ದೃಷ್ಟಿ ನರ ಶಾಶ್ವತ ಹಾನಿಗೆ ಕಾರಣ ಗ್ಲುಕೊಮಾ


Team Udayavani, May 10, 2020, 5:35 AM IST

ದೃಷ್ಟಿ ನರ ಶಾಶ್ವತ ಹಾನಿಗೆ ಕಾರಣ ಗ್ಲುಕೊಮಾ

ಪ್ರತೀ ವರ್ಷ ಮಾರ್ಚ್‌ ದ್ವಿತೀಯ ವಾರವನ್ನು ವಿಶ್ವ ಗ್ಲುಕೊಮಾ ಸಪ್ತಾಹವನ್ನಾಗಿ ಆಚರಿಸುವ ಪರಿಪಾಠ ಇದೆ. ದೃಷ್ಟಿ ನರವನ್ನು ಶಾಶ್ವತವಾಗಿ ಹಾನಿಗೀಡು ಮಾಡುವ ಗ್ಲುಕೊಮಾ ಕಾಯಿಲೆಯ ಬಗ್ಗೆ ತಿಳಿವಳಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಇತ್ತೀಚೆಗಷ್ಟೇ ಈ ಆಚರಣೆ ಪೂರ್ಣಗೊಂಡಿದ್ದರೂ ಗ್ಲುಕೊಮಾದ ಬಗೆಗಿನ ಜಾಗೃತಿ ಸದಾ ಕಾಲ ನಮ್ಮಲ್ಲಿರಬೇಕು.

ಗ್ಲುಕೊಮಾ ಕಾಯಿಲೆಯು ನಿಧಾನವಾಗಿ ಕಣ್ಣಿನ ದೃಷ್ಟಿ (ಆಪ್ಟಿಕ್‌ ನರ) ಯನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಗ್ಲುಕೊಮಾದಲ್ಲಿ ಸಾಮಾನ್ಯವಾಗಿ ಕಣ್ಣಿನ ಒತ್ತಡವು ಜಾಸ್ತಿಯಾಗಿರುತ್ತದೆ ಮತ್ತು ಕಣ್ಣಿನ ನರದಲ್ಲಿ ರಕ್ತದ ಪೂರೈಕೆಯು ಅಸಮರ್ಪಕವಾಗಿರುತ್ತದೆ.

ವಿಶ್ವಾದ್ಯಂತ ಬದಲಾಯಿಸಲಾಗದ ಕುರುಡುತನಕ್ಕೆ ಇದು ಸಾಮಾನ್ಯ ಕಾರಣವಾಗಿದೆ.

ಗ್ಲುಕೊಮಾವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೂ ಒಂದು ವೇಳೆ ಬೇಗ ಪತ್ತೆಯಾದಲ್ಲಿ ಕುರುಡುತನವನ್ನು ತಡೆಯಬಹುದು. ನಿಯಮಿತ ಕಾಲದಲ್ಲಿ ಕಣ್ಣಿನ ತಪಾಸಣೆ ಮಾಡಿಸುವುದರಿಂದ ಗ್ಲುಕೊಮಾವನ್ನು ತಡೆಗಟ್ಟಬಹುದು. ಒಂದು ಸಲ ಕಾಯಿಲೆ ಪತ್ತೆಯಾದಲ್ಲಿ ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಹೆಚ್ಚು ಅಪಾಯದ ಗುಂಪು
ಗ್ಲುಕೊಮಾ ಯಾವ ಕಣ್ಣಿಗೂ ಬರಬಹುದು. ಈ ಕೆಳಗಿನ ಅಂಶಗಳಲ್ಲಿ ಅದನ್ನು ಹೆಚ್ಚಾಗಿ ಕಾಣಬಹುದು.
1. 40ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ
2. ಕಣ್ಣಿನ ಒತ್ತಡ ಜಾಸ್ತಿ ಇದ್ದವರಲ್ಲಿ
3. ವಂಶ ಪಾರಂಪರ್ಯವಾಗಿ
4. ಸಮೀಪ ದೃಷ್ಟಿ ದೋಷ ಇರುವವರಲ್ಲಿ
5. ಮಧುಮೇಹ ಕಾಯಿಲೆ ಇರುವವರಲ್ಲಿ
6. ಧೂಮಪಾನ ಮಾಡುವವರಲ್ಲಿ

ಗ್ಲುಕೊಮಾ ಹೇಗೆ
ಕಂಡುಹಿಡಿಯಲಾಗುತ್ತದೆ?
ಈ ಕೆಳಗಿನ ಪರೀಕ್ಷೆಗಳನ್ನು ಮಾಡಲಾಗುವುದು:
1. ಕಣ್ಣಿನ ಗುಡ್ಡೆಯ ಒತ್ತಡದ ಅಳತೆಯನ್ನು ಮಾಡಲಾಗುವುದು
2. ಕಣ್ಣಿನ ನರದ ಹಾನಿಯನ್ನು ಲೆನ್ಸ್‌ಗಳಿಂದ ಪರೀಕ್ಷೆ ಮಾಡಲಾಗುವುದು
3. ಗೋನಿಯೋಸ್ಕೋಪಿ
4. ದೃಷ್ಟಿಯ ವಲಯ (ವಿಷುವಲ್‌ ಫೀಲ್ಡ್‌) ಪರೀಕ್ಷೆಯನ್ನು ಮಾಡಲಾಗುವುದು
5. ಕಣ್ಣಿನ ನರದ ಮತ್ತು ಪಾರಪಟಲದ ಪರೀಕ್ಷೆಯನ್ನು ಮಾಡಲಾಗುವುದು (ಒಸಿಟಿ)

