ಸಂಚಾರ ಕಿಯೋಸ್ಕ್ ಉದ್ಘಾಟನೆ
Team Udayavani, May 9, 2020, 10:44 AM IST
ಸಂಚಾರ ಕಿಯೋಸ್ಕ್ ಉದ್ಘಾಟಿಸಿದ ಮೇಯರ್ ಎಂ.ಗೌತಮ್‌ಕುಮಾರ್.
ಬೆಂಗಳೂರು: ಸಂಚಾರ ಪೊಲೀಸರಿಗೆ ನೆರವಾಗುವ ಉದ್ದೇಶದಿಂದ ಬಿಬಿಎಂಪಿ ಮೊದಲ ಹಂತದಲ್ಲಿ ನಗರದ 23 ಕಡೆಗಳಲ್ಲಿ ಕಿಯೋಸ್ಕ್ ಗಳನ್ನು ಉದ್ಘಾಟನೆ ಮಾಡಿದ್ದು, ಹಡ್ಸನ್ ಸರ್ಕಲ್‌ನಲ್ಲಿ ನಿರ್ಮಾಣ ಮಾಡಿರುವ ಕಿಯೋಸ್ಕ್ (ವಿಶೇಷ ಪೊಲೀಸ್ ಚೌಕಿ)ಯನ್ನು ಶುಕ್ರವಾರ ಮೇಯರ್ ಎಂ.ಗೌತಮ್ ಕುಮಾರ್ ಉದ್ಘಾಟನೆ ಮಾಡಿದರು. ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ಕಿಯೋಸ್ಕ್ ನಿರ್ಮಾಣ ಮಾಡಿದ್ದು, ಒಂದು ಚೌಕಿಗೆ ಅಂದಾಜು 6ಲಕ್ಷ ರೂ. ಖರ್ಚಾಗಿದೆ. ಇದರ ನಿರ್ಮಾಣದಿಂದ ಪಾಲಿಕೆಗೆ ನೆಲಬಾಡಿಗೆ ಹಾಗೂ ಜಾಹೀರಾತಿನ ಮೂಲಕ ವಾರ್ಷಿಕ 20 ಲಕ್ಷರೂ. ಆದಾಯ ಬರಲಿದೆ. ಪೊಲೀಸ್ ಚೌಕಿಯಲ್ಲಿ ಸಂಚಾರ ಪೊಲೀಸರಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿನಂದಿಸುವ ಸಾಧನ, ಫ್ಯಾನ್, ವಾಕಿಟಾಕಿ, ಧ್ವನಿವರ್ಧಕ, ವಾಯು ಶುದಿಟಛೀಕರಣ ಯಂತ್ರ, ಕುರ್ಚಿ, ಸಿಸಿಟಿವಿ, ಎಲ್‌ಇಡಿ ಸ್ಕ್ರೀನ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಿಯೋಸ್ಕ್ನ ಮುಂದೆ 15 ಚ.ಮೀ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದ್ದು, ಇದರಲ್ಲಿ ಜಾಹೀರಾತು ನೀಡಲು ಅವಕಾಶ ನೀಡಲಾಗಿದೆ. ಇದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ನಗರದಲ್ಲಿ 340 ಚೌಕಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಆಯುಕ್ತ ಭಾಸ್ಕರ್‌ರಾವ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಉಪಮೇಯರ್ ರಾಮಮೋಹನರಾಜು, ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್, ಜೆಡಿಎಸ್ ನಾಯಕಿ ನೇತ್ರಾನಾರಾಯಣ್, ಮುಖ್ಯ ಎಂಜಿನಿಯರ್ ಸೋಮಶೇಖರ್, ಜಂಟಿ ಆಯುಕ್ತ ರವಿಕಾಂತೇ ಗೌಡ ಇತರರಿದ್ದರು.
ನಗರದ ವಿವಿಧೆಡೆ ಕಿಯೋಸ್ಕ್
ಮೊದಲ ಹಂತದಲ್ಲಿ ಹಡ್ಸನ್ ಸರ್ಕಲ್, ಪೊಲೀಸ್ ಕಾರ್ನರ್ (ವೃತ್ತ), ಟ್ರಿನಿಟಿ ಜಂಕ್ಷನ್, ಬಿಎಂಟಿಸಿ ಬಸ್ ನಿಲ್ದಾಣ, ಕೆ.ಎಚ್. ರಸ್ತೆ, ಶಾಂತಿನಗರ ಜಂಕ್ಷನ್, ಕ್ಯಾಶ್‌ಫಾರ್ಮ್ಸಿ ಜಂಕ್ಷನ್, ಒಪೇರಾ ಜಂಕ್ಷನ್, ಲೆಫ್ಸ್ಟೆಲ್ ಮುಂಭಾಗ, ಮಿನ್ಸ್ ವೃತ್ತ, ಗೋಪಾಲಗೌಡ ಜಂಕ್ಷನ್ (ವಿಧಾನಸೌಧ), ಕಾವೇರಿ ಚಿತ್ರಮಂದಿರ ಜಂಕ್ಷನ್, ಸದಾಶಿವನಗರ- ಭಾಷ್ಯಂ ಸರ್ಕಲ್, ಮೇಕ್ರಿ ಸರ್ಕಲ್, ಬಿಆರ್‌ವಿ ಜಂಕ್ಷನ್, ವೆಲ್ಲರ್ ಜಂಕ್ಷನ್, ರಾಜಾರಾಮ್ ಮೋಹನ್ ರಾಯ್ ರಸ್ತೆ, ಚಾಲುಕ್ಯ ಜಂಕ್ಷನ್, ವಿಡ್ಸನ್‌ಮನ್ರೊ ಜಂಕ್ಷನ್, ಕೆ.ಆರ್.ಸರ್ಕಲ್, ಸಿದ್ದಲಿಂಗ ಜಂಕ್ಷನ್, ಅನಿಲ್‌ಕುಂಬ್ಳೆ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ಆನಂದರಾವ್ ಸರ್ಕಲ್ ಜಂಕ್ಷನ್‌ಗಳಲ್ಲಿ ಕಿಯೋಸ್ಕ್ ಉದ್ಘಾಟನೆ ಮಾಡಲಾಗಿದೆ.
ಸಾಮಾಜಿಕ ಅಂತರವಿಲ್ಲ?
ನಗರದಲ್ಲಿ ಕೋವಿಡ್ ಸೋಂಕು ತೀವ್ರವಾಗಿ ಕಾಡುತ್ತಿದ್ದರೂ, ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಗುರುವಾರ ನಡೆದ ಕಿಯೋಸ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಅಂದಾಜು 100ಕ್ಕೂ ಹೆಚ್ಚು ಜನ ಒಂದೆಡೆ ಸೇರಿದರು. ಕಾರ್ಯಕ್ರಮ ಮುಗಿಯುವ ಹಂತದಲ್ಲಿ ಕಿಯೋಸ್ಕ್ ಧ್ವನಿವರ್ಧಕದ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೂ, ಯಾರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮುಂದಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.