ಸಾಲ ಬಡ್ಡಿದರ ಇಳಿಸಿದ ಎಸ್‌ಬಿಐ
ಹಿರಿಯರಿಗಾಗಿ ವೆಲ್‌ಕೇರ್ ಡೆಪಾಸಿಟ್ ಎಂಬ ಯೋಜನೆ
Team Udayavani, May 8, 2020, 1:45 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲೇ ಗರಿಷ್ಠ ಸಾಲ ನೀಡುವ ಬ್ಯಾಂಕ್ ಎನಿಸಿಕೊಂಡಿರುವ ಎಸ್‌ಬಿಐ, ಮಹತ್ವದ ತೀರ್ಮಾನ ಮಾಡಿದೆ. ಅದು ಸಾಲದ ಮೇಲೆ ಹಾಕುವ ಬಡ್ಡಿದರದಲ್ಲಿ 15 ಮೂಲ ಅಂಕ ಗಳನ್ನು (ಶೇ. 0.15) ಕಡಿತ ಮಾಡಿದೆ. ಅಂದರೆ ಮೇ 10 ರಿಂದ ಬಡ್ಡಿ ದರ ತುಸು ಕಡಿಮೆಯಾಗಲಿದೆ. ಈ ಕಡಿತದಿಂದ ಒಂದು ವರ್ಷದ ಎಂಸಿಎಲ್‌ಆರ್ (ಬಡ್ಡಿದರ
ನಿರ್ಧರಿಸಲು ಆರ್‌ಬಿಐ ನಿಗದಿಪಡಿಸಿರುವ ಮಾನದಂಡ) ಶೇ.7.40ರಿಂದ ಶೇ.7.25ಕ್ಕೆ ಇಳಿಕೆಯಾಗಲಿದೆ. ಸತತ 12ನೇ ಬಾರಿಗೆ ಎಸ್ ಬಿಐ ಹೀಗೆ ಇಳಿಕೆ ಮಾಡುತ್ತಿದೆ. ಇದರಿಂದ ಹಲವರಿಗೆ ಅನುಕೂಲವಾಗಲಿದೆ. ಮಾಸಿಕ ಕಂತುಗಳು ತಗ್ಗಲಿವೆ. ಉದಾಹರಣೆಗೆ 30 ವರ್ಷದ ಅವಧಿಗೆ 25 ಲಕ್ಷ ರೂ. ಮನೆ ಸಾಲ ತೆಗೆದುಕೊಂಡವರಿಗೆ ಮಾಸಿಕ 255 ರೂ. ಕಡಿಮೆಯಾಗಲಿದೆ.
ಹಿರಿಯ ನಾಗರಿಕರಿಗೆ ವೆಲ್ ಕೇರ್: ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವೆಲ್‌ಕೇರ್ ಡೆಪಾಸಿಟ್ ಎಂಬ ಯೋಜನೆ ಶುರು ಮಾಡಲಾಗಿದೆ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು
ಅವಧಿಗೆ ಇಡಲ್ಪಟ್ಟ ಠೇವಣಿಗಳಿಗೆ ಶೇ.0.30 ದರವನ್ನು ಏರಿಸಲಾಗಿದೆ. ಇದರಿಂದ ಹಿರಿಯರಿಗೆ ತುಸು ಲಾಭ ಹೆಚ್ಚಾಗುತ್ತದೆ. ಇದರ ಜೊತೆಗೆ ಮೂರು ವರ್ಷಗಳವರೆಗೆ ಇಡಲ್ಪಟ್ಟ ಠೇವಣಿಗಳ ಮೇಲಿನ ಬಡ್ಡಿದರವನ್ನು 20 ಮೂಲ ಅಂಕಗಳಷ್ಟು ಇಳಿಸಿದೆ. ಇದು ಮೇ 12ರಿಂದ ಜಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
Financial Policy: ಭದ್ರತೆ ಇಲ್ಲದ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಏರಿಕೆ
Repo Rate: ಸತತ 11ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್ ಶಕ್ತಿಕಾಂತ್ ದಾಸ್
Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; ಲಾಭ-ನಷ್ಟ ಕಂಡ ಷೇರು ಯಾವುದು?
Garudavega: ಹೈದರಾಬಾದ್ ನಲ್ಲಿ ಗರುಡವೇಗ ಗ್ಲೋಬಲ್ ಕಾರ್ಪೋರೇಟ್ ಕಚೇರಿ ಪ್ರಾರಂಭ
MUST WATCH
ಹೊಸ ಸೇರ್ಪಡೆ
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
San Francisco; ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ
Kaup: ಯುವ ಕ್ರಿಕೆಟಿಗ ನೇಣು ಬಿಗಿದುಕೊಂಡು ಆತ್ಮಹ*ತ್ಯೆ
Maharashtra: ಫಡ್ನವೀಸ್ ಸಂಪುಟಕ್ಕೆ 39 ಮಂದಿ ಸಚಿವರ ಸೇರ್ಪಡೆ
Udupi: ಹಿರಿಯ ಮಾತೆ ಭಾಗ್ಯ ಸತ್ಯನಾರಾಯಣ್‌ಗೆ ಶ್ರೀಕೃಷ್ಣ ಗೀತಾನುಗ್ರಹ ಪ್ರಶಸ್ತಿ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.