ಸೋನಲ್ ಸಿನಿ ಹೆಜ್ಜೆಗೆ ಐದರ ಸಂಭ್ರಮ
ಸರತಿಯಲ್ಲಿವೆ ಕನಸುಗಳು
Team Udayavani, May 8, 2020, 12:58 PM IST
ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಗೆ ಬಂದ ನಾಯಕಿ ಸೋನಲ್ ಮೊಂತೆರೋ. ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಹಲವಾರು ನಾಯಕಿಯರನ್ನು ಕೊಡುಗೆಯಾಗಿ ಕೊಟ್ಟಿರುವ ಮಂಗಳೂರಿನ ಹುಡುಗಿ ಸೋನಲ್ ಮೊಂತೆರೋ.
ಮಾಡೆಲಿಂಗ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಸೋನಾಲ್, ನಂತರ ತುಳು ಚಿತ್ರರಂಗದ ಮೂಲಕ ಸಿನಿ ಲೋಕಕ್ಕೆ ಪರಿಚಯವಾದ ಹುಡುಗಿ. ಅಲ್ಲಿಂದ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದ ಸೋನಾಲ್, ಸದ್ಯ ಕನ್ನಡದ ಭರವಸೆಯ ನಾಯಕ ನಟಿಯರ ಸಾಲಿನಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಸೋನಾಲ್ ಚಿತ್ರರಂಗಕ್ಕೆ ಪ್ರವೇಶಿಸಿ ಸದ್ದಿಲ್ಲದೆ ಐದು ವರ್ಷಗಳ ಸಿನಿಯಾನ ಪೂರೈಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದ್ಯ ಗುರುತಿಸಿಕೊಂಡು ನೆಲೆ ಕಂಡುಕೊಂಡಿರುವ ಸೋನಲ್ ಈ ಹಂತ ತಲುಪಿಕೊಳ್ಳಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.
ಯಾವುದೇ ಕ್ಷೇತ್ರವಾದರೂ ಅಲ್ಲಿ ನಾವು ಗುರುತಿಸಿಕೊಳ್ಳಬೇಕು ಅಂದ್ರೆ ಒಂದಷ್ಟು ಟೈಮ್ ಹಿಡಿಯುತ್ತದೆ. ನಮ್ಮ ಪರಿಶ್ರಮ, ಪ್ರತಿಭೆ ಮತ್ತು ಅವಕಾಶ ಎಲ್ಲವೂ ಕೂಡಿ ಬಂದಾಗ ನಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನಮ್ಮನ್ನು ಗುರುತಿಸುತ್ತಾರೆ. ಹಾಗೆಯೇ ಸಿನಿಮಾ ಕೂಡ. ಇಲ್ಲಿ ಏನಾದ್ರೂ ಸಾಧಿಸಬೇಕು ಅಂದ್ರೆ ತಾಳ್ಮೆ, ಪರಿಶ್ರಮ, ಅವಕಾಶ, ಟೈಮ್ ಎಲ್ಲವೂ ಬೇಕಾಗುತ್ತದೆ. ಚಿತ್ರರಂಗದಲ್ಲಿ ನನ್ನ ಐದು ವರ್ಷದ ಜರ್ನಿ ನನ್ನನ್ನು ಈಗ ಗುರುತಿಸುವಂತೆ ಮಾಡಿದೆ ಎನ್ನುವುದು ಸೋನಾಲ್ ಮಾತು.
ಸೋನಲ್ ಬಾಲ್ಯದ ದಿನಗಳಲ್ಲಿಯೇ ಬಣ್ಣದ ಲೋಕದತ್ತ ಆಕರ್ಷಿತಳಾದ ಹುಡುಗಿ. ಓದಿನ ಜೊತೆ ಜೊತೆಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ಸೋನಾಲ್, ತುಳು ಚಿತ್ರದಲ್ಲಿ ನಾಯಕಿಯಾಗೋ ಅವಕಾಶ ಪಡೆದುಕೊಂಡಿದ್ದರು. ಆ ಮೊದಲ ಚಿತ್ರವೇ ನೂರು ದಿನ ಯಶಸ್ವೀ ಪ್ರದರ್ಶನ ಕಾಣುವ ಮೂಲಕ ತುಳು ನಾಡಿನ ತುಂಬ ಸೋನಲ್ ತುಳು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ಆ ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಬೇಕೆಂಬುದು ಸೋನಲ್ ಅವರ ಮಹಾ ಕನಸಾಗಿತ್ತು. ಅದೇ ಗುಂಗಿನಲ್ಲಿ ಚಿತ್ರರಂಗದೊಳಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಆರಂಭದಲ್ಲಿ ದೊರೆತದ್ದು ಸಣ್ಣ ಪುಟ್ಟ ಅವಕಾಶಗಳು ಮಾತ್ರ. ಅದರ ನಡುವೆಯೂ ಅಭಿಸಾರಿಕೆ, ಎಂಎಲ್‌ಎ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರಾದರೂ ಹೇಳಿಕೊಳ್ಳುವಂಥ ಗೆಲುವೇನೂ ಸಿಕ್ಕಿರಲಿಲ್ಲ. ಆದರೆ ಒಂದಷ್ಟು ಚಿತ್ರಗಳ ನಂತರ ಸಾರ್ಥಕವಾಗುವಂಥ ಗೆಲುವನ್ನು ಪಂಚತಂತ್ರ ತಂದುಕೊಟ್ಟಿತು.
