ಸ್ಟೈರೀನ್ ಎಂಬ ಕಾರ್ಕೋಟಕ ವಿಷ
Team Udayavani, May 8, 2020, 10:06 AM IST
ಎಲ್.ಜಿ. ಪಾಲಿಮರ್ಸ್ ಕಂಪನಿಯ ದುರಂತಕ್ಕೆ ಸ್ಟೈರಿನ್ ಅಥವಾ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಎಂಬ ಅನಿಲಗಳ ಸೋರಿಕೆಯೇ ಕಾರಣ ಎಂದು ಹೇಳಲಾಗಿದೆ. ಇವೆರಡೂ ಪ್ಲಾಸ್ಟಿಕ್ ತಯಾರಿಕೆಯಲ್ಲಿ ಬಳಸಲಾಗುವ ಮೂಲ ಕಚ್ಚಾವಸ್ತು ಗಳು. ರಬ್ಬರ್ ಹಾಲನ್ನು ಗಟ್ಟಿಯಾಗಿಸುವುದು, ಕೃತಕ ರಬ್ಬರ್ ತಯಾರಿಕೆಗಳಲ್ಲಿ ಸ್ಟೈರಿನ್ ಬಳಸಿದರೆ, ಪಿವಿಸಿಯನ್ನು ಪ್ಲಾಸ್ಟಿಕ್ ಪ್ಯಾಕೇಜಿಂಗ್, ಬಳಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಗಳು-ಲೋಟಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಮೆರಿಕದ ಪ್ರಕೃತಿ ಸಂರಕ್ಷಣಾ ಆಯೋಗ (ಯುಎಸ್ ಇಪಿಎ) ಪ್ರಕಾರ, ಸ್ಟೈರಿನ್ ಹಾಗೂ ಪಿವಿಸಿಗಳು ಮನುಷ್ಯನ ಮೇಲೆ ಅನೇಕ ಹಾನಿಕಾರಕ ಪರಿಣಾಮಗಳನ್ನು ಬೀರುವಂಥ ವಾಗಿವೆ. ಈ ಸಂಸ್ಥೆಯು ಇಂಥ 684 ಅತ್ಯಂತ ವಿಷಕಾರಿ ವಸ್ತು ಗಳನ್ನು ಪಟ್ಟಿ ಮಾಡಿದ್ದು, ಸ್ಟೈರಿನ್ ಸ್ಥಾನ ಪಡೆದಿದೆ.
ಮಾರಣಾಂತಿಕ ಸ್ಟೈರಿನ್: ಸ್ಟೈರಿನ್ ಎಂಬ ವಿಷ ಕೈಗಾರಿಕೆ ಗಳಿಂದ ಮಾತ್ರವಲ್ಲ, ವಾಹನಗಳ ಹೊಗೆಯಲ್ಲಿ, ಸಿಗರೇಟ್ ಹೊಗೆಯಲ್ಲಿ ಇರುತ್ತದೆ. ಜತೆಗೆ, ಫೋಟೋ ಕಾಪಿಯರ್ ಮಷೀನ್‌ಗಳಿಂದಲೂ ಹೊರಬರುತ್ತಿರುತ್ತದೆ. ಇದರ ನೇರ ಸಂಪರ್ಕದಿಂದ ಮನುಷ್ಯರ ಮೇಲೆ ಮಾರಣಾಂತಿಕ ಪರಿಣಾಮಗಳು ಉಂಟಾ ಗುತ್ತವೆ. ಇವು ಮುಖ್ಯವಾಗಿ, ಮೂಗಿನ ಲ್ಲಿರುವ ಮ್ಯೂಕಸ್ ಮೆಂಬ್ರೇನ್ ಮೇಲೆ ದಾಳಿ ಮಾಡುತ್ತವೆ. ಅದರಿಂದ ಮೂಗಿನಲ್ಲಿ ಅತಿಯಾಗಿ ಲೋಳೆ ಯಂಥ ವಸ್ತು ಹೊರ ಬರಲಾರಂಭಿಸಿ, ಉಸಿರಾಟಕ್ಕೆ ತೊಂದರೆ ಯಾಗುತ್ತದೆ. ಅದರ ಜೊತೆಯಲ್ಲೇ ಕಣ್ಣುಗಳೂ ಉರಿಯಲಾರಂಭಿಸಿ, ಉಸಿರಾಟದಿಂದ ಹೊಟ್ಟೆಯ ಪಚನಕ್ರಿಯಾದಿ ಅಂಗಗಳನ್ನು ಸೇರುವ ಈ ಅನಿಲ ಅಲ್ಲಿಯೂ ಉರಿಯೂತ ಉಂಟು ಮಾಡುತ್ತದೆ. ಇದಕ್ಕೆ ಮನುಷ್ಯ ಎಷ್ಟು ಒಡ್ಡಿಕೊಳ್ಳುತ್ತಾನೋ ಅಷ್ಟರ ಮಟ್ಟಿಗೆ ಅಪಾಯವೂ ಜಾಸ್ತಿ. ಸ್ಟೈರಿನ್ ಅಂಶ ಅಲ್ಪ ಪ್ರಮಾಣದಲ್ಲಿದ್ದರೂ, ಅದನ್ನು ದೀರ್ಘ ಕಾಲದವರೆಗೆ ಉಸಿರಾಡಿದವರಿಗೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ನರಮಂಡಲಗಳ ಮೇಲೆ ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಲೆನೋವು ತರುತ್ತದೆ. ಮನುಷ್ಯರು ವಿನಾಕಾರಣ ದಪ್ಪ ವಾದರೂ ಆಂತರಿಕವಾಗಿ ಸೊರಗುತ್ತಾರೆ. ಪಿತ್ತ ಜನಕಾಂಗ, ಮೂತ್ರಕೋಶಗಳಿಗೂ ಇದು ತೊಂದರೆಯುಂಟು ಮಾಡುತ್ತದೆ.
