ನವಮಾಸ ನಮ್ಮನ್ನು ಹೊತ್ತು, ಹೆರುವ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?


Team Udayavani, May 10, 2020, 1:18 PM IST

Mother-08

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಅಮ್ಮಾ ಎಂಬ ಪದದಲ್ಲೇ ಮಮತೆಯ ಕಣಜವಿದೆ, ಭಾವನೆಯ ಸೆಳೆತವಿದೆ, ಪ್ರೀತಿಯ ಪ್ರತಿಬಿಂಬವಿದೆ.

ಅದೇನೋ ಎಲ್ಲವನ್ನು ಸೈರಿಸುವ ಅದ್ಭುತ ಸಾಮರ್ಥ್ಯ ಆ ದೇವತೆಗಿದೆ. ಹೌದು ಒಂದೊಂದು ದಿನಗಳಿಗೂ ಅದರದೇ ಆದ ಮಹತ್ವವಿದೆ.

ಅದರಂತೆ ವಾಟ್ಸ್ಯಾಪ್ ಸ್ಟೇಟಸ್ ಗಳಲ್ಲಿ ರಾರಾಜಿಸುವಂತೆ ಹ್ಯಾಪಿ ಮದರ್ಸ್ ಡೇ ಅಂತನೂ ಹಾಕೊಂಡಿರುತ್ತೇವೆ. ನಾವು ಹುಟ್ಟುವ ಮೊದಲೇ ನಮ್ಮ ಹೆತ್ತು ಹೊತ್ತ ಆಕೆಗೆ ಕೇವಲ ಒಂದು ದಿನ ಇತ್ತರೆ ಸಾಕೇ?

ಬಡತನವಿರಲಿ, ನೋವಿರಲಿ ಆಕೆ ಮಾತ್ರ ತನ್ನ ಸಂಸಾರದ ಬಂಡಿಯನ್ನು ಸಮಾನವಾಗಿ ನೂಕುತ್ತಾ ಬಾಳದಾರಿಯಲ್ಲಿ ಮುನ್ನಡೆಯುವವಳು. ತನಗೆ ಮಾತ್ರ ಅಧರದಲ್ಲಿ ನೋವ ಅದುಮಿಟ್ಟು ಸದಾ ತನ್ನ ಕನಸ ಚಿಗುರ ಲತೆಗಳಿಗೆ ನೀರೆರೆದು ಪೋಷಿಸುವವಳು.

ಇಂದು ತನ್ನದೇ ಮಕ್ಕಳ ಕಾಲ ಕೆಳಗೆ ಕೆಲಸ ಮಾಡುತ್ತಾ, ಮನೆಯಂತಿರೋ ವೃದ್ಧಾಶ್ರಮದ ಆಶ್ರಯ ಪಡೆಯುತ್ತಾ ಹೇಗೋ ದಿನ ದೂಡುವಳು ಅಮ್ಮ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಏನೂ ಕೊರತೆಯಿಲ್ಲ ಅಲ್ಲಿ ಮಾತ್ರ ‘ಐ ಲವ್ ಯೂ ಅಮ್ಮ’. ಬದುಕು ಯಾಂತ್ರಿಕವಾಗಿದೆ ನಿಜ. ಆದರೆ ಕೂತು ಉಣ್ಣುವ ಪ್ರಾಯದಲ್ಲಿ ಯಂತ್ರದಂತೆ ದುಡಿಸಿ ನಮ್ಮ ಉದರವ ನಾವು ಸಾಕುವುದರಲ್ಲಿ ಏನಾದರೂ ಪ್ರಯೋಜನವಿದೆಯೇ?

ಈ ಲಾಕ್ ಡೌನ್ ರಜೆಯಲ್ಲಂತೂ ತಾಯಂದಿರಿಗೆ ಬಿಡುವಿಲ್ಲದ ಕಾಯಕ. ಬೆಳಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಭೋಜನದವರೆಗೆ ಆಕೆ ಎಲ್ಲರ ಹೊಟ್ಟೆ ತಣಿಸುವಲ್ಲೇ ಕಷ್ಟ ಪಡುತ್ತಾ ದಿನ ದೂಡುತ್ತಾಳೆ.

