ಗೋಂಧಳಿ ಸಮಾಜಕ್ಕೂ ವಿಶೇಷ ಪ್ಯಾಕೇಜ್ ನೀಡಲಿ
Team Udayavani, May 9, 2020, 7:54 AM IST
ಬಳ್ಳಾರಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಅಲೆಮಾರಿ ಗೋಂಧಳಿ ಸಮಾಜಕ್ಕೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಸಂಘದ ಮುಖಂಡರು ಜಿಲ್ಲಾಡಳಿತಕ್ಕೆ ಶುಕ್ರವಾರ ಮನವಿ ಸಲ್ಲಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಕಷ್ಟಕ್ಕೊಳಗಾದವರಿಗೆ 1610 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿದ್ದು ಅಭಿನಂದನೀಯ. ಅಲೆಮಾರಿ ಸಮುದಾಯಕ್ಕೆ ಸೇರಿದ ಲಕ್ಷಾಂತರ ಕುಟುಂಬಗಳೂ ಜೀವನ ನಿರ್ವಹಣೆ ಮಾಡಲಾಗದೆ ತೊಂದರೆಗೊಳಗಾಗಿವೆ. ಗೋಂಧಳಿ, ಬುಡಬುಡಿಕೆ ಸಮುದಾಯದ ಅಲೆಮಾರಿ ಜನರು ಹೊಟ್ಟೆಗೆ ಹಿಡಿ ಅನ್ನ ಇಲ್ಲದೇ ದಯನೀಯ ಸ್ಥಿತಿ ತಲುಪಿದ್ದಾರೆ. ಗೊಂದಲ ಹಾಡುತ್ತ, ಬುಡಬುಡಿಕೆ ನುಡಿಸುತ್ತ ಭಿಕ್ಷಾಟನೆ ಮಾಡುವವರು ತೊಂದರೆಗೀಡಾಗಿದ್ದಾರೆ. ಕೌದಿ ಹೊಲಿಯುವವರು, ಪಾತ್ರೆ ವ್ಯಾಪಾರ, ಕಬ್ಬಿಣ ಗುಜರಿ, ಹಳೇ ತಗಡು, ಹಳೇ ಸಾಮಾನು ಮೋಡಕಾ, ತಳ್ಳು ಗಾಡಿ, ಬೈಕ್ ಮೂಲಕ ಹಳ್ಳಿ ಹಳ್ಳಿಗೆ ತೆರಳಿ ವ್ಯಾಪಾರ ಮಾಡುವ ಜನರ ಬದುಕು ದುಸ್ತರವಾಗಿದೆ.
ಹಳ್ಳಿಗಳಲ್ಲಿ ವ್ಯಾಪಾರ ಮಾಡಲು ಗ್ರಾಮಸ್ಥರು ಅವಕಾಶ ಮಾಡಿಕೊಡುತ್ತಿಲ್ಲ. ಜ್ಯೋತಿಷ್ಯ, ಗಿಣಿ ಶಾಸ್ತ್ರ ಹೇಳುವವರದ್ದೂ ಇದೇ ಸಮಸ್ಯೆ ಆಗಿದೆ. ದೆ„ನಂದಿನ ಜೀವನ ನಡೆಸಲು ಕಷ್ಟಕರವಾಗಿದೆ. ಹೀಗಾಗಿ ಮುಖ್ಯಮಂತ್ರಿಗಳು ಮುಂದಿನ ಅಧಿವೇಶನಕ್ಕೂ ಮೊದಲು ಅಲೆಮಾರಿ ಜನಾಂಗದ ಗೋಂಧಳಿ ಹಾಗೂ ಬುಡಬುಡಿಕೆ ಸಮುದಾಯದ ಜ್ಯೋತಿಷ್ಯ, ಗಿಣಿ ಶಾಸ್ತ್ರ, ಗುಜರಿ, ಭಾಂಡೆ, ಗುಜರಿ ವ್ಯಾಪಾರ ಮಾಡುವ ಜನರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಸವಿತಾ ಸಮಾಜ ಮತ್ತು ಮಡಿವಾಳ ಸಮಾಜದವರಿಗೆ ನೀಡಿದಂತೆ ಈ ಸಮುದಾಯದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ತಲಾ 10 ಸಾವಿರ ರೂ.ಜಮೆ ಮಾಡುವ ಮೂಲಕ ಆರ್ಥಿಕವಾಗಿ ಉತ್ತೇಜನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ವಾಕೋಡೆ ರಾಘವೇಂದ್ರ, ವಿನೋದ್ ಸಿಂಧೆ, ಪ್ರವೀಣ್ ವಾಕೋಡೆ, ಚಿರಂಜೀವಿ, ಚಂದ್ರಶೇಖರ್ ಸಿಂಧೆ, ಬಿ.ಧನರಾಜ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary ಜಿಲ್ಲಾಸ್ಪತ್ರೆಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ
Ballary; ಐವರು ಬಾಣಂತಿಯರ ಕುಟುಂಬಗಳಿಗೆ ಪರಿಹಾರ 5 ಲಕ್ಷಕ್ಕೇರಿಸಿದ ಸಿಎಂ
Ballari; ಬಾಣಂತಿಯರ ಸಾ*ವು: ಲೋಕಾದಿಂದ ಸುಮೋಟೋ ಕೇಸ್
BIMS Hospital: ಶ್ರೀರಾಮುಲು ನೇತೃತ್ವದಲ್ಲಿ ಸತ್ಯಾಗ್ರಹ; ಸ್ಥಳಕ್ಕೆ ಆರೋಗ್ಯ ಸಚಿವ ಭೇಟಿ
Ballari; ಮೃ*ತ ಬಾಣಂತಿಯರ ಮನೆಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
MUST WATCH
ಹೊಸ ಸೇರ್ಪಡೆ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ
Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.