ಪಿವಿಸಿ ಪರಿಣಾಮ: ಗಾಢವಾದ ಪಿವಿಸಿ ಅನಿಲಕ್ಕೆ ಮನುಷ್ಯರು ಸ್ವಲ್ಪ ಕಾಲ ಒಡ್ಡಿಕೊಂಡರೂ ಅಪಾಯವೇ. ಅದು ಮನುಷ್ಯನ ದೇಹದ ಕೇಂದ್ರೀಯ ನರ ಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೀರ್ಘ ಕಾಲದವರೆಗೆ ಪಿವಿಸಿ ಅನಿಲಕ್ಕೆ ಒಡ್ಡಿ ಕೊಂಡವರು ಪಿತ್ತ ಜನಕಾಂಗದ ಬಾಧೆಗೆ ತುತ್ತಾಗುತ್ತಾರೆ. ದಪ್ಪ ವಾಗುತ್ತಾರೆ. ಯಾವಾಗಲೂ ನಿದ್ರೆಯ ಮಂಪರು ಹಾಗೂ ತಲೆನೋವಿನಿಂದ ಬಳಲುತ್ತಿರುತ್ತಾರೆ.
ಪ್ರಾಣಿ, ಗಿಡ ಮರಗಳಿಗೂ ಎಫೆಕ್ಟ್
ಸಾಕು ಪ್ರಾಣಿಗಳಂತೂ ವೇದನೆಯಿಂದ ಮೃತಪಟ್ಟವು. ನೂರಾರು ಜನರು ವಾಂತಿ, ಉಸಿರಾಟದ ತೊಂದರೆ ಯಿಂದಾಗಿ ಆಸ್ಪತ್ರೆಗೆ ದಾಖಲಾದರು. ಕಾರ್ಖಾನೆ ಸುತ್ತಲಿನ 1.5 ಕಿಮೀ ವರೆಗಿನ ಗಿಡ-ಮರಗಳ ಹಸಿರೆಲೆಗಳ ಬಣ್ಣವೂ ಬದಲಾಗಿದೆ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿ ಅನಿಲ ಸೋರಿಕೆ ದುರಂತದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಬೇಸರವಾಯಿತು. ಘಟನೆಯಲ್ಲಿ ಅಸುನೀಗಿದವರ ಕುಟುಂಬಗಳಿಗೆ ಸಾಂತ್ವನ ಹೇಳಬಯಸುತ್ತೇನೆ. ರಾಮನಾಥ್ ಕೋವಿಂದ್, ರಾಷ್ಟ್ರಪತಿ
ಗುರುವಾರ ಸಂಭವಿಸಿದ ಅನಿಲ ದುರಂತ ಪ್ರಕರಣದಿಂದ ನೋವಾಗಿದೆ. ಘಟನೆಯಲ್ಲಿ ಅಸ್ವಸ್ಥರಾದವರು ಬೇಗನೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ
ಘಟನೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಪರಿಸ್ಥಿತಿಯನ್ನು ಕೇಂದ್ರ ಗಮನಿಸುತ್ತಿದೆ.
ನರೇಂದ್ರ ಮೋದಿ, ಪ್ರಧಾನಿ
ದುರಂತದ ಸುದ್ದಿ ಕೇಳಿ ಆಘಾತವಾಗಿದೆ. ಘಟನೆ ನಡೆದ ಪ್ರಾಂತ್ಯದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ, ನಾಯಕರಿಗೆ ಜನರ ನೋವಿಗೆ ಸ್ಪಂದಿಸುವಂತೆ ಸೂಚಿಸಿದ್ದೇನೆ.