ಸಂಬಳವಿಲ್ಲದೆ ದುಡಿಯುವ ಆ ಮನಸ್ಸಿಗೆ ಮತ್ತು ದೇಹಕ್ಕೆ ಎಂದೂ ದಣಿಯದು. ತನ್ನ ಕುಟುಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಆಕೆ ಹೊಸ ಯುಗವಿದ್ದಂತೆ.

ತನ್ನ ಹೆಗಲಿಗೆ ಕೈ ಇತ್ತು ಬಾಳ ದಾರಿಯಲ್ಲಿ ಸಂಗಾತಿಯಾಗಿರುವ ಗಂಡನ ಮೇಲೆ ಅದೆಷ್ಟೋ ಬೆಟ್ಟದಷ್ಟು ಆಸೆ ಕನಸ ಹೊತ್ತು ನಮಗಾಗಿ ಜೀವದ ಹಂಗು ತೊರೆದು ಬಾಳ ಸವೆಸುವ ಪ್ರಪಂಚದ ಏಕೈಕ ಜೀವ ಎಂದರೆ ಅದು ಜನ್ಮವಿತ್ತ ಜನನಿ.

ತಾಯಂದಿರ ದಿನಾಚರಣೆಯ ಈ ಶುಭ ಘಳಿಗೆ ಕೇಳುವುದೊಂದೇ ಗೆಳೆಯರೇ ಅದೆಷ್ಟೋ ಅನಾಥ ಮಕ್ಕಳು ಅಮ್ಮಾ ಎಂದು ಕರೆಯಲು ಹಾತೊರೆಯುತ್ತಿರಲು, ಅದ ಕರೆಯೋ ಭಾಗ್ಯ ನಮ್ಮ ಹಣೆಬರಹದಲ್ಲಿಲ್ಲ ಎಂದು ಶಪಿಸಲು ಇರುವಷ್ಟು ದಿನ ಮಾತೆಯಂದಿರನ್ನು ಪ್ರೀತಿಯಿಂದ ಸಲಹಿ, ಅವರ ಕನಸ ಬೆನ್ನ ಹತ್ತಿ ಸಾಗಿ.

ಬೆಳೆದು ದೊಡ್ಡವಳಾದಾಗ ವರ್ಷಂಪ್ರತಿ ಈ ದಿನ ಎಚ್ಚರಿಸುತ್ತದೆ ಲೇಖನಿಯು ಗೀಚುವ ಅಕ್ಷರದೊಳು ಅದ ಹಿಡಿದ ಹಸ್ತದೊಳು ನೀ ಸ್ಪರ್ಶವಿತ್ತಂತೆ ಭಾಸ ಮಾಡುತ್ತಾ ಕೋರಲು ಶುಭಾಶಯ.

ಮಿಸ್ ಯೂ ಅಮ್ಮ…

– ಅರ್ಪಿತಾ ಕುಂದರ್, MCJ, ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

ಮಗು ಹುಟ್ಟಿದಾಗ ಕಣ್ಣು ಕಲ್ಪನೆಗೆ ಬಂದಾಗ ಮೊದಲು ಕಾಣುವ ಮುಖವೇ ಅಮ್ಮನದ್ದು

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

‘ಮಾತೃದೇವೋಭವ’: ಅಮ್ಮನ ಬಗ್ಗೆ ಹೇಳಲು ಪದಗಳೇ ಸಾಲದು…. ಅವಳಿಗೆ ಅವಳೇ ಸಾಟಿ….

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

ನೋವಲ್ಲಿ ಶೋಕ ಸಾಗರವೇ ಬಂದರು ದಾರಿ ಸವೆಸಿ ಕಂದನ ಬರಸೆಳೆದಪ್ಪುವಳು

Mother-09

ನಾನು ಅಮ್ಮನ ಕನಸಿನಲ್ಲಿ ಎಚ್ಚರವಾಗಿರುತ್ತೇನೆ, ಅವಳು ನನ್ನ ಕನಸಿನಲ್ಲಿ ಎಚ್ಚರವಾಗಿರುತ್ತಾಳೆ

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

‘ಜನನಿ ಮತ್ತು ಜನ್ಮಭೂಮಿ’; ಹೆತ್ತ ತಾಯಿ ಮತ್ತು ಹೊತ್ತ ತಾಯಿಯನ್ನು ನೆನಪಿಸಿಕೊಳ್ಳುವ ಸುದಿನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.