![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 11, 2020, 2:31 PM IST
ಕಾಸರಗೋಡು: ಕಾಸರಗೋಡು ಜಿಲ್ಲೆ ಐತಿಹಾಸಿಕ ಸಾಧನೆ ಮಾಡಿದೆ. ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂತಿಮ ರೋಗಿ ಕೂಡ ಗುಣಮುಖರಾಗುವುದರೊಂದಿಗೆ ಎಲ್ಲ ಕೋವಿಡ್ ಬಾಧಿತರು ಮನೆಗೆ ವಾಪಸಾಗಿದ್ದಾರೆ.
ಜಿಲ್ಲೆಯ 178 ಮಂದಿಯನ್ನು ಕೋವಿಡ್ ಬಾಧಿಸಿತ್ತು. ಕೇಂದ್ರ ಸರಕಾರ ಗುರುತಿಸಿದ ಹಾಟ್‌ಸ್ಪಾಟ್‌ಗಳ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆ ಕಾಣಿಸಿಕೊಂಡಿತ್ತು. ಆದರೆ ಅತೀ ಕಡಿಮೆ ಅವಧಿಯಲ್ಲೇ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸುವಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಡಾಕ್ಟರ್‌ಗಳು, ದಾದಿಯರು, ಆರೋಗ್ಯ ಕಾರ್ಯಕರ್ತರು ಸಫಲರಾಗಿದ್ದಾರೆ.
ಕೇರಳ ರಾಜ್ಯದಲ್ಲಿ 7 ಮಂದಿಗೆ ಸೋಂಕು
ಕೇರಳ ರಾಜ್ಯದಲ್ಲಿ ರವಿವಾರ ಹೊಸದಾಗಿ 7 ಮಂದಿಯನ್ನು ಕೋವಿಡ್ ಸೋಂಕು ಬಾಧಿಸಿರುವುದು ದೃಢವಾಗಿದೆ. ವಯನಾಡು-3, ತೃಶ್ಶೂರು-2, ಎರ್ನಾಕುಳಂ ಮತ್ತು ಮಲಪ್ಪುರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗಲಿದೆ. ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುಣಮುಖರಾಗಿದ್ದಾರೆ. ಕಣ್ಣೂರು ಜಿಲ್ಲೆಯಲ್ಲಿ 2, ಕಾಸರಗೋಡು ಮತ್ತು ಪಾಲಘಾಟ್ ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈ ವರೆಗೆ 489 ಮಂದಿ ಗುಣಮುಖರಾಗಿದ್ದಾರೆ. 20 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
11 ಪ್ರಕರಣ ದಾಖಲು
ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ 11 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. 18 ಮಂದಿಯನ್ನು ಬಂಧಿಸಿರುವುದಲ್ಲದೆ ವಾಹನವೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ತನಕ 2,095 ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ 2,712 ಮಂದಿಯನ್ನು ಬಂಧಿಸಿ, 870 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಂಭ್ರಮಿಸುವ ಕ್ಷಣ ಇದಲ್ಲ
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ನೇತೃತ್ವದ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಸ್ಥಳೀಯಾಡಳಿತ, ಕುಟುಂಬಶ್ರೀ, ಅಂಗನವಾಡಿ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಅಗ್ನಿ ಶಾಮಕ ದಳ ಸಹಿತ ವಿಭಾಗಗಳು ಹಗಲು- ರಾತ್ರಿ ನಡೆಸಿರುವ ಯತ್ನ ಫಲ ನೀಡಿದೆ. ಇಷ್ಟೆಲ್ಲ ಸಾಧನೆಗಳಿದ್ದರೂ ಜಾಗೃತಿ ಸಡಿಲಗೊಳಿಸುವ ಸಮಯ ಇನ್ನೂ ಬಂದಿಲ್ಲ. ಒಂದು ಚಿಕ್ಕ ಅಸಡ್ಡೆಯೂ ಮತ್ತೆ ಜಿಲ್ಲೆಯಲ್ಲಿ ತನ್ನ ಇರವನ್ನು ತೋರಿಸಲು ಕೋವಿಡ್ ವೈರಸ್‌ಗೆ ದಾರಿಯಾದೀತು.
You seem to have an Ad Blocker on.
To continue reading, please turn it off or whitelist Udayavani.