ಕಳೆದ ಐದು ವರ್ಷಗಳಲ್ಲಿ ಸೋನಾಲ್ ಮೊಂತೆರೋ ತುಳು ಮತ್ತು ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದರೂ, ಅವರಿಗೆ ಸಾಕಷ್ಟು ಹೆಸರು ಮತ್ತು ಜನಪ್ರಿಯತೆ ತಂದುಕೊಟ್ಟಿದ್ದು ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರ. ಇದನ್ನ ಸೋನಾಲ್ ಕೂಡ ಖುಷಿಯಿಂದ ಒಪ್ಪಿಕೊಳ್ಳುತ್ತಾರೆ.
ಐದು ವರ್ಷಗಳಲ್ಲಿ ತುಳು ಮತ್ತು ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ನನಗೆ ಸಿನಿ ಕೆರಿಯರ್ ನಲ್ಲಿ ದೊಡ್ಡ ಬ್ರೇಕ್ ಕೊಟ್ಟಿದ್ದು ಪಂಚತಂತ್ರ ಸಿನಿಮಾ. ಹಿಂದೆ ಮಾಡಿದ್ದ ಹಲವು ಸಿನಿಮಾಗಳು ಮತ್ತದರ ಪಾತ್ರಗಳು ಚೆನ್ನಾಗಿದ್ದರೂ, ಕಾರಣಾಂತರಗಳಿಂದ ಅವು ಆಡಿಯನ್ಸ್ ಗೆ ರೀಚ್ ಆಗಲಿಲ್ಲ. ನಾವು ಎಷ್ಟೇ ಒಳ್ಳೆಯ ಸಿನಿಮಾ, ಎಷ್ಟು ಒಳ್ಳೆಯ ಕ್ಯಾರೆಕ್ಟರ್ ಮಾಡಿದ್ರೂ ಅಂತಿಮವಾಗಿ ಅದು ಆಡಿಯನ್ಸ್ ಗೆ ತಲುಪಬೇಕು. ಆಗ ಮಾತ್ರ ನಾವು ಮಾಡಿದ್ದು ಸಾರ್ಥಕ. ಗುರುತಿಸಿಕೊಳ್ಳೊದಕ್ಕೂ ಸಾಧ್ಯ ಅನ್ನೊದು ಸೋನಾಲ್ ಮಾತು.
ಸದ್ಯ ಸೋನಲ್ ಮೊಂತೆರೋ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಮೊದಲು ತುಳು ಚಿತ್ರಪ್ರೇಮಿಗಳಿಗೆ ಬಿಟ್ಟರೆ, ಬೇರೆ ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿರದ ಈಕೆ ಪಂಚತಂತ್ರ ಗೆಲುವಿನ ನಂತರ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದರು. ಪಂಚತಂತ್ರದ ಪಾತ್ರ ಮತ್ತು ಅದನ್ನ ಸೋನಾಲ್ ನಿರ್ವಹಿಸಿದ್ದ ರೀತಿಗಳನ್ನೆಲ್ಲ ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡರು. ಕೊನೆಗೂ ಸೋನಾಲ್ ಪಂಚತಂತ್ರದ ಮೂಲಕ ಗೆಲುವನ್ನು ಗಿಟ್ಟಿಸಿಕೊಂಡರು. ಪಂಚತಂತ್ರ ಚಿತ್ರದ ನಂತರ ಸೋನಾಲ್ ಅವರನ್ನು ಹತ್ತಾರು ದೊಡ್ಡ ದೊಡ್ಡ ಆಫರ್ಸ್ ಹುಡುಕಿಕೊಂಡು ಬರುತ್ತಿವೆ. ಸ್ಟಾರ್ ನಟರ ದೊಡ್ಡ ಚಿತ್ರಗಳಲ್ಲಿ ನಟಿಸೋ ಅವಕಾಶಗಳನ್ನು ಸೋನಲ್ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್, ರಿಯಲ್ ಸ್ಟಾರ್ ಉಪೇಂದ್ರ ಜೊತೆ ಬುದ್ಧಿವಂತ-2 ಚಿತ್ರದಲ್ಲಿ ಸೋನಾಲ್ ಮೊಂತೆರೋ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಇದೆಲ್ಲದರ ನಡುವೆ ಪರಭಾಷೆಗಳಿಂದಲೂ ಕೂಡಾ ಸೋನಾಲ್‌ಗೆ ಬಿಗ್ ಆಫರ್‌ಗಳು ಬರಲಾರಂಭಿಸಿವೆ. ಇದೇ ವೇಳೆ ತಮ್ಮ ಸಿನಿಮಾ ಜರ್ನಿಗೆ ಐದು ವರ್ಷ ತುಂಬಿದ ಖುಷಿಯೂ ಸೋನಾಲ್ ಅವರನ್ನ ಹಿಗ್ಗುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.