3 ತಿಂಗಳ ವಿನಾಯ್ತಿಗೆ ನಿರಾಸಕ್ತಿ!
Team Udayavani, May 10, 2020, 5:58 AM IST
ಲಾಕ್‌ಡೌನ್ ಘೋಷಣೆಯಾದ ಕೂಡಲೇ, ಜನರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಆರ್‌ಬಿಐ ಜಾರಿ ಮಾಡಿತು. ಅದರಲ್ಲಿ ಮಹತ್ವದ್ದು; ಮಾಸಿಕ ಕಂತುಗಳನ್ನು ಪಾವತಿ ಮಾಡಲು ಬ್ಯಾಂಕ್‌ಗಳು ಮೂರು ತಿಂಗಳು ವಿನಾಯ್ತಿ ನೀಡಬೇಕು ಎನ್ನುವುದು. ಇದರ ಪ್ರಯೋಜನ ಪಡೆಯಲು ಹಲವರು ಹಿಂದೇಟು ಹಾಕಿದ್ದಾರೆ.
ಏನಿದು 3 ತಿಂಗಳು ವಿನಾಯ್ತಿ?
ಲಾಕ್‌ಡೌನ್‌ನಿಂದ ಉದ್ಯಮಗಳಿಗೆ, ವೇತನದಾರರಿಗೆ ಹಣದ ಸಮಸ್ಯೆಯಿರುತ್ತದೆ. ಆ ಹೊತ್ತಿನಲ್ಲಿ ಸಾಲ ನೀಡಿರುವ ಬ್ಯಾಂಕ್‌ಗಳು ಕಂತು ಪಾವತಿಗೆ ಮೂರು ತಿಂಗಳು ವಿನಾಯ್ತಿ ನೀಡಬೇಕು ಎಂದು ಆರ್‌ಬಿಐ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಆದೇಶ ನೀಡಿದೆ. ಹೀಗೆ ಮೂರು ತಿಂಗಳು ಕಂತು ಪಾವತಿ ವಿನಾಯ್ತಿಗೆ ಅರ್ಜಿ ಸಲ್ಲಿಸಲು ಅಂತಿಮ ಗಡುವು ಇಲ್ಲ. ಇದರರ್ಥ ಮೂರು ತಿಂಗಳ ಕಂತು ಮನ್ನಾ ಆಗುವುದಿಲ್ಲ, ಮುಂದೂಡಲ್ಪಡುತ್ತದೆ ಅಷ್ಟೇ.
ಹಿಂಜರಿಕೆ ಯಾಕೆ?
ಬ್ಯಾಂಕ್‌ಗಳು ಮೂರು ತಿಂಗಳು ಕಟ್ಟದ ಕಂತಿನ ಮೊತ್ತವನ್ನು ಸೇರಿಸಿ, ಸಾಲದ ಅವಧಿ ಹೆಚ್ಚಿಸಬಹುದು ಅಥವಾ ಸಾಲ ಕಟ್ಟುವ ಉಳಿದ ಅವಧಿಗೆ ಈ ಮೂರು ತಿಂಗಳಿನ ಹಣವನ್ನು ಹೊಂದಿಸಬಹುದು. ಇದರಿಂದ ಬಡ್ಡಿದರ ತುಸು ಹೆಚ್ಚಾಗುತ್ತದೆ. ವಾಸ್ತವವಾಗಿ ತಮಗೆ ಪ್ರಯೋಜನವಿಲ್ಲ ಎಂಬ ಗ್ರಾಹಕರ ಭಾವನೆ.
ಮುಂದೆ ಹೆಚ್ಚಬಹುದು
ಸದ್ಯ ವಿನಾಯ್ತಿ ಪಡೆಯಲು ಜನ ಬಯಸದಿದ್ದರೂ ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಬಹುದು. ಹಣವನ್ನು ಒಂದಷ್ಟು ಸಂಗ್ರಹಿಸಿ ಇಟ್ಟುಕೊಳ್ಳುವ ಉದ್ದೇಶ ಕೆಲವು ಉದ್ಯಮಗಳಿಗೆ ಇರುತ್ತದೆ. ಇನ್ನು ವೇತನದಾರರಿಗೆ ಭವಿಷ್ಯದ ಬಗೆಗಿನ ಆತಂಕದಿಂದ ಹಣವುಳಿಸಿಕೊಳ್ಳುವ ಯೋಚನೆಯಿದೆ. ನಿಧಾನಕ್ಕೆ ವಿನಾಯ್ತಿ ಬಯಸುವವರ ಪ್ರಮಾಣದಲ್ಲಿ ಏರಿಕೆ ಕಾಣಿಸುತ್ತಿದೆ ಎಂದು ಹೇಳಲಾಗಿದೆ.
ಶೇ.10
ಎಸ್‌ಬಿಐ ಬ್ಯಾಂಕ್‌ಗೆ ವಿನಾಯ್ತಿಗೆ ಅರ್ಜಿ ಸಲ್ಲಿಸಿದವರ ಪ್ರಮಾಣ.
ಶೇ. 12
ದೇಶದ 3ನೇ ಬೃಹತ್ ಖಾಸಗಿ ಬ್ಯಾಂಕ್ ಆ್ಯಕ್ಸಿಸ್‌ನಲ್ಲಿ ಅರ್ಜಿ ಸಲ್ಲಿಸಿದವರ ಪ್ರಮಾಣ.
ಶೇ.5
ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ ವಿನಾಯ್ತಿಗೆ ಅರ್ಜಿ ಸಲ್ಲಿಸಿದವರ ಪ್ರಮಾಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.