ಬೇಸಿಗೆ ಉಳ್ಳಾಗಡ್ಡಿ ಬೆಳೆಗಿಲ್ಲ ಬೆಲೆ
Team Udayavani, May 10, 2020, 3:47 PM IST
ಸಾಂದರ್ಭಿಕ ಚಿತ್ರ
ಮುದಗಲ್ಲ: ಕೋವಿಡ್ ವೈರಸ್ ಲಾಕ್‌ಡೌನ್ ಬಿಸಿ ಬೇಸಿಗೆಯಲ್ಲಿ ಬೆಳೆದ ಉಳ್ಳಾಗಡ್ಡಿ ಬೆಳೆಗೂ ತಟ್ಟಿದೆ. ಈಗ ಲಾಕ್‌ಡೌನ್ ಸಡಿಲಿಕೆಯಾದರೂ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿಗೆ ಬೆಲೆ ಸಿಗದೇ ರೈತರು ನಷ್ಟ ಅನುಭವಿಸುತ್ತಾರೆ. ಹಡಗಲಿ ತಾಂಡಾ, ಯರದೊಡ್ಡಿ, ಕನ್ನಾಳ, ದೆಸಾಯಿ ಭೋಗಾಪುರ ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಕನ್ನಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೆಳೆದ ಉಳ್ಳಗಡ್ಡಿಗೆ ಇಲ್ಲಿಯ ವರೆಗೆ ಕೊರೊನಾ ಕಂಟಕವಾದರೇ ಈಗ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ಸಾವಿರಾರು ಕ್ವಿಂಟಾಲ್ ಉಳ್ಳಾಗಡ್ಡಿ ಬೆಳೆ ಹೊಲಗಳಲ್ಲಿಯೇ ಬಿದ್ದಿದೆ.
ಇತ್ತ ಮಳೆ, ಬಿಸಿಲಿನಿಂದ ರಕ್ಷಣೆ ಮಾಡಲಾಗದೆ ರೈತರು ಕಷ್ಟದಲ್ಲಿಯೇ ದಿನದೂಡುತ್ತಿದ್ದಾರೆ. ಬಳ್ಳಾರಿಯಲ್ಲಿ ದೊಡ್ಡ ಗಾತ್ರದ ಚಿಲ ಉಳ್ಳಾಗಡ್ಡಿಗೆ 150 ರೂ. ಸಣ್ಣ ಗಾತ್ರದ ಚೀಲಕ್ಕೆ 50ರೂ. ಗಳಂತೆ ಖರೀದಿಯಾಗಿವೆ ಎಂದು ಸೊಂಪುರ ತಾಂಡಾದ ರೈತ ಭೀಮಶಪ್ಪ ಅಳಲು ತೋಡಿಕೊಂಡಿದ್ದಾನೆ. ಹಡಗಲಿ ತಾಂಡಾದಲ್ಲಿ ಬಾಲಚಂದ್ರ ಥಾವರೆಪ್ಪ 300 ಚೀಲ, ಲೋಕಪ್ಪ 160 ಚೀಲ, ದೊಡ್ಡಪ್ಪ ಧಂಜಪ್ಪ 140 ಚೀಲ ಹಾಗೂ ರಾಮಪ್ಪನ ತಾಂಡಾದ ಕಾಮಣ್ಣ 80 ಚೀಲ, ಕನ್ನಾಳ ಗ್ರಾಮದ 5 ಜನ ರೈತರು ಸುಮಾರು 800 ಚೀಲ ಉಳ್ಳಾಗಡ್ಡಿ ಬೆಳದಿದ್ದಾರೆ. ಯರದೊಡ್ಡಿ , ಭೋಗಾಪೂರ ಗ್ರಾಮದಲ್ಲಿ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಧಾರಣೆ ಕುಸಿತದಿಂದ ರೈತರು ಭಯಪಡುವಂತಾಗಿದೆ. ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ ಬೆಲೆ ಕುಸಿದಿದೆ. ರೈತರು ಪಾಸ್ ಪಡೆದು ಮಾರಾಟ ಮಾಡಬಹುದಾಗಿದೆ. ಉಳ್ಳಾಗಡ್ಡಿ ಸಂಗ್ರಹಕ್ಕೆ ಇಲಾಖೆಯಲ್ಲಿ ಗೋಡಾನ್ ವ್ಯವಸ್ಥೆ ಇಲ್ಲ ಎಂದು ಲಿಂಗಸುಗೂರ ಸಹಾಯಕ ನಿರ್ದೇಶಕರ ತೋಟಗಾರಿಕೆ ಇಲಾಖೆ ಯೋಗೇಶ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.