ಹಿರೇಬಾಗೇವಾಡಿಯಿಂದ ಕಣ್ತಪ್ಪಿಸಿ ಬಂದಿದ್ದವಗೆ ಕ್ವಾರಂಟೈನ್
Team Udayavani, May 11, 2020, 3:48 PM IST
ಬೈಲಹೊಂಗಲ: ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಕೇಸ್ ಪತ್ತೆಯಾಗಿರುವ ಹಿರೇಬಾಗೆವಾಡಿ ಗ್ರಾಮದಲ್ಲಿ ಇಲ್ಲಿಯವರೆಗೆ ಇದ್ದ, ಮೂಲತ ದೊಡವಾಡದ ಗ್ರಾಮದ ವ್ಯಕ್ತಿಯೋರ್ವರು ದೊಡವಾಡ ಗ್ರಾಮಕ್ಕೆ ಭಾನುವಾರ ಮರಳಿದ್ದಾರೆ ಎಂಬ ಸುದ್ದಿ ತಿಳಿದು ಗ್ರಾಮದ ನೂರಾರು ಜನ ಪೇಟೆ ರಸ್ತೆಯಲ್ಲಿ ಸಾಮಾಜಿಕ ಅಂತರ ಗಾಳಿಗೆ ತೂರಿ ಜಮಾಯಿಸಿದ್ದರು.
ಆತನನ್ನು ಗ್ರಾಮದಲ್ಲಿ ಕ್ವಾರಂಟೈನ್ ಮಾಡದೆ ಬೇರೆ ಕಡೆ ಕ್ವಾರಂಟೈನ್ ಮಾಡಬೇಕೆಂದು ತಾಲೂಕು ಆರೋಗ್ಯಾಧಿ ಕಾರಿಗಳಿಗೆ ಮತ್ತು ಪಿಡಿಓ ಗೆ ಮನವಿ ಮಾಡಿದರು. ಒಬ್ಬರ ಮೇಲೊಬ್ಬರು ಬೆರಳು ತೋರಿದ ಅಧಿಕಾರಿಗಳು ಹಿರೇ ಬಾಗೇವಾಡಿಯಿಂದ ಅಧಿಕಾರಿಗಳ ಕಣ್ತಪ್ಪಿಸಿ ಕಾಲ್ನಡಿಗೆ ಮುಖಾಂತರ ಗ್ರಾಮಕ್ಕೆ ಬಂದಿರುವ ಆ ವ್ಯಕ್ತಿಯ ಮಕ್ಕಳು ಕೂಡ, ಸರಕಾರದ ನಿಯಮದಂತೆ ನಮ್ಮ ತಂದೆಯನ್ನು ನಾವು ಹೋಮ್ ಕ್ವಾರಂಟೈನ್‌ಗೊಳಪಡಿಸಲು ಸಿದ್ಧರಿದ್ದೇವೆ. ಆದರೆ ನಾವು ಕೆಲಸಕ್ಕೆಂದು ಹೊರಗಡೆ ಹೋಗಲೇಬೇಕು. ಗ್ರಾಮಸ್ಥರೂ ಕೋವಿಡ್ ಆತಂಕದಿಂದ ನಮ್ಮನ್ನು ಸಂಶಯದ ಕಣ್ಣಿನಿಂದ ನೋಡುವುದು ಬೇಡ. ಆದ್ದರಿಂದ ತಂದೆಯನ್ನು ಸರಕಾರದ ಕ್ವಾರಂಟೈನ್ ಕೇಂದ್ರದಲ್ಲಿ ಇಟ್ಟು ಅವಧಿ ಮುಗಿದ ನಂತರ ಕಳಿಸಿಕೊಡಿ ಎಂದರು.
ಆದರೆ ತಾಲೂಕು ಆರೋಗ್ಯ ಅಧಿಕಾರಿಗಳು, ಪಿಡಿಓ ಒಬ್ಬರ ಮೇಲೊಬ್ಬರು ಆರೋಪಿಸಲು ಪ್ರಾರಂಭಿಸಿದ್ದರಿಂದ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರಿಂದ ವ್ಯಕ್ತಿಯ ಪರೀಕ್ಷೆ ಮಾಡಿಸಿ ಹೋಮ್ ಕ್ವಾರಂಟೆ„ನ್ ಸೀಲ್ ಹಾಕಿಸಿದ್ದಲ್ಲದೇ ಸ್ಥಳೀಯ ಬಿಸಿಎಮ್ ಹಾಸ್ಟೇಲ್ ನಲ್ಲಿ 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಲು ಕಳಿಸಿಕೊಟ್ಟರು.
ಆದರೆ ಹಾಸ್ಟೇಲ್ ಸುತ್ತಲಿನ ಮನೆಗಳ ಜನ, ಆ ವ್ಯಕ್ತಿಯಿಂದ ತಮ್ಮ ಪಾಡೇನು? ಆತ ಕ್ವಾರಂಟೆ„ನ್ ನಿಯಮ ಪಾಲಿಸದೆ ಹೊರಗಡೆ ತಿರುಗಾಡಿದರೆ ಜನ ಜೀವನ ಹೇಗೆ? ಎಂದು ಆತಂಕಿತರಾಗಿದ್ದಾರೆ. ಅಧಿಕಾರಿಗಳು ಸ್ಥಳೀಯವಾಗಿ ಆತನನ್ನು ಕ್ವಾರಂಟೈನ್ ಮಾಡದೆ ಕ್ವಾರಂಟೈನ್ ಕೇಂದ್ರಕ್ಕೆ ದಾಖಲಿಸಿ ಗ್ರಾಮಸ್ಥರ ಭಯ, ಆತಂಕ ದೂರ ಮಾಡಬೇಕೆಂದು ತಾ.ಪಂ ಸದಸ್ಯ ಸಂಗಯ್ಯ ದಾಭಿಮಠ, ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ
HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ
BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ
Congress Govt.,: ಅಧಿವೇಶನದಲ್ಲಿ ಉ.ಕ.ಕ್ಕೆ ಕೊಟ್ಟ ಹಣದ ಲೆಕ್ಕ ಕೇಳುತ್ತೇವೆ: ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.