![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 11, 2020, 6:10 AM IST
ಹೊಸದಿಲ್ಲಿ: ಮೂರನೇ ಹಂತದ ಲಾಕ್‌ಡೌನ್ ಕೊನೆಯ ವಾರಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಮಾ. 24ರಂದು ಲಾಕ್‌ಡೌನ್ ಆರಂಭವಾದ ಬಳಿಕ ಸಿಎಂಗಳ ಜತೆ ಪ್ರಧಾನಿ ನಡೆಸುತ್ತಿರುವ ಐದನೇ ಸಮಾಲೋಚನೆ ಇದು.
ಮೇ 17ರ ಅನಂತರ ಲಾಕ್‌ಡೌನ್ ಸಂಪೂರ್ಣವಾಗಿ ತೆರವು ಮಾಡಬೇಕಾದರೆ ಕೈಗೊಳ್ಳಬೇಕಾದ ನಿರ್ಧಾರಗಳು ಮತ್ತು ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿಗಳು ಅಥವಾ ಲಾಕ್‌ಡೌನ್ ಮುಂದುವರಿದರೆ ದೇಶದ ಆರ್ಥಿಕತೆಗೆ ಪೂರಕವಾಗಿ ಸಡಿಲಿಸಬೇಕಿರುವ ನಿರ್ಬಂಧ ಗಳು, ಕಂಟೈನ್‌ಮೆಂಟ್ ವಲಯಗಳ ನಿರ್ವಹಣೆ ಮತ್ತು ಕೆಂಪು ವಲಯಗಳಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳು, ವಲಸೆ ಕಾರ್ಮಿಕರ ಸುರಕ್ಷಿತ ಪ್ರಯಾಣ, ವಿದೇಶದಿಂದ ಕರೆತರಲಾಗುತ್ತಿರುವ ಭಾರತೀಯರ ವಿಚಾರಗಳು ಸೋಮ ವಾರದ ಸಭೆಯಲ್ಲಿ ಚರ್ಚೆಯಾಗಲಿವೆ ಎನ್ನಲಾಗಿದೆ.
ಎರಡು ಅಲಗಿನ ಕಾರ್ಯತಂತ್ರಕ್ಕೆ ಮೊರೆ
ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಎಲ್ಲ ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ರವಿವಾರ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಇದಲ್ಲದೆ ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳ ಜತೆಗೆ ಎರಡು ಬಾರಿ ಸಭೆ ನಡೆಸಲಾಗಿದ್ದು, ಈ ಸಂದರ್ಭ ಅವರೆಲ್ಲ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಮೇ 17ರ ಅನಂತರ ಕೋವಿಡ್ -19 ನಿಯಂತ್ರಣ ಮತ್ತು ಆರ್ಥಿಕ ಪುನಶ್ಚೇತನ – ಈ ಎರಡೂ ವಿಚಾರಗಳನ್ನು ಸರಿದೂಗಿಸಿಕೊಂಡು ಹೋಗುವಂಥ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಹೆಚ್ಚಿನ ರಾಜ್ಯಗಳು ಒಲವು ತೋರಿವೆ ಎನ್ನಲಾಗಿದೆ.
ಕೆಂಪು ವಲಯ ನಿಖರ ಗುರುತಿಗೆ ಬೇಡಿಕೆ
ಕೆಂಪು ವಲಯಗಳನ್ನು ಕೇಂದ್ರ ಸರಕಾರವೇ ಗುರುತಿಸ ಬೇಕು. ಆ ವಲಯ ಬಿಟ್ಟು ಉಳಿದೆಡೆ ಆರ್ಥಿಕ ಚಟುವಟಿಕೆ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುವಂಥ ಮಾರ್ಗಸೂಚಿ ನೀಡಬೇಕು ಎಂಬ ನಿರ್ಧಾರಕ್ಕೆ ವಿವಿಧ ರಾಜ್ಯ ಸರಕಾರಗಳು ಬಂದಿವೆ ಎನ್ನಲಾಗಿದೆ. ಒಡಿಶಾದ ಬಿಜೆಡಿ ಸರಕಾರ ಈ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ಈ ವಿಚಾರವೂ ಸೋಮವಾರದ ಪ್ರಧಾನಿ-ಸಿಎಂಗಳ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಅಲ್ಲದೆ, ಸೋಂಕು ತೀವ್ರವಾಗಿರುವ ರಾಜ್ಯಗಳಿಗೆ ಕೇಂದ್ರ ತಂಡ ಕಳುಹಿಸುವ ಕುರಿತು ನಿರ್ಧಾರ ಹೊರಬೀಳಬಹುದು ಎನ್ನಲಾಗಿದೆ.
ಸಾಮಾಜಿಕ ನಿರ್ಬಂಧ ಮುಂದುವರಿಕೆ ?
ಜನದಟ್ಟಣೆಗೆ ಕಾರಣವಾಗುವಂಥ ಚಟುವಟಿಕೆಗಳಾದ ಸಿನೆಮಾ ಹಾಲ್, ಮಾಲ್‌ಗಳು, ಜಾತ್ರೆಗಳು, ಸಂಘ-ಸಂಸ್ಥೆಗಳ ಸಮಾರಂಭಗಳು, ಖಾಸಗಿ ಸಮಾರಂಭಗಳ ಮೇಲಿನ ನಿರ್ಬಂಧಗಳನ್ನು ಮುಂದುವರಿಸುವ ಬಗ್ಗೆ ಎಲ್ಲ ರಾಜ್ಯ ಸರಕಾರಗಳು ಒಲವು ತೋರಿವೆ. ರಮ್ಜಾನ್ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ ಎಂದು ತೆಲಂಗಾಣ ಸರಕಾರ ಈಗಾಗಲೇ ಪ್ರಕಟಿಸಿದೆ. ಇಂಥ ನಿರ್ಧಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬಹುದು ಎನ್ನಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.