ಸೋಂಕಿಗೆ ಯೋಧರಿಬ್ಬರ ಬಲಿ: ಗಡಿ ಭದ್ರತಾ ಪಡೆಗೆ ಮೊದಲ ಆಘಾತ
ಮತ್ತೆ 41 ಸೋಂಕು ಪ್ರಕರಣ ಪತ್ತೆ
Team Udayavani, May 8, 2020, 12:13 PM IST
ಉತ್ತರ ಪ್ರದೇಶದ ಕಾನ್ಪುರದಲ್ಲಿ ವಲಸೆ ಕಾರ್ಮಿಕರ ಕುಟುಂಬಗಳ ಸದಸ್ಯರಿಗೆ ವೈದ್ಯರು ತಪಾಸಣೆ ನಡೆಸಿದರು.
ಹೊಸದಿಲ್ಲಿ: ಆಘಾತಕಾರಿ ಮಾಹಿತಿಯೆಂಬಂತೆ, ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್)ಇಬ್ಬರು ಯೋಧರು ಗುರುವಾರ ಅಸುನೀಗಿದ್ದಾರೆ. ಈಗಾಗಲೇ ಬಿಎಸ್‌ಎಫ್ನಲ್ಲಿ ಹಲವು ಸಿಬಂದಿಗೆ ಸೋಂಕು ತಗಲಿದ್ದು, ಸಾವು ಸಂಭವಿಸಿರುವ ಮೊದಲ ಪ್ರಕರಣ ಇದಾ ಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಸ್‌ಎಫ್ನ ಕೊರೊನಾ ವಾರಿಯರ್ಸ್ ನಿಧನಹೊಂದಿ ರುವ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಎಸ್‌ಎಫ್ ಮಹಾನಿರ್ದೇಶಕ ಮತ್ತು ಇತರ ಅಧಿಕಾರಿಗಳು, ಅವರ ಕುಟುಂಬಗಳಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬ ಗಳಿಗೆ ಸಾಂತ್ವನ ಹೇಳಿದ್ದಾರೆ.
41 ಹೊಸ ಪ್ರಕರಣ: ಇದೇ ವೇಳೆ, ಗುರುವಾರ ಮತ್ತೆ 41 ಯೋಧರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸುಮಾರು 200ರಷ್ಟು ಯೋಧರಿಗೆ ಸೋಂಕು ತಗಲಿ ದಂತಾ ಗಿದೆ. ಇಬ್ಬರು ಮಾತ್ರ ಗುಣಮುಖರಾಗಿದ್ದಾರೆ. ದಿಲ್ಲಿ, ಕೋಲ್ಕತಾ ಮತ್ತು ತ್ರಿಪುರದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ, ಕೇಂದ್ರ ಅರೆಸೇನಾ ಪಡೆಯಲ್ಲಿ ದೇಶಾದ್ಯಂತ 400 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್, ಅಹ್ಮದಾಬಾದ್ ಶಟ್‌ಡೌನ್: ಗುಜರಾತ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೃದ್ಧಿಸುತ್ತಲೇ ಇರುವ ಕಾರಣ, ಅತಿ ಹೆಚ್ಚು ಸೋಂಕು ಕಂಡಿರುವ
