ಮೂತ್ರಪಿಂಡ ಕಾಯಿಲೆಗಳು; ಪತ್ತೆ ಹಚ್ಚುವುದು ಮತ್ತು ತಡೆಗಟ್ಟುವ ಕ್ರಮಗಳು


Team Udayavani, May 10, 2020, 5:45 AM IST

ಮೂತ್ರಪಿಂಡ ಕಾಯಿಲೆಗಳು; ಪತ್ತೆ ಹಚ್ಚುವುದು ಮತ್ತು ತಡೆಗಟ್ಟುವ ಕ್ರಮಗಳು

ದೇಹದಿಂದ ವಿಷಾಂಶಗಳ ವಿಸರ್ಜನೆಯಂತಹ ಪ್ರಧಾನ ಪಾತ್ರವನ್ನು ನಿರ್ವಹಿಸುವ ಮೂತ್ರಪಿಂಡ ದೇಹದ ಪ್ರಧಾನ ಅಂಗಗಳಲ್ಲಿ ಒಂದು. ಇವು ಅಲಸಂಡೆ ಬೀಜದ ಆಕಾರದಲ್ಲಿದ್ದು, ಬೆನ್ನುಮೂಳೆಯ ಅಕ್ಕಪಕ್ಕ ಹೊಟ್ಟೆಯ ಮೇಲ್ಭಾಗದಲ್ಲಿ ಇರುತ್ತವೆ. ಮೂತ್ರಪಿಂಡಗಳು ಒಂದು ಮುಷ್ಟಿಯ ಗಾತ್ರದವಾಗಿರುತ್ತವೆ. ಪ್ರತೀ ಮೂತ್ರಪಿಂಡವೂ ತನ್ನೊಳಗೆ ಸುಮಾರು 10 ಲಕ್ಷ ನೆಫ್ರಾನ್‌ಗಳನ್ನು ಹೊಂದಿರುತ್ತದೆ. ಈ ನೆಫ್ರಾನ್‌ಗಳೇ ದೇಹದ ರಕ್ತವನ್ನು ಸೋಸಿ ವಿಷಾಂಶಗಳನ್ನು ಹೊರಹಾಕುವ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ.

ಅವುಗಳ ಮುಖ್ಯ ಕಾರ್ಯಚಟುವಟಿಕೆಗಳು ಹೀಗಿವೆ
– ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಸೋಸಿ ತೆಗೆದು ಪರಿಶುದ್ಧಗೊಳಿಸುವುದು ಮತ್ತು ಮೂತ್ರವನ್ನು ಉತ್ಪತ್ತಿ ಮಾಡುವುದು.
– ದೇಹದಲ್ಲಿ ಇಲೆಕ್ಟ್ರೊಲೈಟ್‌ ಸಮತೋಲನವನ್ನು ಕಾಪಾಡುವುದು.
– ಆಮ್ಲ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುವುದು.
– ರಕ್ತದೊತ್ತಡ ನಿಯಂತ್ರಣದಲ್ಲಿ ಸಹಕರಿಸುವುದು.
– ನೀರಿನಂಶವನ್ನು ಸಮತೋಲನದಲ್ಲಿ ಇರಿಸುವುದು.
– ರಕ್ತದಲ್ಲಿಯ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವುದು.
– ಎಲುಬುಗಳ ಆರೋಗ್ಯಕ್ಕೆ ಅಗತ್ಯವಾಗಿರುವ ವಿಟಮಿನ್‌ ಡಿ ಉತ್ಪಾದಿಸುವುದು.

