ತರಬೇತಿ, ರಂಗ ಶಿಕ್ಷಣದ ದೃಶ್ಯ ಪ್ರಯಾಣ
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿಶಿಷ್ಟ ಪರಿಕಲ್ಪನೆ
Team Udayavani, May 12, 2020, 5:31 AM IST
ಉಡುಪಿ: ರಂಗ ತರಬೇತಿಯ ವಿಷಯವಾಗಿ ಹೀಗೊಂದು ರಂಗಕಲಿಕೆಯ ಮೂಲಕ ದೃಶ್ಯ ಪ್ರಯಾಣವನ್ನು ಆರಂಭಿಸಿರುವ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ವಿಶಿಷ್ಟ ಪರಿಕಲ್ಪನೆಗೆ ವಿವಿಧೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಲಾಕ್‌ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ರಂಗಕಲೆಗೆ ಉತ್ತೇಜನ, ಪ್ರತಿಭೆಯ ಅನಾವರಣ, ಬಹುಭಾಷಾ ಸಂಗಮದ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.
ರಂಗಕಲೆಯಲ್ಲಿ ಸೈ ಎನಿಸಿದ, ಶ್ರೇಷ್ಠ ರಂಗಭೂಮಿ ಪರಿಣತರ ಮೂಲಕ ಈ ಕಾರ್ಯಕ್ರಮ ಸಾಗಿಬರುತ್ತಿದೆ. ಈ ಬಾರಿ ಶೃಂಗಾರ ರಸದ ವಿಷಯವಾಗಿ ಡಾ| ಶ್ರೀಪಾದ್ ಭಟ್ ಶಿರಸಿ ಅವರು ಅಚ್ಚುಕಟ್ಟಾಗಿ ವಿಷಯದ ವ್ಯಾಖ್ಯಾನ ನೀಡುವ ಮೂಲಕ ಅಭಿನಯದ ವಿವರಣೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಹೊಸದಿಲ್ಲಿ, ಮುಂಬಯಿ, ಉತ್ತರ ಕನ್ನಡ, ಮೈಸೂರು ಭಾಗದ ಕಲಾವಿದರು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಸೀಮಿತ ಅವಧಿಯಲ್ಲಿ ಸಿದ್ದಗೊಂಡ ಈ ಪ್ರಸ್ತುತಿಯ ಸಂಕಲನವನ್ನು ನಿತೀಶ್ ರಾವ್, ಸಂಗೀತವನ್ನು ಗೀತಂ ಗಿರೀಶ್ ನೀಡಿ ಮತ್ತಷ್ಟು ಮೆರುಗು ಬರುವಂತೆ ಮಾಡಿದ್ದಾರೆ.
ಪ್ರತಿ ಬಾರಿಯೂ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಉದ್ದೇಶ ವನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ಈಗಾಗಲೇ ನೂರಾರು ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.
ಮೆಚ್ಚುಗೆ
ರಂಗಭೂಮಿಯ ಬಗ್ಗೆ ಅಭಿರುಚಿ ಇರುವವರು ತಾವು ನಟಿಸಿ ತೋರಿಸುವುದಾಗಿ ತಿಳಿಸುತ್ತಿದ್ದಾರೆ. ಜತೆಗೆ ಈ ವಿನೂತನ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಾರೆ ಬೇರೆ ಬೇರೆ ಭಾಗಗಳಲ್ಲಿರುವ ರಂಗ ಭೂಮಿಯ ಕಲಾವಿದರನ್ನು ಸಾಮಾಜಿಕ ಜಾಲತಾಣದ ಮೂಲಕ ವಿಶ್ವವ್ಯಾಪ್ತಿಗೆ ಪರಿಚಯಿಸುವ ಕೆಲಸ ಆಗಿದೆ. ಸಾವಿರಾರು ಮಂದಿ ವಿಡಿಯೋವನ್ನು ಆಸ್ವಾದಿಸುವ ಮೂಲಕ ರಂಗಕಲೆಯ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳುತ್ತಿದ್ದಾರೆ ಎಂದು ಉಡುಪಿ ಸಂಸ್ಕೃತಿ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಅಭಿಪ್ರಾಯ ಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.