ಅಹ್ಮದಾ ಬಾದ್ ಹಾಗೂ ಸೂರತ್ ನಗರಗಳನ್ನು ಶಟ್ ಡೌನ್ ಮಾಡಿ ಆದೇಶ ಹೊರಡಿಸಲಾಗಿದೆ. ಅಹ್ಮದಾಬಾದ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದ ಕಾರಣ ನಗರವನ್ನು ಒಂದು ವಾರ ಕಾಲ ಶಟ್‌ಡೌನ್ ಮಾಡಿ ಬುಧವಾರ ರಾತ್ರಿ ಸ್ಥಳೀಯಾ ಡಳಿತ ಆದೇಶ ಹೊರಡಿಸಿದೆ. ಹೀಗಾಗಿ, ಮೇ 15ರ ರಾತ್ರಿಯವರೆಗೂ ನಗರವು ಸಂಪೂರ್ಣ ಸ್ತಬ್ಧವಾಗಿರಲಿದೆ. ಇದರ ಬೆನ್ನಲ್ಲೇ, ಸೂರತ್ ನಲ್ಲೂ ಮೇ 9ರ ಮಧ್ಯರಾತ್ರಿಯಿಂದ 14ರ ಮಧ್ಯ ರಾತ್ರಿ ಯವರೆಗೆ ಎಲ್ಲ ತರಕಾರಿ ಹಾಗೂ ಹಣ್ಣಿನ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಲಾಗಿದ್ದು, ಅಹಮದಾಬಾದ್ ಮಾದರಿಯಲ್ಲೇ ಈ ನಗರವೂ ಸಂಪೂರ್ಣ ಶಟ್ ಡೌನ್ ಆಗಲಿದೆ. ಗುರುವಾರ ಅಧಿಕಾರಿಗಳ ಹೊಸ ತಂಡ ರಚಿಸಿ, ಅಹಮದಾಬಾದ್‌ನ ಉಸ್ತುವಾರಿಯನ್ನು ಆ ತಂಡಕ್ಕೆ ವಹಿಸಲಾಗಿದೆ. ಅರೆಸೇನಾ ಪಡೆಯ 5 ಹೆಚ್ಚುವರಿ ತಂಡವು ನಗರಕ್ಕೆ ಆಗಮಿಸಿದೆ.
ತರಕಾರಿ, ದಿನಸಿಯೂ ಇಲ್ಲ: ಅಹ್ಮದಾಬಾದ್‌ನಲ್ಲಿ ಕೇವಲ ಹಾಲು, ಔಷಧ ಮಾರಾಟ ಮಾಡುವ ಅಂಗಡಿಗಳು, ಆಸ್ಪತ್ರೆಗಳು ಹಾಗೂ ಎಟಿಎಂ ಸೇವೆ ಮಾತ್ರವೇ ಲಭ್ಯವಿರಲಿದ್ದು, ತರಕಾರಿ, ದಿನಸಿ ವಸ್ತುಗಳು ಕೂಡ ಒಂದು ವಾರ ಕಾಲ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಣ್ಣು, ಬೇಕರಿ, ಸೂಪರ್ ಮಾರ್ಕೆಟ್, ಐಸ್‌ಕ್ರೀಂ ಪಾರ್ಲರ್‌ಗಳನ್ನು ಮುಚ್ಚಲಾಗಿದೆ. ಆಹಾರ ವಸ್ತುಗಳು ಸೇರಿದಂತೆ ಯಾವುದೇ ವಸ್ತುಗಳ ಆನ್‌ಲೈನ್ ಡೆಲಿವರಿ ಕೂಡ ನಿಷೇಧಿಸಲಾಗಿದೆ.
ಗುಜರಾತ್‌ನಲ್ಲಿ ಪತ್ತೆಯಾಗಿರುವ ಒಟ್ಟಾರೆ 6,625 ಪ್ರಕರಣಗಳ ಪೈಕಿ ಅಹ್ಮದಾಬಾದ್‌ವೊಂದರಲ್ಲೇ 4,716 ಸೋಂಕಿತರಿದ್ದಾರೆ. ಇಲ್ಲಿನ ಮರಣ ಪ್ರಮಾಣವು ಶೇ.6.1 ಆಗಿದ್ದು, ರಾಷ್ಟ್ರೀಯ ಸರಾಸರಿ(ಶೇ.3.3)ಗೆ ಹೋಲಿಸಿದರೆ ಇದು ದುಪ್ಪಟ್ಟು. ಇನ್ನು, ಸೂರತ್‌ನಲ್ಲಿ ಒಟ್ಟು 750 ಪ್ರಕರಣಗಳು ಪತ್ತೆಯಾಗಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.