ರಾಹುಲ್ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ
ಎಲ್‌ಜಿ ಪಾಲಿಮರ್ಸ್ ಕಂಪೆನಿ ಬಗ್ಗೆ
ಎಲ್‌ಜಿ ಪಾಲಿಮರ್ಸ್ ಇಂಡಿಯಾ ಕಂಪೆನಿ ಭಾರತದಲ್ಲಿ 24 ಕಡೆ ತನ್ನ ತಯಾರಿಕಾ ಘಟಕ ಹೊಂದಿದೆ. ಅದರಲ್ಲಿ ಪ್ರಮುಖ ವಿಶಾಖಪಟ್ಟಣಂನ ಘಟಕ. 1961ರಲ್ಲಿ ಶುರುವಾಗಿದ್ದ ಕಂಪೆನಿ. ಆಗ ಇದು ಎಲ್‌ಜಿ ಸುಪರ್ದಿಗೆ ಬಂದಿರಲಿಲ್ಲ. ಆಗ ಇದನ್ನು “ಹಿಂದೂಸ್ತಾನ್ ಪಾಲಿಮರ್ಸ್’ ಎಂದು ಕರೆಯಲಾಗುತ್ತಿತ್ತು. 1978ರಲ್ಲಿ ಈ ಕಂಪೆನಿಯು ಯು.ಬಿ. ಗ್ರೂಪ್‌ನ “ಮೆಕ್‌ಡೋವೆಲ್ ಆ್ಯಂಡ್ ಕೋ.’ ಲಿಮಿಟೆಡ್ ಜೊತೆಗೆ ಸಮ್ಮಿಲನಗೊಂಡಿತು. 1997ರ ಜುಲೈನಲ್ಲಿ “ಹಿಂದೂಸ್ತಾನ್ ಪಾಲಿಮರ್ಸ್’ ಕಂಪೆನಿಯ ಶೇ. 100ರಷ್ಟು ಷೇರುಗಳನ್ನು ಖರೀದಿಸಿದ ಎಲ್‌ಜಿ ಕೆಮ್, ಈ ಘಟಕದ ಹೆಸರನ್ನು ಎಲ್‌ಜಿ ಪಾಲಿಮರ್ಸ್ ಎಂದು ಬದಲಾಯಿಸಿತು.
ದೇಶದಲ್ಲಿ ನಡೆದ ಕೈಗಾರಿಕಾ ದುರಂತಗಳು
1944 ಬಾಂಬೆ ಸರಕು ಸಾಗಣೆ ನೌಕೆಯಲ್ಲಿ ರಾಸಾಯನಿಕ ಸ್ಫೋಟ ಸಂಭವಿಸಿ 800 ಮಂದಿ ಸತ್ತು 80 ಸಾವಿರ ಜನ ನಿರಾಶ್ರಿತರಾಗಿದ್ದರು.
1975ಚಾಸ್ನಾಲಾ ಗಣಿ ದುರಂತದಲ್ಲಿ ಬಂಡೆಕಲ್ಲುಗಳು ಸಿಡಿದಿ ದ್ದರಿಂದ 372 ಗಣಿ ಕಾರ್ಮಿಕರು ಸಾವನ್ನಪ್ಪಿದ್ದರು.
1984 ಭೋಪಾಲ್ ವಿಷಾನಿಲ ದುರಂತ ಭಾರತ ಕಂಡ ಅತಿ ದೊಡ್ಡ ಕೈಗಾರಿಕೆ ಅವಘಡವಾಗಿದೆ. ಅಮೆರಿಕ ಮೂಲದ ಕಂಪೆನಿಯಲ್ಲಿ ವಿಷಾನಿಲ ಸೋರಿಕೆಯಿಂದ 5,295 ಮಂದಿ ಮೃತಪಟ್ಟಿದ್ದರು. 5.28 ಲಕ್ಷ ಜನರು ಅಸ್ವಸ್ಥರಾಗಿದ್ದರು.
2009 ಛತ್ತೀಸ್‌ಗಢದ ಕೋಬ್ರಾದಲ್ಲಿ ಪವರ್ ಪ್ಲಾಂಟ್‌ನಲ್ಲಿ ಚಿಮಣಿ ಕುಸಿದು 45 ಮಂದಿ ಸತ್ತಿದ್ದರು.
2009ಜೈಪುರದಲ್ಲಿ ತೈಲ ಸಂಗ್ರಹ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿ 12 ಮಂದಿ ಸಾವನ್ನಪ್ಪಿದ್ದರು.
2013ವಿಶಾಖಪಟ್ಟಣದಲ್ಲಿ ಸಂಸ್ಕರಣಾ ಘಟಕದಲ್ಲಿ ಸ್ಫೋಟ ಸಂಭವಿಸಿದ್ದರಿಂದ 23 ಮಂದಿ ಮೃತಪಟ್ಟಿದ್ದರು.
2014 ಆಂಧ್ರದ ನಾಗರಾಮ್‌ನಲ್ಲಿ ಗೈಲ್ ಕೈಗಾರಿಕೆಯಲ್ಲಿ ಅನಿಲ ಸೋರಿಕೆಯಿಂದ 18 ಜನ ಸಾವನ್ನಪ್ಪಿದ್ದರು.
2016 ಮಂಗಳೂರಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ., ಘಟಕದಲ್ಲಿ ಅನಿಲ ಸೋರಿಕೆ ಯಾಗಿ ಹಲವಾರು ಮಂದಿ ಅಸ್ವಸ್ತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Tribute Dr.Singh: ಡಾ.ಮನಮೋಹನ್ ಸಿಂಗ್ ಆಡಳಿತದ ಜನಪರ ಯೋಜನೆಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Kasaragod Crime News: ಅವಳಿ ಪಾಸ್‌ಪೋರ್ಟ್; ಕೇಸು ದಾಖಲು
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.