ಪ್ಯಾರಾಲಿಂಪಿಯನ್ ಆ್ಯತ್ಲೀಟ್ ದೀಪಾ ಮಲಿಕ್ ವಿದಾಯ
ಒಲಿಂಪಿಕ್ಸ್ ಪದಕ ಗೆದ್ದ ಭಾರತದ ಮೊದಲ ವನಿತಾ ಪ್ಯಾರಾ ಆ್ಯತ್ಲೀಟ್
Team Udayavani, May 12, 2020, 5:45 AM IST
ಹೊಸದಿಲ್ಲಿ: ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಆ್ಯತ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದೀಪಾ ಮಲಿಕ್ ಸೋಮವಾರ ಕ್ರೀಡಾ ಬದುಕಿಗೆ ಅಧಿಕೃತ ವಿದಾಯ ಘೋಷಿಸಿದರು.
“ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ’ದ ಅಧ್ಯಕ್ಷರಾಗಿರುವ ದೀಪಾ, ಈ ಹುದ್ದೆಗೆ ಏರುವ ಸಲುವಾಗಿ ಸ್ಪರ್ಧಾತ್ಮಕ ಕ್ರೀಡೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಈ ಹಿಂದೆ ಬಂದಿದ್ದರು.
ರಾಷ್ಟ್ರೀಯ ಕ್ರೀಡಾ ನಿಯಮಾವಳಿ ಪ್ರಕಾರ ಸಕ್ರಿಯ ಕ್ರೀಡಾಪಟುವೊಬ್ಬರು ಯಾವುದೇ ಕ್ರೀಡಾ ಫೆಡರೇಶನ್‌ನ ಹುದ್ದೆಯಲ್ಲಿ ಇರುವಂತಿಲ್ಲ.
ಬಹಳ ಹಿಂದಿನ ನಿರ್ಧಾರ
“ಭವಿಷ್ಯದಲ್ಲಿ ಪ್ಯಾರಾ ಸ್ಪೋರ್ಟ್ಸ್ ಇತರ ಕ್ರೀಡಾ ಸಾಧಕ ರಿಗೆ ಮಾರ್ಗದರ್ಶನ ನೀಡುವುದು ನನ್ನ ಗುರಿ. ಹೀಗಾಗಿ ಚುನಾವಣ ಪ್ರಕ್ರಿಯೆಯ ಉದ್ದೇಶದಿಂದ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿಗೆ (ಪಿಸಿಐ) ಬಹಳ ಹಿಂದೆಯೇ ಪತ್ರವೊಂದನ್ನು ಬರೆದು ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ಹೊಸ ಸಮಿತಿಯ ನೇಮಕಾತಿಯ ವಿಷಯದಲ್ಲಿ ನ್ಯಾಯಾಲಯದ ನಿಲುವನ್ನು ಕಾದು ನೋಡಬೇಕಿತ್ತು. ಇಂದು ಅಧಿಕೃತವಾಗಿ ವಿದಾಯ ಘೋಷಿಸುತ್ತಿದ್ದೇನೆ…’ ಎಂದು ದೀಪಾ ಮಲಿಕ್ ಹೇಳಿದ್ದಾರೆ.
ಮೊದಲ ವನಿತಾ ಸಾಧಕಿ
2016ರ ರಿಯೋ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ದೀಪಾ ಮಲಿಕ್ ಶಾಟ್‌ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದು ಪ್ಯಾರಾಲಿಂಪಿಕ್ ಕೂಟದಲ್ಲಿ ಭಾರತದ ವನಿತೆಯೊಬ್ಬರಿಗೆ ಒಲಿದ ಮೊದಲ ಪದಕವಾಗಿತ್ತು. 2018ರಂದು ದುಬಾೖಯಲ್ಲಿ ನಡೆದ ಪ್ಯಾರಾ ಆ್ಯತ್ಲೆಟಿಕ್ ಗ್ರಾÂನ್‌ಪ್ರಿ ಪಂದ್ಯಾವಳಿಯ ಎಫ್-53/54 ವಿಭಾಗದ ಜಾವೆಲಿನ್ ಎಸೆತದಲ್ಲಿ ಬಂಗಾರಕ್ಕೆ ಕೊರಳೊಡ್ಡಿದ್ದರು.
