ಎಚ್ಚೆತ್ತುಕೊಂಡೂ ಎಡವಿದ ಕೊಲಂಬಿಯಾ
ಆರ್ಥಿಕ ಅನಿಶ್ಚಿತತೆಯದ್ದೇ ಗೋಳು
Team Udayavani, May 11, 2020, 6:42 PM IST
ಬೊಗೊಟ : ಕೋವಿಡ್ ವೈರಸ್ ಅಪಾರ ಪ್ರಮಾಣದ ಸಾವುನೋವುಗಳಿಗೆ ಮತ್ತು ಜಾಗತಿಕವಾಗಿ ಆರ್ಥಿಕತೆಯ ಕುಸಿತಕ್ಕೆ ಕಾರಣವಾಗುತ್ತಿದೆ. ಜತೆಗೆ ಸಂಘ ಜೀವಿಯಾಗಿದ್ದ ಮಾನವನನ್ನು ಕುಟುಂಬ ವರ್ಗದವರಿಂದ, ಸ್ನೇಹಿತರಿಂದ ದೂರ ಮಾಡಿ ಏಕಾಂಗಿಯನ್ನಾಗಿಸಿದೆ. ಆದಾಯ ಮೂಲವಿಲ್ಲದೆ ಕಂಗೆಟ್ಟಿರುವ ಜನರು ಬಡತನದ ಬೇಗೆಗೆ ತುತ್ತಾಗುವ ಆತಂಕದಲ್ಲಿದ್ದಾರೆ. ಲಾಕ್‌ಡೌನ್ ನಿಯಮಗಳು ಇಡೀ ಸಮಾಜವನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈಗಾಗಲೇ ಹಲವು ಬಡ ದೇಶಗಳಿಂದ ಈ ಕುರಿತಾದ ಸುದ್ದಿಗಳು ಹೊರ ಬೀಳುತ್ತಿದ್ದು, ಈ ಪೈಕಿ ಕೊಲಂಬಿಯಾದ ಕತೆ ಬಹಳ ದಾರುಣವಾಗಿದೆ. ಕೋವಿಡ್‌ಗೆ ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ಹೊರತಾಗಿಯೂ ಈ ದೇಶವೀಗ ಕಂಗಾಲಾಗಿದೆ.
ಎಚ್ಚೆತ್ತರೂ ಎಡವಿತು
ಇತರ ದೇಶಗಳಿಗೆ ಹೋಲಿಸಿದರೆ ಕೊಲಂಬಿಯಾ ಕೋವಿಡ್-19 ಅನ್ನು ನಿಯಂತ್ರಿಸಲು ಬಹಳ ಬೇಗನೆ ತಯಾರಿ ಮಾಡಿಕೊಂಡಿತ್ತು. ಎದುರಾಗಲಿರುವ ಬಿಕ್ಕಟ್ಟನ್ನು ಅರಿತು ರಾಜಧಾನಿ ಬೊಗೊಟದಲ್ಲಿ ಮಾರ್ಚ್ 18ರ ವೇಳೆಗೆ ಸಂಪೂರ್ಣ ಲಾಕ್‌ಡೌನ್ ಮಾಡಿದಲ್ಲದೆ ಸಾಮಾಜಿಕ ಅಂತರ ಸೇರಿದಂತೆ ಇತರ ನಿಯಮಗಳನ್ನು ಪಾಲಿಸುವಂತೆ ಕಠಿನ ಆದೇಶ ಹೊರಡಿಸಿತ್ತು.
ಸ್ಥಳೀಯ ಆಸ್ಪತ್ರೆಗಳು ಮತ್ತು ಔಷಧಾಲಯಗಳ ತೆರೆಯಲು ಮಾತ್ರ ಅವಕಾಶ ನೀಡಿ ಅನಗತ್ಯ ಸಂಚಾರವನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು. ಇಷ್ಟೆಲ್ಲ ಕ್ರಮ ಕೈಗೊಂಡರೂ ಸುಮಾರು 50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೊಲಂಬಿಯಾದಲ್ಲಿ 8,959 ಕೋವಿಡ್-19 ಪ್ರಕರಣಗಳು ದಾಖಲಾಗಿದರೆ 8 ಲಕ್ಷ ಜನಸಂಖ್ಯೆಯಿರುವ ರಾಜಧಾನಿ ಬೊಗೊಟದಲ್ಲಿ 3,469 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ 397 ಜನರು ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಮರಣ ಪ್ರಮಾಣದಲ್ಲಿ ಅರ್ಧದಷ್ಟು ಪ್ರಕರಣ ಬೊಗೊಟದಲ್ಲಿ ದಾಖಲಾಗಿದೆ.
