ಅಮೆರಿಕ : 20 ಮಿಲಿಯನ್ ಉದ್ಯೋಗ ನಷ್ಟ
Team Udayavani, May 9, 2020, 2:51 PM IST
ನ್ಯೂಯಾರ್ಕ್: ಕೋವಿಡ್ ಕಾರಣದಿಂದ ಅಮೆರಿಕದಲ್ಲಿ ಸುಮಾರು 20 ಮಿಲಿಯನ್ ನಿರುದ್ಯೋಗಿಗಳು ಸೃಷ್ಟಿಯಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಎಂದೂ ಕಾಣದಂಥ ಆರ್ಥಿಕ ಸಂಕಷ್ಟವನ್ನು ಕೊರೊನಾ ತಂದೊಡ್ಡಿದೆ. ಇದರ ಪರಿಣಾಮವಾಗಿ ಹಲವು ಉದ್ಯಮಗಳು, ಕಂಪೆನಿಗಳು ಬಾಗಿಲು ಹಾಕಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ.
ಅಮೆರಿಕದ ಕಾರ್ಮಿಕ ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ, ಪ್ರಸ್ತು ಶೇ. 14.7 ಕ್ಕೆ ಏರಿದೆ. ಮಾರ್ಚ್ ಆರಂಭದಲ್ಲಿ ಈ ಪ್ರಮಾಣ ಕೇವಲ ಶೇ. 4.4 ರಷ್ಟಿತ್ತು. ಫೆಬ್ರವರಿ ತಿಂಗಳಿನಲ್ಲಿ ಶೇ. 3.5 ರಷ್ಟಿತ್ತು. ಈ ಹೊತ್ತಿನಲ್ಲೇ ಕೋವಿಡ್ ಸೋಂಕು ಹರಡತೊಡಗಿ ಲಾಕ್‌ಡೌನ್ ಜಾರಿಗೊಳಿಸಬೇಕಾಯಿತು ಎಂದು ವಿವರಿಸಿದೆ. ಕಳೆದ ದಶಕದಲ್ಲಿ ಸೃಷ್ಟಿಸಿದ ಉದ್ಯೋಗವೆಲ್ಲಾ ಕೇವಲ ಎರಡೇ ತಿಂಗಳಿನಲ್ಲಿ ಕೋವಿಡ್ ನಿಂದ ನಾಶವಾಗಿವೆ. 1933 ರಲ್ಲಿ ನಿರುದ್ಯೋಗ ಪ್ರಮಾಣ ಶೇ. 25 ರಷ್ಟಿತ್ತು ಎಂದಿರುವ ಇಲಾಖೆಯು, ಮುಂದಿನ ಪರಿಣಾಮವನ್ನು ಊಹಿಸಲಾಗದು ಎಂದಿದೆ. 1982 ರಲ್ಲಿ ಹಲವು ಕಾರಣಗಳಿಂದ ನಿರುದ್ಯೋಗ ಪ್ರಮಾಣ ಶೇ. 10.8 ಕ್ಕೆ ಏರಿತ್ತು. ಎರಡನೇ ವಿಶ್ವ ಮಹಾಯುದ್ಧದ ಸಂದರ್ಭ, 1945 ರ ಸೆಪ್ಟೆಂಬರ್‌ನಲ್ಲಿ ಅಂಥ ಸಂದರ್ಭದಲ್ಲಿ ಒಂದು ತಿಂಗಳಿನಲ್ಲಿ ಸುಮಾರು 2 ಮಿಲಿಯನ್ ಉದ್ಯೋಗ ನಷ್ಟವಾಗಿತ್ತು. 2009 ರ ಎಪ್ರಿಲ್‌ನಲ್ಲಿ ಆರ್ಥಿಕ ಹಿಂಜರಿತದ ಕಾರಣದಿಂದ 8 ಮಿಲಿಯನ್ ಉದ್ಯೋಗಗಳು ನಷ್ಟವಾಗಿದ್ದವು. ಈ ಬಾರಿ ಆರ್ಥಿಕತೆಯ ಎಲ್ಲ ವಲಯಗಳಲ್ಲೂ ಉದ್ಯೋಗ ನಷ್ಟವಾಗಿದೆ. ಅಥಿತ್ಯೋದ್ಯಮದಲ್ಲಿ ಸುಮಾರು 7.7 ಮಿಲಿಯನ್ ಉದ್ಯೋಗ ನಷ್ಟವಾಗಿದ್ದರೆ, ಶಿಕ್ಷಣ-ಆರೋಗ್ಯ ವಲಯದಲ್ಲಿ 2.5 ಮಿಲಿಯನ್, ಚಿಲ್ಲರೆ ವ್ಯಾಪಾರ ಉದ್ಯಮ ವಲಯ 2.1 ಮಿಲಿಯನ್, ಉತ್ಪಾದನಾ ಕ್ಷೇತ್ರದಲ್ಲಿ 1.3 ಮಿಲಿಯನ್ ನಷ್ಟು ಉದ್ಯೋಗ ನಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.