ಡೆನ್ಮಾರ್ಕ್ ಜೂನ್ 8 ರೊಳಗೆ ಸಂಪೂರ್ಣ ನಿರ್ಬಂಧ ತೆರವು
Team Udayavani, May 9, 2020, 2:38 PM IST
ಡೆನ್ಮಾರ್ಕ್: ಲಾಕ್ಡೌನ್ ತೆರವಿಗೆ ಮುಂದಾಗಿರುವ ಡೆನ್ಮಾರ್ಕ್ ಸರಕಾರ, ಜೂನ್ 8 ರೊಳಗೆ ಬಹುತೇಕ ನಿರ್ಬಂಧಗಳನ್ನು ತೆರವುಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ.
ಎಲ್ಲ ರಾಜಕೀಯ ಪಕ್ಷಗಳೂ ಸರಕಾರದ ಯೋಜನೆಗೆ ಸಮ್ಮತಿಸಿದ್ದು, ಮೂರು ಹಂತದಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರೊಂದಿಗೇ ಪ್ರತಿ ಹಂತದ ವಿನಾಯಿತಿ ಘೋಷಣೆ ಬಳಿಕ ಮತ್ತೂಂದು ಹಂತದ ವಿನಾಯಿತಿ ನೀಡುವವರೆಗೆ ಕೂಲಂಕಷವಾಗಿ ಅಧ್ಯಯನ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲೂ ನಿರ್ಧರಿಸಲಾಗಿದೆ.
ಯೋಜನೆಯಂತೆ ಸುಸೂತ್ರವಾಗಿ ನಡೆದರೆ ಜೂನ್ 8 ರೊಳಗೆ ದೇಶದಲ್ಲಿ ಬಹುತೇಕ ಲಾಕ್ಡೌನ್ ನಿರ್ಬಂಧಗಳು ತೆರವಾಗಲಿವೆ.
ಈ ಬಗ್ಗೆ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಸ್ತುತ ಪರಿಸ್ಥಿತಿ ಕುರಿತು ಸವಿವರವಾಗಿ ಚರ್ಚಿಸಲಾಯಿತು. ಲಾಕ್ಡೌನ್ ನಿರ್ಬಂಧ ಸಡಿಲಿಕೆ ನಂತರ ಸೋಂಕು ಪ್ರಕರಣ ಹೆಚ್ಚಾಗಬಹುದೆಂಬ ಆತಂಕವೂ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಒಂದುವೇಳೆ ಸೋಂಕು ಪ್ರಕರಣ ಹೆಚ್ಚಾದರೆ ಸಡಿಲಿಸಿದ ನಿರ್ಬಂಧಗಳನ್ನು ಮತ್ತೆ ಹೇರಲು ಪ್ರತಿಪಕ್ಷಗಳು ತಮ್ಮ ಒಪ್ಪಿಗೆಯನ್ನು ಸೂಚಿಸಿವೆ.
ಸಾಮಾಜಿಕ ಅಂತರ ಪಾಲನೆಯ ಜತೆಗೆ ಈಗಾಗಲೇ ಸೂಚಿಸಲಾಗಿರುವ ಸುರಕ್ಷಾ ನಿಯಮಗಳನ್ನು ಜನರು ತಪ್ಪದೇ ಪಾಲಿಸಬೇಕು ಎಂದಿರುವ ಸರಕಾರ, ಜೂನ್ 8 ರ ಬಳಿಕ ಸುಮಾರು 50 ಮಂದಿ ಸೇರಲು ಅವಕಾಶ ಸಿಗಲಿದೆ. ಆದರೆ 500 ಮಂದಿ ಸೇರಿ ಕಾರ್ಯಕ್ರಮ ಇತ್ಯಾದಿ ಮಾಡಲು ಅನುಮತಿ ಸಿಗಬೇಕೆಂದರೆ ಆಗಸ್ಟ್ 31 ರವರೆಗೆ ಕಾಯಬೇಕು ಎಂದು ತಿಳಿಸಿದೆ.
ಡೆನ್ಮಾರ್ಕ್ನಲ್ಲಿ ಇದುವರೆಗೆ 10, 218 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 522 ಮಂದಿ ಮೃತರಾಗಿದ್ದು, 7, 927 ಮಂದಿ ಗುಣಮುಖರಾಗಿದ್ದಾರೆ. ಯುರೋಪಿನ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಡೆನ್ಮಾರ್ಕ್ ಬಹಳ ಬೇಗನೇ ಲಾಕ್ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಮಾರ್ಚ್ 11 ರ ವೇಳೆಗೆ ಹೆಚ್ಚು ಜನ ಕೂಡುವುದನ್ನು ನಿಷೇಧಿಸಿತ್ತು. ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಸೂಚಿಸಿತ್ತು. ಪ್ರಜೆಗಳಿಗೆ ಮನೆಯಲ್ಲೇ ಇರುವಂತೆ ಸೂಚಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.