ಮೂತ್ರಪಿಂಡ ಕಾಯಿಲೆಗಳ
ಕೆಲವು ಲಕ್ಷಣಗಳು
– ಮೂತ್ರ ಉತ್ಪಾದನೆಯಲ್ಲಿ ವ್ಯತ್ಯಾಸ – ಮೂತ್ರ ಪ್ರಮಾಣದಲ್ಲಿ ಹೆಚ್ಚಳ, ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಅಥವಾ ಮೂತ್ರ ಪ್ರಮಾಣ ಕಡಿಮೆಯಾಗುವುದು.
– ರಕ್ತದೊತ್ತಡ ಹೆಚ್ಚಳ.
– ದ್ರವಾಂಶ ದೇಹದಲ್ಲಿ ಉಳಿದುಕೊಳ್ಳುವುದು ಮತ್ತು ಪಾದ/ ಹೊಟ್ಟೆ/ ಮುಖ ಬಾತುಕೊಳ್ಳುವುದು (ಎಡೆಮಾ)
– ತೀವ್ರ ದಣಿವು
– ಕಡು ಬಣ್ಣದ ಮೂತ್ರ ಅಥವಾ ಮೂತ್ರ ನೊರೆಯಿಂದ ಕೂಡಿರುವುದು ಯಾ ರಕ್ತ ಸಹಿತವಾಗಿರುವುದು.

ಮೂತ್ರಪಿಂಡಗಳ ಆರೋಗ್ಯ ಚೆನ್ನಾಗಿಲ್ಲ ಎಂಬುದನ್ನು ಖಚಿತಪಡಿಸುವ ತಪಾಸಣೆಗಳೆಂದರೆ:
– ರಕ್ತದೊತ್ತಡ ಪರೀಕ್ಷೆ
– ಪ್ರೊಟೀನ್‌, ರಕ್ತ ಮತ್ತು ಅಸಹಜ ಅಂಶಗಳು ಇವೆಯೇ ಎಂಬುದನ್ನು ತಿಳಿಸುವ ಮೂತ್ರ ಪರೀಕ್ಷೆ
– ರಕ್ತದಲ್ಲಿ ಕ್ರಿಯಾಟಿನಿನ್‌ ಅಂಶ ಹೆಚ್ಚಳ
– ಮೂತ್ರಪಿಂಡಗಳ ಅಲ್ಟ್ರಾಸೌಂಡ್‌ ಪರೀಕ್ಷೆ

ಯಾವುದೇ ರೋಗವು ಮೂರು ತಿಂಗಳುಗಳಿಗಿಂತ ಹೆಚ್ಚು ಕಾಲ ಇದ್ದರೆ ಅದನ್ನು ಕ್ರಾನಿಕ್‌ ಅಥವಾ ದೀರ್ಘ‌ಕಾಲಿಕ ಎಂಬುದಾಗಿ ಗುರುತಿಸಲಾಗುತ್ತದೆ. ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆಗಳಿಗೆ ಕೆಲವು ಕಾರಣಗಳೆಂದರೆ:
– ಅನಿಯಂತ್ರಿತ ಮಧುಮೇಹ
– ಅನಿಯಂತ್ರಿತ ಅಧಿಕ ರಕ್ತದೊತ್ತಡ
– ಆನುವಂಶಿಕ ಕಾಯಿಲೆಗಳು

ಮೂತ್ರಪಿಂಡ ಕಾಯಿಲೆಗಳು ಉಂಟಾಗುವ
ಅಪಾಯ ಯಾರಿಗೆ ಹೆಚ್ಚಿರುತ್ತದೆ?
– ಅಧಿಕ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹಗಳನ್ನು ದೀರ್ಘ‌ಕಾಲದಿಂದ ಹೊಂದಿರುವವರು.
– ಧೂಮಪಾನಿಗಳು
-ಬೊಜ್ಜು ಹೊಂದಿರುವವರು
– ಮೂತ್ರಪಿಂಡ ಕಾಯಿಲೆಗಳ ಕೌಟುಂಬಿಕ ಇತಿಹಾಸ ಹೊಂದಿರುವವರು
– ನೋವು ನಿವಾರಕ ಔಷಧಗಳನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳುವವರು

