ದುಬಾರಿ ವಸ್ತುಗಳು: ಕೀಪ್ಯಾಡ್ ಫೋನ್; ಬೆಲೆ: 2.3 ಕೋಟಿ ರೂ.
Team Udayavani, May 11, 2020, 10:52 AM IST
ದುಬಾರಿ ಫೋನು ಎಂದರೆ, ಐಫೋನ್ ಅಥವಾ ಹೈ ಎಂಡ್ ಸ್ಯಾಮ್‌ಸಂಗ್ ಫೋನುಗಳು ನೆನಪಾಗುತ್ತವೆ. ಆದರೆ, ಬ್ರಿಟನ್ ಮೂಲದ “ವರ್ಚು’ ಎನ್ನುವ ಫೋನ್ ತಯಾರಕ ಸಂಸ್ಥೆ, ದುಬಾರಿ ಬೆಲೆಯ ಫೋನುಗಳನ್ನು ತಯಾರಿಸುತ್ತದೆ. ಈ ಸಂಸ್ಥೆ ತಯಾರಿಸಿರುವ ಹೊಸ ಫೋನ್ ಮಾಡೆಲ್‌ನ ಹೆಸರು, “ಸಿಗ್ನೇಚರ್ ಕೋಬ್ರಾ’. ಸ್ಮಾರ್ಟ್ ಫೋನ್‌ಗಳ ಭರಾಟೆಯ ನಡುವೆ, ಈ ಕೀಪ್ಯಾಡ್ ಫೋನಿಗೆ ಕೋಟಿಗಟ್ಟಲೆ ಹಣವನ್ನೇಕೆ ಕೊಡಬೇಕು ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಈ ಫೋನ್‌ನಲ್ಲಿ ಹಾವಿನ ಆಕೃತಿಯದೆಯಲ್ಲ (ಚಿತ್ರ ನೋಡಿ ) ಅದನ್ನು ಸಿದ್ಧಪಡಿಸಲು, 439 ರತ್ನಗಳನ್ನು ಬಳಸಲಾಗಿದೆ. ಅಲ್ಲದೆ, ಎರಡು ವಜ್ರಗಳಿಂದ ಹಾವಿನ ಕಣ್ಣುಗಳನ್ನು ರೂಪಿಸಲಾಗಿದೆ. ಇದರಲ್ಲಿ ಟಿ.ಎಫ್.ಟಿ. ಡಿಸ್‌ಪ್ಲೇ ಇದ್ದು, 2
ಜಿ.ಬಿ. ರ್ಯಾಮ್ ಮತ್ತು ಇಂಟರ್ನಲ್ ಸ್ಟೋರೇಜ್ 16 ಜಿ.ಬಿ. ನೀಡಲಾಗಿದೆ. ರಿಮೂವೆಬಲ್ ಬ್ಯಾಟರಿ ಇದ್ದು, ಐದೂವರೆ ಗಂಟೆಗಳ ಕಾಲ ಟಾಕ್ ಟೈಮ್ ಹೊಂದಿದೆ. ಅಂದಹಾಗೆ, ವರ್ಚು ಕಂಪನಿಯನ್ನು ಸ್ಥಾಪಿಸಿದ್ದು ನೋಕಿಯ. 1998ರ ತನಕ ವರ್ಚು, ನೋಕಿಯಾದ ಅಂಗಸಂಸ್ಥೆಯಾಗಿಯೇ ಇತ್ತು. ನಂತರ ಅದನ್ನು ಬ್ರಿಟನ್ ಮೂಲದ ಸಂಸ್ಥೆಗೆ ಮಾರಾಟ ಮಾಡಲಾಯಿತು.
ವೈಜ್ಞಾನಿಕ ವಿನ್ಯಾಸದ ಪೆನ್ ಬೆಲೆ: 60 ಕೋಟಿ ರೂ.
ಒಂದು ಕಾಲದಲ್ಲಿ, ಶಾಲೆಗಳಲ್ಲಿ ಇಂಕ್ ಪೆನ್ ಅನ್ನು ಮಾತ್ರವೇ ಬಳಸಬೇಕು ಎಂಬ ನಿಯಮವಿತ್ತು. ಆದರೆ, ಈಗ ಎಲ್ಲೆಲ್ಲೂ, ಬಾಲ್ ಪೆನ್‌ನ ದರ್ಬಾರು ಜೋರಾಗಿದೆ. ಇಂದು ಇಂಕ್ ಪೆನ್ ಅನ್ನು, ಸ್ಟೇಟಸ್ ಸಿಂಬಲ್ ಆಗಿ ನೋಡಲಾಗುತ್ತಿದೆ. ಹೀಗಾಗಿಯೇ, ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಫೌಂಟೇನ್ ಪೆನ್ನನ್ನು ಕಾಣಬಹುದು. ಅಂದಹಾಗೆ, ಜಗತ್ತಿನ ಅತಿ ದುಬಾರಿ ಫೌಂಟೇನ್ ಪೆನ್ ಎಂಬ ಖ್ಯಾತಿಗೆ ಪಾತ್ರವಾದ ಪೆನ್ನು “ಫಲ್ಗೊರ್ ನಾಕ್ಟರ್ನಸ್’. ಇಟಲಿಯ ಸಂಸ್ಥೆ “ತಿಬಾಲ್ದಿ’ ಈ ಪೆನ್ನನ್ನು ತಯಾರಿಸಿದೆ. ಇದರ ವಿನ್ಯಾಸ ಮಾಡಲು, ನುರಿತ ತಂತ್ರಜ್ಞರು
ವೈಜ್ಞಾನಿಕವಾಗಿ ಕಷ್ಟಪಟ್ಟಿದ್ದಾರೆ. ವಿಜ್ಞಾನದಲ್ಲಿ, ಪೈ ಅನುಪಾತ ಸೂತ್ರ ಹೆಸರುವಾಸಿಯಾದದ್ದು. ಅದಕ್ಕೆ ಅನುಗುಣವಾಗಿ, ಈ ಪೆನ್ನನ್ನು ರೂಪಿಸಲಾಗಿದೆ. ಅಷ್ಟು ಮಾತ್ರವಲ್ಲ; 123 ರತ್ನಗಳು, 945 ಕಪ್ಪು ವಜ್ರಗಳನ್ನು ಕೂರಿಸಲಾಗಿದೆ. ಆಭರಣ ಸಂಸ್ಥೆಯಾದ ತಿಬಾಲ್ದಿ, ಈ ಪೆನ್ನನ್ನು ಆಭರಣದಂತೆಯೇ ರೂಪಿಸಿರುವುದು ಅಚ್ಚರಿಯೇನಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.