ಆರ್ಥಿಕ ಅನಿಶ್ಚಿತತೆಯ ಗೋಳು
ಮರಣಾಂತಿಕ ಸೋಂಕಿಗೆ ಬಲಿಯಾಗಿರುವ ಪ್ರತಿಯೊಂದು ರಾಷ್ಟ್ರವನ್ನು ದುಃಸ್ವಪ್ನದಂತೆ ಕಾಡುತ್ತಿರುವ ಸಮಸ್ಯೆ ಆರ್ಥಿಕತೆಯ ಅನಿಶ್ಚಿತತೆ. ಈ ಮಹಾಸಂಕಟವನ್ನು ಎದುರಿಸುತ್ತಿರುವ ಎಲ್ಲ ದೇಶಗಳು ಲಾಕ್‌ಡೌನ್ ಸಡಿಲಿಕೆಗೆ ಮುಂದಾಗುತ್ತಿದ್ದು, ಕೊಲಂಬಿಯ ಕೂಡ ಈ ಸಂಕಷ್ಟದಿಂದ ಹೊರ ಬರಲು ನಿಬಂಧನೆಗಳನ್ನು ತೆರವುಗೊಳಿಸುತ್ತಿದೆ. ಈಗಾಗಲೇ ಕೆಲ ಕೈಗಾರಿಕಾ ಘಟಕಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟಿರುವ ದೇಶ ಹಂತಹಂತವಾಗಿ ಲಾಕ್‌ಡೌನ್ ನಿಯಮಗಳಲ್ಲಿ ವಿನಾಯಿತಿ ನೀಡಲು ಮುಂದಾಗಿದೆ. ಆದರೆ ಕುಸಿಯುತ್ತಿರುವ ಆರ್ಥಿಕ ಕ್ಷೇತ್ರದ ಸ್ಥಿರತೆ ಕಾಯ್ದುಕೊಳ್ಳಲು ಮುಂದಾಗಿ ಸೋಂಕು ಪ್ರಸರಣ ಮಟ್ಟ ಹೆಚ್ಚಾಗುತ್ತದೆಯೇ ಎಂಬ ಸಹಜ ಆತಂಕ ಕೊಲಂಬಿಯದ ದೇಶವಾಸಿಗಳನ್ನು ಕಾಡುತ್ತಿದೆ.
ಹೆಚ್ಚುತ್ತಿದೆ ಹಸಿವಿನ ಆಕ್ರಂದನ
ಲಾಕ್‌ಡೌನ್ ನಿಯಮಗಳಿಂದ ಇಲ್ಲಿನ ಮಧ್ಯಮ ವರ್ಗ ಮತ್ತು ಬಡ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದು, ಆದಾಯ ಮೂಲವಿಲ್ಲದ ಈ ಕುಟುಂಬಗಳು ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕಿಕೊಂಡಿವೆ. ನಿಯಮಗಳಲ್ಲಿ ವಿನಾಯಿತಿ ನೀಡಿದ್ದರೂ ಕೇವಲ ಸೀಮಿತ ವರ್ಗದಲ್ಲಿ ಕಾರ್ಯಾಚರಿಸುವ ಆದೇಶ ಇರುವ ಕಾರಣ ಕೆಲವೇ ಕೆಲವು ಜನರು ಕೆಲಸ ಮಾಡುತ್ತಿದ್ದಾರೆ. ಪರಿಣಾಮ ಉಳಿದ ಅರ್ಧದಷ್ಟು ಜನರು ಕೆಲಸವಿಲ್ಲದೆ ಮನೆಯಲ್ಲಿ ಉಳಿದಿದ್ದಾರೆ. ಪರಿಣಾಮ ಕೈಯಲ್ಲಿ ಬಿಡುಗಾಸು ಇಲ್ಲದಂತಾಗಿದ್ದು, ನಿರ್ದಿಷ್ಟವಾಗಿ ರಾಜಧಾನಿಯಲ್ಲಿ ಹಸಿವಿನ ಆಕ್ರಂದನ ಹೆಚ್ಚುತ್ತಿದೆ.
ಮೊದಲೇ ಬಡ ರಾಷ್ಟ್ರವಾಗಿರುವ ಕೊಲಂಬಿಯದ ಜಿಡಿಪಿ ದರವೂ ಸ್ಪೇನ್‌ನಂತಹ ದೇಶಗಳೊಂದಿಗೆ ಹೋಲಿಸಿದರೆ ತೀರಾ ಕಡಿಮೆ ಇದೆ. ಶೇ.50ರಷ್ಟು ಜನರು ಜೀವನೋಪಾಯಕ್ಕಾಗಿ ಅಸಂಘಟಿತ ವಲಯವನ್ನು ನಂಬಿಕೊಂಡಿದ್ದಾರೆ. ಕೇವಲ ಸೀಮಿತ ಮಟ್ಟದಲ್ಲಿ ತೈಲ, ಅನಿಲ, ಪರ್ಯಾಯ ಉತ್ಪನ್ನಗಳು ಸೇರಿದಂತೆ ಕಾಫಿ ಮತ್ತು ಚಿನ್ನದ ರಫ್ತು ಚಟವಟಿಕೆಯಲ್ಲಿ ತೊಡಗಿಸಿಕೊಂಡಿರುವ ಈ ದೇಶ ಆರ್ಥಿಕವಾಗಿ ಹಿಂದುಳಿದಿದೆ. ಇದೀಗ ಕೋವಿಡ್-19ನಿಂದಾಗಿ ಆರ್ಥಿಕ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದ್ದು,ದೇಶಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಮೇ ಮಧ್ಯಾಂತರಕ್ಕೆ ಕೊಲಂಬಿಯ ದೇಶವನ್ನು ಪುನರಾರಂಭಿಸಲು ನಿರ್ಧರಿಸಿದ್ದರೂ ಭವಿಷ್ಯದ ಹಿತದೃಷ್ಟಿಯಿಂದಾಗಿ ಸಾಕಷ್ಟು ಜನರು ಮನೆಯಲ್ಲಿಯೇ ಉಳಿಯುವ ಮುನ್ಸೂಚನೆ ಕಾಣುತ್ತಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಒತ್ತು ನೀಡಲಿದ್ದು, ಹಣಕಾಸು ಚಟುವಟಿಕೆಗಳಿಂದ ದೂರ ಉಳಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.