಕಾರ ಅನುಮತಿ ನೀಡಿಲ್ವಂತೆ. ನಾವೆಲ್ಲಾ ಆರೋಗ್ಯವಾಗಿದ್ದೂ ನಮ್ಮದಲ್ಲದ ತಪ್ಪಿಗೆ ಹೀಗೆ ಕೂಡಿಹಾಕುವುದು ಯಾವ ನ್ಯಾಯ ಸಾರ್‌? ಈಗ ಅವಕಾಶ ಸಿಗದಿದ್ದರೆ, ಮುಂದೆ ಯಾವಾಗೋ ಏನೋ? ಅತ್ತ ಕೆಲಸಕ್ಕೆ ಹೋಗುವಂತೆಯೂ ಇಲ್ಲ. ಇತ್ತ ಊರಿಗೆ ಹೋಗು ವಂತೆಯೂ ಇಲ್ಲ’ ಎಂದು ರಾಯಚೂರು ಮೂಲದ ಹಂಪಿನಗರ ವಾರ್ಡ್‌ನಲ್ಲಿಯ ಯಮನವ್ವ ಅಲವತ್ತುಕೊಂಡರು.

6 ವಲಯಗಳಲ್ಲಿ 2 ಲಕ್ಷ ಕಾರ್ಮಿಕರು!: ಬಿಬಿಎಂಪಿ ಮೂಲಗಳ ಪ್ರಕಾರ ಕಂಟೈನ್ಮೆಂಟ್‌ ಝೋನ್‌ಗಳಿರುವ ಆರು ವಲಯಗಳಲ್ಲಿ 1.98 ಲಕ್ಷ ಕಾರ್ಮಿಕರಿದ್ದು, ಇದರಲ್ಲಿ ಅತಿ ಹೆಚ್ಚು ಕಾರ್ಮಿಕರಿದ್ದು, ಮಹದೇವಪುರ ಮತ್ತು ಪಶ್ಚಿಮ ವಾರ್ಡ್‌ಗಳಲ್ಲಿ ಕ್ರಮವಾಗಿ 55 ಸಾವಿರ ಹಾಗೂ 56 ಸಾವಿರ ಜನ ಇದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲೇ 23 ಕಂಟೈನ್ಮೆಂಟ್‌ ಝೋನ್‌ಗಳೂ ಬರುತ್ತವೆ. ಅಂದರೆ ಸಾವಿರಾರು ಕಾರ್ಮಿಕರು ಬಿಡುಗಡೆ ಇಲ್ಲದೆ ಸಿಲುಕಿದ್ದಾರೆ ಎನ್ನಲಾಗಿದೆ. ಆದರೆ, ನಿರ್ಬಂಧಿತ ವಲಯಗಳಲ್ಲಿರುವ ಕಾರ್ಮಿಕರ ಬಗ್ಗೆ ನಿರ್ದಿಷ್ಟವಾಗಿ ಲೆಕ್ಕಹಾಕಿಲ್ಲ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

ನಾಲ್ಕು ದಿನದಲ್ಲಿ ಲಕ್ಷ ಕಾರ್ಮಿಕರು ವಲಸೆ
ಬೆಂಗಳೂರು: ಕಳೆದ ನಾಲ್ಕು ದಿನಗಳಲ್ಲಿ ರಾಜಧಾನಿಯಿಂದ ಸರಿಸುಮಾರು ಲಕ್ಷ ಕಾರ್ಮಿಕರು ಊರುಗಳಿಗೆ ತಲುಪಿದ್ದಾರೆ ಎಂದು ಅಂದಾಜಿಸಲಾಗಿದೆ. ಮೇ 2ರಿಂದ ಬೆಂಗಳೂರಿನಲ್ಲಿರುವ ಕಾರ್ಮಿಕರನ್ನು ಊರಿಗೆ ಕಳುಹಿಸುವ ಪ್ರಕ್ರಿಯೆ ಸರ್ಕಾರ ಆರಂಭಿಸಿತ್ತು. ಮೊದಲ ದಿನ 192 ಬಸ್‌ಗಳಲ್ಲಿ 5,760 ಕಾರ್ಮಿಕರನ್ನು ಊರಿಗೆ ಕಳುಹಿಸಲಾಗಿತ್ತು. ಮೇ 3ರಂದು 25,890 ಹಾಗೂ
4ರಂದು 28,238 ಮತ್ತು 5ರಂದು 24 ಸಾವಿರ ಕಾರ್ಮಿಕರನ್ನು ಉಚಿತವಾಗಿ ಕಳುಹಿಸಲಾಗಿದೆ. ಬುಧ ವಾರ ಈ ಸಂಖ್ಯೆ ಕಡಿಮೆಯಾಗಿದ್ದು, ಸುಮಾರು 250 ಬಸ್‌ಗಳಲ್ಲಿ 7 ಸಾವಿರ ಜನ ತೆರಳಿದ್ದಾರೆ.

