ಆಸ್ತಿ ತಕರಾರು : ಪೆರಾಜೆಯಲ್ಲಿ ಯುವಕನ ಕೊಲೆ

ಪಾನಮತ್ತನಾಗಿ ಮನೆಗೆ ಹೊಕ್ಕ ಮೈದುನನಿಗೆ ಕಡಿದ ಅತ್ತಿಗೆ

Team Udayavani, May 9, 2020, 12:31 PM IST

ಆಸ್ತಿ ತಕರಾರು : ಪೆರಾಜೆಯಲ್ಲಿ ಯುವಕನ ಕೊಲೆ

ಸುಳ್ಯ : ಆಸ್ತಿ ತಕರಾರಿನ ಹಿನ್ನಲೆಯಲ್ಲಿ ತನ್ನ ಮನೆಗೆ ಪಾನಮತ್ತನಾಗಿ ಹೊಕ್ಕ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದ ಪರಿಣಾಮ ಮೈದುನ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಪೆರಾಜೆಯಲ್ಲಿ ನಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಕತ್ತಿಯಿಂದ ಕಡಿದ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೆರಾಜೆ ಗ್ರಾಮದ ಪೀಚೆ ಎಂಬಲ್ಲಿ  ಶುಕ್ರವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಪೀಚೆ ಮನೆಯ ಶ್ರೀಮತಿ ತಾರಿಣಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಸಂಬಂಧದಲ್ಲಿ ಇವರು ಅತ್ತಿಗೆ ಮತ್ತು ಮೈದುನ. ಇವರೊಳಗೆ ಆಸ್ತಿ ತಕರಾರು ಇತ್ತು. ನಿನ್ನೆ ಮಧ್ಯರಾತ್ರಿ ಉತ್ತರಕುಮಾರ ಪಾನಮತ್ತನಾಗಿ ತಾರಿಣಿಯವರ ಮನೆಯಂಗಳಕ್ಕೆ ಬಂದು ಬೈಯ್ಯತೊಡಗಿದರೆನ್ನಲಾಗಿದೆ ನಂತರ ಅವರ ಮನೆ ಹೊಕ್ಕಲು ಪ್ರಯತ್ನ ಪಟ್ಟಾಗ ತಾರಿಣಿ ಮತ್ತು ಆಕೆಯ ಪುತ್ರ ಧರಣೀಧರ ಕತ್ತಿಯಿದ ಕಡಿದಿದ್ದಾರೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಉತ್ತರಕುಮಾರ ಸ್ಥಳದಲ್ಲಿಯೇ ಸಾವನ್ನಪ್ಪಿದರೆನ್ನಲಾಗಿದೆ.

ಇಂದು ಬೆಳಿಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.

ಆಸ್ತಿ ವೈಷಮ್ಯ

ಪೀಚೆ ಮನೆಯ ದಿ.ಸಣ್ಣಯ್ಯ ಮತ್ತು ದಿ.ಮುದ್ದಯ್ಯ ಸಹೋದರರು. ಸಣ್ಣಯ್ಯ ಗೌಡರ ಪುತ್ರ ದಿ.ಕೇಶವ, ಇವರ ಪತ್ನಿ ತಾರಿಣಿ. ಮುದ್ದಯ್ಯರವರ ಪುತ್ರ ಉತ್ತರಕುಮಾರ. ಆಸ್ತಿ ವಿಂಗಡಣೆಗೆ ಸಂಬಂಧಿಸಿ ತಾರಿಣಿ ಹಾಗೂ ಉತ್ತರಕುಮಾರರ ಮಧ್ಯೆ ವಿವಾದವಿತ್ತು. ಅವರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೆಲವು ತಿಂಗಳ ಹಿಂದೆ ತಾರಿಣಿಯವರ ಮನೆಗೆ ಸಂಬಂಧಿಕರೊಬ್ಬರು ಬಂದಿದ್ದಾಗ ಇವರು ಮಾಡಿಕೊಟ್ಟ ಚಹಾದಲ್ಲಿ ವಿಷ ಬೆರೆಸಿದ ಆರೋಪವನ್ನು ಉತ್ತರ ಮತ್ತು ಭವಾನಿಶಂಕರರ ಮೇಲೆ ತಾರಿಣಿಯವರು ಹೊರಿಸಿದ್ದರು. ಈ ಬಗ್ಗೆ ತಾರಿಣಿಯವರು ಪೊಲೀಸರಿಗೆ ದೂರನ್ನು ಕೂಡಾ ನೀಡಿದ್ದರು. ಆದರೆ ಅದು ತನಿಖೆಯಾಗಿಲ್ಲವೆನ್ನಲಾಗಿದೆ.

ಟಾಪ್ ನ್ಯೂಸ್

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Karnataka: ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

2

Bantwal: ಬೀದಿ ಬದಿ ವ್ಯಾಪಾರ ಸ್ಥಳಾಂತರ

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಛಲವಾದಿ ನಾರಾಯಣಸ್ವಾಮಿ ಕುಟುಂಬ ಭೇಟಿ

Uppinangady:ಪ್ರಿ ವೆಡ್ಡಿಂಗ್‌ ಶೂಟಿಂಗ್‌ಗೆ ತೆರಳುತ್ತಿದ್ದಾಗ ಅಪಘಾತ:ಭಾವಿ ವಧು-ವರರಿಗೆ ಗಾಯ

Uppinangady:ಪ್ರಿ ವೆಡ್ಡಿಂಗ್‌ ಶೂಟಿಂಗ್‌ಗೆ ತೆರಳುತ್ತಿದ್ದಾಗ ಅಪಘಾತ:ಭಾವಿ ವಧು-ವರರಿಗೆ ಗಾಯ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.