ಬಡವರಿಗೆ ನಾಗಮಾರಪಳ್ಳಿ ಫೌಂಡೇಶನ್‌ ನೆರವು

ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಅಧ್ಯಕ್ಷ ಸೂರ್ಯಕಾಂತರಿಂದ ಆಹಾರ ಧ್ಯಾನದ ಕಿಟ್‌ ವಿತರಣೆ

Team Udayavani, May 10, 2020, 12:43 PM IST

10-May-09

ಬೀದರ: ನೌಬಾದ್‌ನಲ್ಲಿ ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ನಾಗಮಾರಪಳ್ಳಿ ಫೌಂಡೇಶನ್‌ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಬಡವರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಿದರು.

ಬೀದರ: ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್‌ ಕೋವಿಡ್ ಸೋಂಕಿನ ಪ್ರಯುಕ್ತ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚಿದೆ. ಉಸ್ತುವಾರಿ ಸಚಿವ ಪ್ರಭು ಚವ್ಹಾಣ ನೇತೃತ್ವದಲ್ಲಿ ಫೌಂಡೇಶನ್‌ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ನಗರದ ವಿವಿಧೆಡೆ ಬಡವರಿಗೆ ಆಹಾರಧಾನ್ಯದ ಕಿಟ್‌ ಉಚಿತ ವಿತರಿಸಿದರು.

ನೌಬಾದ್‌, ಭೀಮನಗರ, ಮೈಲೂರು ಸೇರಿದಂತೆ ವಿವಿಧೆಡೆ ನಿರ್ಗತಿಕರು, ಕೂಲಿ ಕಾರ್ಮಿಕರು, ವಿಧವೆಯರು, ಅಲೆಮಾರಿಗಳು, ಬಡವರಿಗೆ ತಲಾ ಐದು ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಒಂದು ಕೆಜಿ ಸಿಹಿ ಎಣ್ಣೆ, ಒಂದು ಕೆಜಿ ಉಪ್ಪು, ಮಾಸ್ಕ್, ಪೌಷ್ಟಿಕಾಂಶ ಮಾತ್ರೆ ಮತ್ತಿತರ ಸಾಮಗ್ರಿ ಒಳಗೊಂಡ ಕಿಟ್‌ ವಿತರಿಸಿದರು.

ಕೋವಿಡ್ ಸೋಂಕು ತಡೆಗೆ ಲಾಕ್‌ ಡೌನ್‌ ಜಾರಿಗೊಳಿಸಿರುವ ಕಾರಣ ಬದುಕು ಸಾಗಿಸಲು ಕೂಲಿ ಕೆಲಸವನ್ನೇ ಅವಲಂಬಿಸಿರುವ ಕುಟುಂಬಗಳು ತೊಂದರೆಗೆ ಸಿಲುಕಿವೆ. ಅಂಥ ಕುಟುಂಬಗಳಿಗೆ ಫೌಂಡೇಶನ್‌ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿದೆ. ಬೀದರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೂವರೆ ತಿಂಗಳಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಆಹಾರ ಕಿಟ್‌ ಉಚಿತ ವಿತರಿಸಲಾಗುತ್ತಿದೆ. ಈವರೆಗೆ
27,500 ಕುಟುಂಬಗಳಿಗೆ ಕಿಟ್‌ ಒದಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಜನರಿಗೆ ನೆರವು ಕಲ್ಪಿಸಲಾಗುವುದು ಎಂದು ಸೂರ್ಯಕಾಂತ ನಾಗಮಾರಪಳ್ಳಿ ವಿವರಿಸಿದರು.

ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಯುದ್ಧೋಪಾದಿಯಲ್ಲಿ ಕೈಗೊಂಡ ಹಲವು ಕ್ರಮಗಳಿಂದಾಗಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ.ಕೋವಿಡ್ ನಿಂದ ತೊಂದರೆ ಗೊಳಗಾದವರಿಗೆ ಸಿಎಂ ವಿಶೇಷ ಪ್ಯಾಕೇಜ್‌ ಘೋಷಿಸಿ ಅವರಿಗೆ ಅಭಯ ನೀಡಿದ್ದಾರೆ ಎಂದು ಹೇಳಿದರು. ಕೋವಿಡ್ ತಡೆಗೆ ಸಾರ್ವಜನಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಮಾಸ್ಕ್ ಧರಿಸಬೇಕು. ಆಗಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು ಎಂದು ಹೇಳಿದರು.  ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ನಗರಸಭೆ ಮಾಜಿ ಸದಸ್ಯರಾದ ವೀರಶೆಟ್ಟಿ ಭಂಗೂರೆ, ಶಶಿ ಹೊಸಳ್ಳಿ, ಅರುಣಕುಮಾರ, ಭೂಷಣ ಪಾಠಕ್‌, ರಾಜು ಚಿದ್ರಿ, ಕಿರಣ ಪಾಲಂ ಇದ್ದರು.

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar; ಪಟ್ಟಭದ್ರ ಹಿತಾಸಕ್ತಿಗಳಿಂದ ವಚನ ಸಾಹಿತ್ಯದ ಸಂರಕ್ಷಣೆಯಾಗಬೇಕು: ಡಾ.ಜೆ.ಎಸ್.ಪಾಟೀಲ

Bidar: ಅ.28ರಂದು 5 ನೇ ವಚನ ಸಾಹಿತ್ಯ ಸಮ್ಮೇಳನ

Bidar: ಅ.28ರಂದು 5ನೇ ವಚನ ಸಾಹಿತ್ಯ ಸಮ್ಮೇಳನ

1-wewqewqe

Bidar; ಸಾಲ ಬಾಧೆಯಿಂದ ಇಬ್ಬರು ರೈತರು ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.