ಈ ಮಧ್ಯೆ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಬ್ಯಾಂಕ್‌ ಖಾತೆಗೆ 2 ಸಾವಿರ ರೂ. ನೇರ ವರ್ಗಾವಣೆಯ ಜತೆಗೆ ಹೆಚ್ಚುವರಿಯಾಗಿ 3 ಸಾವಿರ ರೂ.ಗಳನ್ನು ಒದಗಿಸಲು ನಿರ್ಧರಿಸಿದೆ. ಇದರಿಂದ ಬಹುತೇಕ ಕಾರ್ಮಿಕರು ಬೆಂಗಳೂರಿನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ. “ಸರ್ಕಾರದಿಂದ ಸೂಕ್ತ ಹಣಕಾಸಿನ ಸೌಲಭ್ಯದ ಭರವಸೆ ಬಂದಿದೆ. ಆದರೆ, ಬ್ಯಾಂಕ್‌ ಖಾತೆಗೆ ಹಣ ಬಂದಿಲ್ಲ. ಸ್ವಲ್ಪ ದಿನ ಇಲ್ಲೇ ಇರುತ್ತೇವೆ. ಕೆಲಸ ಆರಂಭವಾದರೆ ಜೀವನವಾದರೂ ನಡೆಸಬಹುದು. ಊರಲ್ಲೂ ಕಷ್ಟ ಇದೆ. ಅಲ್ಲಿ ಹೋದರೂ ಕೆಲಸ ಮಾಡಲು ಏನೂ ಇಲ್ಲ ಹೀಗಾಗಿ ಇಲ್ಲಿಯೇ ಸ್ವಲ್ಪ ದಿನ ಇರುತ್ತೇವೆ’ ಎಂದು ವಿಜಯನಗರದಲ್ಲಿ ವಾಸವಿರುವ ಕಟ್ಟಡ ಕಾರ್ಮಿಕ ನಾಗರಾಜ್‌ ತಿಳಿಸಿದರು.

“ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಬಿಜಾಪುರ ಹಾಗೂ ಬೀದರ್‌ ಭಾಗದ ಅನೇಕರು ಸರ್ಕಾರಿ ವ್ಯವಸ್ಥೆಯಲ್ಲೇ ಊರಿಗೆ ಹೋಗಿದ್ದಾರೆ. ನಾವು ಹೋಗಲು ಸಿದಟಛಿರಿದ್ದೆವು. ಸರ್ಕಾರದಿಂದ ಸೌಲಭ್ಯಗಳ ಭರವಸೆ ದೊರೆತಿದೆ. ಅಲ್ಲದೆ, ಕಟ್ಟಡ ನಿರ್ಮಾಣ ಕಾಮಗಾರಿಗಳ ಪುನರಾರಂಭ ಭರವಸೆಯೂ ಸಿಕ್ಕಿದೆ. ಹೀಗಾಗಿ ನಾವು ಕೆಲವರು ಇಲ್ಲಿಯೇ ಉಳಿದುಕೊಂಡಿದ್ದೇವೆ’ ಎಂದರು.

