![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 10, 2020, 6:05 PM IST
ದೇವನಹಳ್ಳಿ: ರಾಜ್ಯದಿಂದ 25 ಜನ ಬಿಜೆಪಿ ಲೋಕಸಭೆ ಸದಸ್ಯರಿದ್ದರೂ ಪಿಎಂ ಪರಿಹಾರ ನಿಧಿ ತರುವಲ್ಲಿ ವಿಫಲರಾಗಿದ್ದಾರೆ. ಸಂಸದರು ಪ್ರಧಾನಿ ಮೆಚ್ಚಿಸುವಸಲುವಾಗಿ ಮುಖ್ಯಮಂತ್ರಿಗಳಿಗೆ ಕೋವಿಡ್ ನಿಧಿ ನೀಡುವ ಬದಲು ಪ್ರಧಾನಿ ನಿಧಿಗೆ ನೀಡಿದ್ದಾರೆ. ರಾಜ್ಯದ ಜನರ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿ, ಸಂಸದರು ಕೋವಿಡ್ ವಿಚಾರವಾಗಿ ಪ್ರಧಾನಿ ಎಷ್ಟು ಬಾರಿ ಮಾತನಾಡಿ ಅನುದಾನ ತಂದಿದ್ದಾರೆ ಎಂಬುವುದನ್ನು ಜನರ ಮುಂದೆ ಸಂಸದರು ತಿಳಿಸಬೇಕು. ರಾಜ್ಯದ ಸಚಿವರು ಕೋವಿಡ್ ಇದ್ದರೂ ಕೆಲವು ಸಚಿವರೇ ಕಣ್ಣಿಗೆ ಕಾಣಿಸುತ್ತಿಲ್ಲ. ಎಲ್ಲಿ ಹೋಗಿದ್ದಾರೆಂಬುವುದು ತಿಳಿಯುತ್ತಿಲ್ಲ. ಜನರೊಂದಿಗೆ ಬೆರೆತು ಕೆಲಸ ಮಾಡುವವರು ಹಾಗೂ ಸರಕಾರದಲ್ಲಿ ಸಚಿವರ ಸಹಕಾರ ಅಷ್ಟಕಷ್ಟೇ ಎಂಬುದು ಸಾಬೀತಾಗುತ್ತಿದೆ ಎಂದರು.
ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉಪಾಧ್ಯಕ್ಷ ದ್ಯಾವರಹಳ್ಳಿ ವಿ.ಶಾಂತ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮುನಿರಾಜು, ಕೆಪಿಸಿಸಿ ಸದಸ್ಯ ಚಿನ್ನಪ್ಪ, ಖಾದಿಬೋರ್ಡ್ ಅಧ್ಯಕ್ಷ ಎಸ್. ನಾಗೇಗೌಡ, ಕೆಪಿಸಿಸಿ ರಾಜ್ಯ ಎಸ್‌ಸಿ ಘಟಕದ ಸಂಚಾಲಕ ಮಾಳೀಗೆನಹಳ್ಳಿ ಪ್ರಕಾಶ್, ಮುಖಂಡ ಹರ್ಷಿತ್ ಗೌಡ ಇದ್ದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.