ಮೂತ್ರಪಿಂಡ ಕಾಯಿಲೆಗಳನ್ನು ತಡೆಗಟ್ಟಲು ಸಲಹೆಗಳು ಹೀಗಿವೆ:
– ನಿಯಮಿತವಾಗಿ ವ್ಯಾಯಾಮ ಮಾಡಬೇಕು.
– ಆಹಾರಾಭ್ಯಾಸ ಸಮರ್ಪಕವಾಗಿರಬೇಕು.
– ರಕ್ತದಲ್ಲಿ ಸಕ್ಕರೆಯ ಅಂಶ ಮತ್ತು ರಕ್ತದೊತ್ತಡಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು.
– ಸರಿಯಾದ ಪ್ರಮಾಣದಲ್ಲಿ ದ್ರವಾಹಾರ/ ನೀರು ಸೇವಿಸಬೇಕು.
– ಧೂಮಪಾನವನ್ನು ತ್ಯಜಿಸಬೇಕು.
– ಅನಗತ್ಯವಾಗಿ ಔಷಧ, ಅದರಲ್ಲೂ ನೋವು ನಿವಾರಕಗಳ ಉಪಯೋಗ ನಿಲ್ಲಿಸಬೇಕು.
– ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಮೂತ್ರಪಿಂಡ ರೋಗಗಳ ಕೌಟುಂಬಿಕ ಇತಿಹಾಸ ಇದ್ದರೆ ಆಗಾಗ ಮೂತ್ರಪಿಂಡ ತಪಾಸಣೆ ಮಾಡಿಸಿಕೊಳ್ಳಬೇಕು.

ಅನೇಕರಲ್ಲಿ ಮೂತ್ರಪಿಂಡ ಕಾಯಿಲೆಗಳು ಸದ್ದಿಲ್ಲದೆ ಬೆಳವಣಿಗೆ ಹೊಂದುತ್ತಿರುತ್ತವೆ. ಅದು ಗಮನಕ್ಕೆ ಬರುವುದು ಮೂತ್ರಪಿಂಡಗಳ ಕಾರ್ಯಸಾಮರ್ಥ್ಯ ಸಹಜ ಸ್ಥಿತಿಗಿಂತ ಶೇ.30ರಷ್ಟು ಕುಸಿದ ಬಳಿಕವೇ. ಆದ್ದರಿಂದ ಮೂತ್ರಪಿಂಡ ಕಾಯಿಲೆಗಳು ಉಂಟಾಗುವ ಅಪಾಯ ಹೆಚ್ಚಿರುವವರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು. ಜೀವನ ವಿಧಾನದಲ್ಲಿ ಕೆಲವು ಸರಳವಾದ ಪರಿವರ್ತನೆಗಳನ್ನು ಮಾಡಿಕೊಳ್ಳುವುದರ ಮೂಲಕ ಈ ಸಮಸ್ಯೆ ಉಂಟಾಗದಂತೆ ತಡೆಯಬಹುದು ಅಥವಾ ಮುಂದೂಡಬಹುದು.

-ಡಾ| ರವೀಂದ್ರ ಪ್ರಭು
ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು, ನೆಫ್ರಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ

Hasanmbe

Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!

1-gopal

Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Mental health: ತಾಯಂದಿರ ಮಾನಸಿಕ ಆರೋಗ್ಯ

1

Dentistry: ನಿಮ್ಮ ಆತ್ಮವಿಶ್ವಾಸದ ನಗುಮುಖಕ್ಕೆ ಡೆಂಟಲ್‌ ಇಂಪ್ಲಾಂಟ್‌

7

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

4

Health: ಮೊಣಕಾಲಿನ ಅಸ್ಥಿಸಂಧಿವಾತ; ಸಾಮಾನ್ಯ ಸಮಸ್ಯೆಯನ್ನು ಮಾಡಿಕೊಳ್ಳುವುದು

1

Tobacco Cessation Centre: ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಂಬಾಕು ವರ್ಜನ ಕೇಂದ್ರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

9

Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

death

Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.