ನ್ಯೂಜೆರ್ಸಿ: NRI ವೈದ್ಯರಿಬ್ಬರ ಬಲಿ
Team Udayavani, May 9, 2020, 10:06 AM IST
ಅಮೆರಿಕದ ನ್ಯೂಜೆರ್ಸಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಭಾರತೀಯ-ಅಮೆರಿಕನ್ ಅಪ್ಪ-ಮಗಳು ಕೋವಿಡ್ ಗೆ ಬಲಿಯಾದ ಘಟನೆ ಶುಕ್ರವಾರ ವರದಿಯಾಗಿದೆ. ನ್ಯೂಜೆರ್ಸಿ ಗವರ್ನರ್ ಫಿಲ್ ಮರ್ಫಿ ಅವರೇ ಈ ವಿಚಾರ ಬಹಿರಂಗಪಡಿಸಿದ್ದಾರೆ. ತಮ್ಮ ಜೀವವನ್ನೇ ಪಣವಾಗಿಟ್ಟು, ಕೋವಿಡ್ ರೋಗಿಗಳ ಸೇವೆಗೈಯುತ್ತಿದ್ದ ಅಪ್ಪ-ಮಗಳ ಸಾವು ನಮಗೆಲ್ಲರಿಗೂ ನೋವು ತಂದಿದೆ ಎಂದು ಹೇಳಿದ್ದಾರೆ.
ಹಲವು ದಶಕಗಳಿಂದಲೂ ನ್ಯೂಜೆರ್ಸಿಯ ಪ್ರಮುಖ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಸರ್ಜನ್ ಸತ್ಯೇಂದರ್ ದೇವ್ ಖನ್ನಾ (78) ಹಾಗೂ ಅವರ ಮಗಳಾದ ಡಾ| ಪ್ರಿಯಾ ಖನ್ನಾ (43) ಅವರೇ ಕೋವಿಡ್ ಗೆ ಬಲಿಯಾದವರು. ಪ್ರಿಯಾ ಅವರು ಇಂಟರ್ನಲ್ ಮೆಡಿಸಿನ್ ಮತ್ತು ನೆಫ್ರಾಲಜಿಯಲ್ಲಿ ಪರಿಣತಿ ಹೊಂದಿದ್ದರು. ತಾವು 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಕ್ಲಾರಾ ಮಾಸ್ ಮೆಡಿಕಲ್ ಸೆಂಟರ್ನಲ್ಲಿ ಸತ್ಯೇಂದರ್ ಮತ್ತು ಪ್ರಿಯಾ ಕೊನೆಯುಸಿರೆಳೆದಿದ್ದಾರೆ.
ಡಾ| ಸತ್ಯೇಂದರ್ ಹಾಗೂ ಪ್ರಿಯಾ ಖನ್ನಾ ಅವರು ಪರರ ಸೇವೆಗೆಂದೇ ಜೀವವನ್ನು ಮುಡುಪಾಗಿಟ್ಟರು. ಅವರ ಇಡೀ ಕುಟುಂಬವೇ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದೆ. ಅವರನ್ನು ಕಳೆದುಕೊಂಡ ನೋವನ್ನು ಪದಗಳಲ್ಲಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ಗವರ್ನರ್ ಮರ್ಫಿ ಟ್ವೀಟ್ ಮಾಡಿದ್ದಾರೆ.
ಸತ್ಯೇಂದರ್ ಪತ್ನಿ ಕೋಮಲೀಶ್ ಖನ್ನಾ ಮಕ್ಕಳ ತಜ್ಞೆಯಾಗಿದ್ದಾರೆ. ದಂಪತಿಯ ಮತ್ತಿಬ್ಬರು ಹೆಣ್ಣುಮಕ್ಕಳಾದ ಸುಗಂಧ ಖನ್ನಾ ಮತ್ತು ಅನಿಶಾ ಖನ್ನಾ ಅವರೂ ವೈದ್ಯರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.