ಕೋವಿಡ್-19 ಎನ್ನುವುದು ಟೆಸ್ಟ್ ಪಂದ್ಯವಿದ್ದಂತೆ: ಅನಿಲ್ ಕುಂಬ್ಳೆ
Team Udayavani, May 9, 2020, 7:59 PM IST
ಬೆಂಗಳೂರು: ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ವೈರಸ್ ವಿರುದ್ಧದ ಹೋರಾಟ ಟೆಸ್ಟ್ ಮ್ಯಾಚ್ ಇದ್ದಂತೆ, ದೇಶದ ಪ್ರತಿಯೊಬ್ಬ ನಾಗರಿಕರು ಜತೆಗೂಡಿ ವಿಜಯಶಾಲಿಯಾಗಿ ಹೊರಹೊಮ್ಮಬೇಕು ಎಂದು ಭಾರತ ತಂಡದ ಮಾಜಿ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಕೋವಿಡ್-19 ವೈರಸ್ ವಿರುದ್ಧ ನಾವೆಲ್ಲರೂ ಜತೆಗೂಡಿ ಹೋರಾಟ ನಡೆಸಬೇಕು. ಕೋವಿಡ್-19 ಒಂದು ರೀತಿ ಐದು ದಿನಗಳ ಟೆಸ್ಟ್ ಪಂದ್ಯವಿದ್ದಂತೆ. ದೀರ್ಘಕಾಲ ಆಡುವಂತಹ ಪಂದ್ಯ ಇದಾಗಿದೆ ಎಂದು ತಮ್ಮ ಅಧಿಕೃತ ಟ್ವಿಟರ್‌ಖಾತೆಯಲ್ಲಿ ವೀಡಿಯೋದಲ್ಲಿ ಕುಂಬ್ಳೆ ತಿಳಿಸಿದ್ದಾರೆ.
ಟೆಸ್ಟ್ ಪಂದ್ಯ ಎರಡು ಇನ್ನಿಂಗ್ಸ್‌ಗಳನ್ನು ಒಳಗೊಂಡಿರುತ್ತದೆ. ಆದರೆ, ಕೋವಿಡ್-19 ಹೋರಾಟದಲ್ಲಿ ಇದಕ್ಕಿಂತ ಹೆಚ್ಚು ಇನ್ನಿಂಗ್ಸ್‌ಗಳಿರುತ್ತವೆ ಆದ್ದರಿಂದ ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಮುನ್ನಡೆ ಸಾಧಿಸಿದ್ದೇವೆಂದು ಬೀಗುವುದು ಬೇಡ. ಏಕೆಂದರೆ, ದ್ವಿತೀಯ ಇನ್ನಿಂಗ್ಸ್ ಅದಕ್ಕಿಂತಲೂ ಅತ್ಯಂತ ಕಠಿನವಾಗಿರುತ್ತದೆ ಎಂದು ಕುಂಬ್ಳೆ ಜನರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
“ಕೋವಿಡ್-19 ಎಂಬ ಪಂದ್ಯವನ್ನು ನಾವು ಗೆಲ್ಲಲೇಬೇಕು. ಆದ್ದರಿಂದ ಅಧಿಕಾರಿಗಳು ನೀಡಿದ ಸೂಚನೆಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಮತ್ತು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕುಂಬ್ಳೆ ಜನರಲ್ಲಿ ಒತ್ತಾಯ ಮಾಡಿದ್ದಾರೆ.
“ಎಲ್ಲ ಕೋವಿಡ್-19ಯೋಧರಿಗೆ ಧನ್ಯವಾದ ಹೇಳಲು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ವೈದ್ಯರು, ನರ್ಸ್‌ಗಳು, ಪೌರ ಕಾರ್ಮಿಕರು, ಸ್ವಯಂಸೇವಕರು, ಪೊಲೀಸರು ಈ ರೋಗವನ್ನು ಹೊಡೆದೋಡಿಸುವಲ್ಲಿ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ನಿಜಕ್ಕೂ ಇವರೆಲ್ಲರ ಸೇವೆ ಶ್ರೇಷ್ಠವಾದುದು. ಇವರೆಲ್ಲರಿಗೂ ಹ್ಯಾಟ್ಸಾಪ್ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.