ಕಾಮಗಾರಿಗಳಿಗೆ ಲಾಕ್‌ಡೌನ್‌ ಗಡುವು
ಬೆಂಗಳೂರು: ಲಾಕ್‌ಡೌನ್‌ ಅವಧಿ ಮುಗಿಯುವಷ್ಟರಲ್ಲಿ ಪ್ರಗತಿಯಲ್ಲಿರುವ ಸಾಧ್ಯವಾದಷ್ಟು ಎಲ್ಲ ಕಾಮಗಾರಿಗಳು ಪೂರ್ಣಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎನ್‌. ವಿಜಯ್‌ ಭಾಸ್ಕರ್‌ ನಗರದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದರು. ಬಿಬಿಎಂಪಿ, ಬಿಡಿಎ, ಜಲಮಂಡಳಿ ಸೇರಿದಂತೆ ಎಲ್ಲ ಅಧಿಕಾರಿಗಳೊಂದಿಗೆ ಬುಧವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿ, ಲಾಕ್‌ಡೌನ್‌ ಅವಧಿಯೊಳಗೆ ಸಾಧ್ಯವಾದಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇದಕ್ಕೆ ಸಂಚಾರ ಪೊಲೀಸರು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳು ಆದ್ಯತೆ ಮೇರೆಗೆ ತ್ವರಿತಗತಿಯಲ್ಲಿ ಆರಂಭಿಸಬೇಕು. ಇದರಿಂದ ವಲಸೆ ಹೋಗುವ ಕಾರ್ಮಿಕರನ್ನು ತಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ “ನಮ್ಮ ಮೆಟ್ರೋ’ ಯೋಜನೆಯಲ್ಲಿ ವಿವಿಧ ಶಿಬಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಕಾರ್ಮಿಕರು ವಲಸೆ ಹೋಗದಂತೆ ಬಿಎಂಆರ್‌ಸಿಎಲ್‌ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಾಮಗಾರಿಗಳ ಪ್ರಗತಿಯಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದರು. ಕೆಪಿಟಿಸಿಎಲ್‌ ಕೈಗೆತ್ತಿಕೊಂಡ ಕಾಮಗಾರಿಗೆ ಬಿಡಿಎಯಿಂದ ಅಗತ್ಯ ಭೂಮಿ ಮಂಜೂರು, ಜಲಮಂಡಳಿಯು ಗ್ರಾಫೈಟ್‌ ಜಂಕ್ಷನ್‌ನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಗೊಳಿಸುವುದು, ಅರ್ಧಕ್ಕೆ ನಿಂತಿರುವ ಸ್ಮಾರ್ಟ್‌ಸಿಟಿ ಯೋಜನೆಗಳಿಗೆ ಮರುಚಾಲನೆ ಮತ್ತಿತರ ಅಂಶಗಳು ಚರ್ಚೆಗೆ ಬಂದವು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ಯಶವಂತಪುರ ಖಾಸಗಿ ನರ್ಸಿಂಗ್‌ ಹೋಂ ಸೀಲ್‌ಡೌನ್‌
ಬೆಂಗಳೂರು: ನಗರದ ಯಶವಂತಪುರದ ಕೆ.ಎನ್‌.ಬಡಾವಣೆಯ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 49 ವರ್ಷದ ಮಹಿಳಾ ರೋಗಿಯೊಬ್ಬರಿಗೆ ಕೋವಿಡ್  ವೈರಸ್‌ ಸೋಂಕು ತಗುಲಿರುವುದು ಖಾಸಗಿ ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಮಹಿಳೆಯು ಕಳೆದ ಮೂರು ದಿನಗಳಿಂದ ಚಿಕೂನ್‌ ಗುನ್ಯಾ ಹಿನ್ನೆಲೆ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚುವರಿಯಾಗಿ ಖಾಸಗಿ ಪ್ರಯೋಗಾಲಯ ಮೂಲಕ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿತ್ತು. ಬುಧವಾರ ವರದಿ ಪಾಸಿಟಿವ್‌ ಎಂದು ಬಂದಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ನರ್ಸಿಂಗ್‌ ಹೋಂ ಬಂದ್‌ ಮಾಡಿ ರೋಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಹಿಸಿದ್ದಾರೆ. “ನರ್ಸಿಂಗ್‌ ಹೋಂನಲ್ಲಿದ್ದ ಇತರೆ ರೋಗಿಗಳು, ಸಿಬ್ಬಂದಿ, ಮಹಿಳೆ ಸಂಬಂಧಿ ಸೇರಿ 13 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಜತೆಗೆ ಮಹಿಳೆಗೆ ಮತ್ತೂಮ್ಮೆ ಸೋಂಕು ಪರೀಕ್ಷೆ ಮಾಡಲಾಗುತ್ತದೆ’ ಎಂದು ಬಿಬಿಎಂಪಿ ಮಲ್ಲೇಶ್ವರ ವೈದ್ಯಾಧಿಕಾರಿ ಡಾ. ಸುರೇಶ್‌ ರುದ್ರಪ್ಪ ತಿಳಿಸಿದ್ದಾರೆ.

ನಮ್ಮ ಅಂದಾಜು ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಅದರಲ್ಲಿ ಪುರುಷರು ಮತ್ತು ಮಹಿಳೆಯರು ಎಷ್ಟಿದ್ದಾರೆ ಹಾಗೂ ಎಲ್ಲೆಲ್ಲಿದ್ದಾರೆ ಎಂಬ ಲೆಕ್ಕ ಇದೆ. ಆದರೆ, ಕಂಟೈನ್ಮೆಂಟ್‌ ವಲಯಗಳ ಕಾರ್ಮಿಕರೆಂದು ವರ್ಗೀಕರಣ ಮಾಡಿಲ್ಲ. ಈ ನಿರ್ಬಂಧಿತ ಪ್ರದೇಶದಲ್ಲಿದ್ದವರನ್ನು ಊರಿಗೆ ಕಳುಹಿಸಲು ಅವಕಾಶವೂ ಇಲ್ಲ.
? ಬಿ.ಎಚ್‌. ಅನಿಲ್‌ ಕುಮಾರ್‌, ಆಯುಕ್ತರು, ಬಿಬಿಎಂಪಿ.

ಕಟ್ಟಡ ಕಾರ್ಮಿಕರಿಗೆ ಉಚಿತ ರೈಲು ಮತ್ತು ಬಸ್‌ ವ್ಯವಸ್ಥೆಯನ್ನು ಮುಂದುವರಿಸಿ ಅವರುಗಳು ಊರಿಗೆ ತೆರಳಲು ಸರ್ಕಾರ ಅನುಕೂಲ ಮಾಡಿಕೊಡಬೇಕು. ಊರಿಗೆ ತೆರಳಲು ಇಚ್ಛಿಸುವ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸುವ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು.
● ಕೆ.ಸೋಮಶೇಖರ್‌, ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ರಾಜ್ಯಾಧ್ಯಕ್ಷ

ಟಾಪ್ ನ್ಯೂಸ್

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

DKS-BGv

Congress Session: ನಾನಿನ್ನೂ ಸತ್ತಿಲ್ಲ, ಅಧ್ಯಕ್ಷನಾಗಿ ಇನ್ನೂ ಬದುಕಿದ್ದೇನೆ: ಡಿಕೆಶಿ

ಶ್ವೇತಭವನ ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ

White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.