ಗ್ಲುಕೊಮಾದ ವಿಧಗಳು
ತೆರೆದ ಕೋನದ ಗ್ಲುಕೊಮಾ (ಓಪನ್‌ ಆ್ಯಂಗಲ್‌ ಗ್ಲುಕೊಮಾ)
-ಸಾಮಾನ್ಯವಾಗಿ ಗ್ಲುಕೊಮಾದ ಯಾವುದೇ ಲಕ್ಷಣಗಳು ರೋಗಿಗೆ ತಿಳಿಯುವುದಿಲ್ಲ. ಆದರೂ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಕಣ್ಣಿನ ದೃಷ್ಟಿ ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಡ್ರಾಪ್ಸ್‌ ಮುಖಾಂತರ ಕಣ್ಣಿನ ಒತ್ತಡವನ್ನು ನಿಯಂತ್ರಣದಲ್ಲಿಡಬಹುದು.
-ಶಸ್ತ್ರಚಿಕಿತ್ಸೆ ಲಭ್ಯವಿರುವ ಮತ್ತೂಂದು ಚಿಕಿತ್ಸಾ ವಿಧಾನವಾಗಿದೆ.

ಮುಚ್ಚಿದ ಕೋನದ ಗ್ಲುಕೊಮಾ (ಆ್ಯಂಗಲ್‌ ಕ್ಲೋಶರ್‌ ಗ್ಲುಕೊಮಾ)
-ಮುಚ್ಚಿದ ಕೋನದ ಗ್ಲುಕೊಮಾದಿಂದ ಕಣ್ಣಿನ ಒತ್ತಡ ಹೆಚ್ಚುತ್ತದೆ ಮತ್ತು ನೋವು, ಕಾಮನ ಬಿಲ್ಲಿನ ಬಣ್ಣ ಕಾಣಿಸಿಕೊಳ್ಳಬಹುದು.
-ವಾಂತಿ ಬರಬಹುದು. ಇದಕ್ಕೆ ಲೇಸರ್‌ ಚಿಕಿತ್ಸೆ ಮಾಡಿಸಿಕೊಳ್ಳಬೇಕು.ಕಂಜೆನೈಟಲ್‌ ಗ್ಲುಕೊಮಾ
-ಕೆಲವು ಮಕ್ಕಳಿಗೆ ಹುಟ್ಟುವಾಗಲೇ ಕಣ್ಣಿನ ಒತ್ತಡ ಜಾಸ್ತಿ ಇರಬಹುದು. ಅದನ್ನು ಶಸ್ತ್ರಚಿಕಿತ್ಸೆಯ ಮುಖಾಂತರವೇ ನಿಯಂತ್ರಣಗೊಳಿಸಬೇಕಾಗುತ್ತದೆ.ಸೆಕೆಂಡರಿ ಗ್ಲುಕೊಮಾ
-ಕಣ್ಣಿಗೆ ಪೆಟ್ಟಾಗುವುದು, ಕೆಲವು ಔಷಧಗಳಿಂದ (ಸಾಮಾನ್ಯವಾಗಿ ಸ್ಟಿರಾಯ್ಡ್), ಗಡ್ಡೆ ಇವುಗಳಿಂದ ಕಣ್ಣಿನ ಒತ್ತಡ ಜಾಸ್ತಿಯಾಗಬಹುದು.

ಗ್ಲುಕೊಮಾದಲ್ಲಿ “ಮಾಡು’ ಮತ್ತು “ಮಾಡಬಾರದು’

ಮಾಡು 
– ಗ್ಲುಕೊಮಾ ಲಕ್ಷಣರಹಿತವಾಗಿದೆ. ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಗ್ಲುಕೊಮಾ ತಪಾಸಣೆ ಮಾಡಿಸಿಕೊಳ್ಳಿ.
– ವೈದ್ಯರ ಸಲಹೆಯಂತೆ ನಿಯಮಿತವಾಗಿ ಔಷಧಗಳನ್ನೂ ಬಳಸಿ.
– ವೈದ್ಯರನ್ನು ಭೇಟಿಯಾಗುವ ದಿನ ನೀವು ಕಣ್ಣಿಗೆ ಡ್ರಾಪ್ಸ್‌ (ಹನಿ)ಗಳನ್ನು ಬಳಸಬೇಕು.

ಮಾಡಬಾರದು 
– ಅಲರ್ಜಿಗೆ ವೈದ್ಯರ ಸೂಚನೆಯಿಲ್ಲದೆ ಔಷಧ (ಸ್ಟಿರಾಯ್ಡ) ತೆಗೆದುಕೊಳ್ಳಬೇಡಿ.
– ಕಾಲ ಕಾಲಕ್ಕೆ ವೈದ್ಯರನ್ನು ಭೇಟಿಯಾಗಿ ಕಣ್ಣಿನ ತಪಾಸಣೆ ಮಾಡುವುದನ್ನು ತಪ್ಪಿಸಬೇಡಿ.

ಡಾ| ನೀತಾ ಕೆ.ಐ.ಆರ್‌.
ಅಸಿಸ್ಟೆಂಟ್‌ ಪ್ರೊಫೆಸರ್‌,
ಓಫ‌¤ಮಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.