ಖಾಸಗಿ ಬಸ್ ಸಂಚಾರ ಆರಂಭ ನಿರೀಕ್ಷೆ ದೂರ
ಉಡುಪಿ ಜಿಲ್ಲೆಯೊಳಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸಾಧ್ಯತೆ
Team Udayavani, May 9, 2020, 6:35 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಖಾಸಗಿ ಬಸ್‌ಗಳ ಸಂಚಾರದ ಆರಂಭ ನಿರೀಕ್ಷೆ ಮತ್ತೆ ದೂರವಾಗಿದೆ. ಬೆಂಗಳೂರಿನಲ್ಲಿ ಶುಕ್ರವಾರ ಸಾರಿಗೆ ಆಯುಕ್ತರೊಂದಿಗೆ ಸಭೆ ನಡೆದಿದ್ದು, ರವಿವಾರ ಸಾರಿಗೆ ಸಚಿವರು ಬಸ್ ಮಾಲಕರ ಫೆಡರೇಷನ್ ಪದಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಲಾಕ್‌ಡೌನ್‌ಗೂ ಮುನ್ನ ಇದ್ದ ದರದಲ್ಲಿಯೇ ಬಸ್‌ಗಳು ಓಡಾಟ ನಡೆಸಬೇಕು. ಶೇ. 50ಕ್ಕಿಂತ ಅಧಿಕ ಪ್ರಯಾಣಿಕರು ಬಸ್ಸಿನಲ್ಲಿ ಇರಬಾರದು. ಸಾಮಾಜಿಕ ಅಂತರ ಕಾಪಾಡುವುದು ಸಹಿತ ಹಲ ವಾರು ವಿಚಾರಗಳನ್ನು ಪಾಲಿಸುವಂತೆ ಆಯುಕ್ತರು ಸೂಚಿಸಿ ದರು ಎನ್ನಲಾಗಿದೆ.
ಮಾಲಕರಿಂದ ನಿರಾಕರಣೆ
ಈ ಎಲ್ಲ ನಿಯಮಾವಳಿಗಳಂತೆ ಬಸ್‌ಗಳನ್ನು ಓಡಿಸುವುದರಿಂದ ನಷ್ಟ ಉಂಟಾಗುತ್ತದೆ. ಕನಿಷ್ಠ 3 ತಿಂಗಳ ತೆರಿಗೆ ಹಣ ರಿಯಾಯಿತಿ, ಟಿಕೆಟ್ ದರದಲ್ಲಿ ಶೇ. 50 ಹೆಚ್ಚಿಸುವ ಬೇಡಿಕೆ ಈಡೇರಿಸುವಂತೆ ಖಾಸಗಿ ಬಸ್ ಮಾಲಕರು ಮನವಿ ಮಾಡಿಕೊಂಡರು. ಬಸ್ ಟಿಕೆಟ್ ದರಗಳನ್ನು ಪರಿಷ್ಕರಿಸಿ ನೀಡಲಾಗುವುದು ಎಂದು ಸಾರಿಗೆ ಆಯುಕ್ತರು ತಿಳಿಸಿದರು.
ಮತ್ತೆ ವಿಳಂಬಬಸ್ ದರ ಪರಿಷ್ಕರಣೆ ಅಥವಾ ತೆರಿಗೆಯಲ್ಲಿ ವಿನಾಯಿತಿ ಕಲ್ಪಿಸಿದ್ದೇ ಆದಲ್ಲಿ ಮೇ 17ಕ್ಕೂ ಮುನ್ನ ಬಸ್‌ಗಳ ಓಡಾಟ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಎಲ್ಲ ವಿಚಾರಗಳು ರವಿವಾರ ಸಾರಿಗೆ ಸಚಿವರ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮತ್ತೆ ಚರ್ಚೆಯಾಗುವ ಸಾಧ್ಯತೆ ಗಳಿರುವುದರಿಂದ ಸಚಿವರ ನಿರ್ಧಾರದ ಮೇಲೆ ಅವಲಂ ಬಿತವಾಗಿರುತ್ತದೆ ಎನ್ನಲಾಗಿದೆ.
ಉಡುಪಿ: ಶೀಘ್ರ ಕೆಎಸ್ಸಾರ್ಟಿಸಿ ಸೇವೆ?
ಉಡುಪಿ ಜಿಲ್ಲೆ ಹಸುರು ವಲಯದಲ್ಲಿದ್ದ ಕಾರಣ ಜಿಲ್ಲೆಯೊಳಗೆ ಯಾವ ಯಾವ ಊರುಗಳಿಗೆ ಬಸ್ ಸಂಚಾರ ಅಗತ್ಯ ಎಂಬ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಮೇ 6ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದ್ದ ಸಭೆ ಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿ ದ್ದರು. ಅದರಂತೆ ಉಡುಪಿಯಿಂದ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಮಲ್ಪೆ, ಮಣಿಪಾಲ, ಅಲೆವೂರು ಭಾಗ ಗಳಿಗೆ ಕೆಎಸ್ಸಾರ್ಟಿಸಿ ಬಸ್‌ಗಳ ಸೇವೆ ಸೋಮವಾರದಿಂದ ಲಭಿಸುವ ಸಾಧ್ಯತೆಗಳಿವೆ ಎನ್ನಲಾ ಗಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಕಚೇರಿ ಆರಂಭವಾಗುವ ಹೊತ್ತಿನಲ್ಲಿ ಪ್ರಾಯೋಗಿಕವಾಗಿ ಸಂಚಾರ ಆರಂಭವಾಗಿ ಬೇಡಿಕೆ ಹೆಚ್ಚಿಗೆ ಇದ್ದಲ್ಲಿ ಟ್ರಿಪ್ ಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ.
ಈ ಹಿಂದಿನ ದರದಂತೆ ಶೇ. 50 ಪ್ರಯಾಣಿಕರನ್ನು ಮೀರದಂತೆ ಬಸ್ಸುಗಳು ಓಡಾಟ ನಡೆಸಬೇಕು ಎಂದು ಆಯುಕ್ತರು ಸೂಚಿಸಿದರು. ನಾವು ನೀಡಿರುವ ಬೇಡಿಕೆ ಈಡೇರದಿದ್ದಲ್ಲಿ ಲಾಕ್‌ಡೌನ್‌ಅವಧಿ ಮುಗಿದ ಅನಂತರವೇ ಸಂಚಾರ ಆರಂಭಿ ಸಲಾಗುವುದು.
-ರಾಜವರ್ಮ ಬಲ್ಲಾಳ್
ಅಧ್ಯಕ್ಷರು, ಕೆನರಾ ಬಸ್ ಮಾಲಕರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Squash event: ಭಾರತದ ಅನಾಹತ್,ಮಲೇಷ್ಯಾದ ಚಂದರನ್ ಚಾಂಪಿಯನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.