ರಿಯೋ ಸಾಧನೆಗಾಗಿ ಕಳೆದ ವರ್ಷ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಖೇಲ್‌ರತ್ನಕ್ಕೆ ದೀಪಾ ಮಲಿಕ್ ಭಾಜ ನರಾಗಿದ್ದರು. ಅವರು ಈ ಗೌರವಕ್ಕೆ ಪಾತ್ರರಾದ ದ್ವಿತೀಯ ಪ್ಯಾರಾ ಆ್ಯತ್ಲೀಟ್ ಆಗಿದ್ದರು. ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಮೊದಲಿಗರು (2017).
48 ವರ್ಷದ ದೀಪಾ ಮಲಿಕ್ 58 ರಾಷ್ಟ್ರೀಯ ಹಾಗೂ 23 ಅಂತಾರಾಷ್ಟ್ರೀಯ ಪದಕಗಳನ್ನು ಜಯಿಸಿದ್ದಾರೆ. 2012ರಲ್ಲಿ ಅರ್ಜುನ ಹಾಗೂ 2017ರಲ್ಲಿ ಪದ್ಮಶ್ರೀ ಗೌರವಕ್ಕೂ ದೀಪಾ ಪಾತ್ರರಾಗಿದ್ದರು.
“ನಾನು ಕಳೆದ ವರ್ಷವೇ ನಿವೃತ್ತಿಯಾಗಿದ್ದೆ’
“ನಾನು ಇಂದು ನಿವೃತ್ತಿ ಘೋಷಿಸಿದ್ದಾಗಿ ನಿಮಗೆ ಹೇಳಿದವರ್ಯಾರು? ಕಳೆದ ಸೆಪ್ಟಂಬರ್‌ನಲ್ಲೇ ನಾನು ಸ್ಪರ್ಧಾತ್ಮಕ ಕ್ರೀಡೆಗೆ ವಿದಾಯ ಹೇಳಿದ್ದೆ. ನಾನು ಪಿಸಿಐ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಈ ನಿರ್ಧಾರಕ್ಕೆ ಬಂದಿದ್ದೆ. ಆದರೆ ಇದನ್ನು ಸಾರ್ವಜನಿಕವಾಗಿ ಪ್ರಕಟಿಸಿರಲಿಲ್ಲ…’ ಎಂಬುದಾಗಿ ದೀಪಾ ಮಲಿಕ್ ತಮ್ಮ ವಿದಾಯದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ದಿನದ ಆರಂಭದಲ್ಲಿ ಮಾಡಿದ್ದ ಟ್ವೀಟ್ ಒಂದನ್ನು ಬಳಿಕ ಡಿಲೀಟ್ ಮಾಡಿದ್ದಾರೆ.
ದಿಲ್ಲಿ ಹೈಕೋರ್ಟ್ ನಿರ್ದೇಶನದಂತೆ ಕಳೆದ ಫೆಬ್ರವರಿಯಲ್ಲಿ ನಡೆದ ಪಿಸಿಐ ಚುನಾವಣೆಯಲ್ಲಿ ದೀಪಾ ಮಲಿಕ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು.
“ಸಪ್ಟಂಬರ್‌ನಲ್ಲೇ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿ (ಪಿಸಿಐ) ಅಧ್ಯಕ್ಷ ಚುನಾವಣೆಯ ಪ್ರಕ್ರಿಯೆ ಆರಂಭವಾಗಿತ್ತು. ಆಗಲೇ ನಾನು ನಿವೃತ್ತಿ ಪತ್ರವನ್ನು ಪಿಸಿಐಗೆ ಸಲ್ಲಿಸಿ ಬಳಿಕ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದೆ. ಇದರಲ್ಲಿ ಗೆದ್ದು ಬಂದು ಪಿಸಿಐ ಅಧ್ಯಕ್ಷ ಹುದ್ದೆ ಅಲಂಕರಿಸಿದ್ದೇನೆ’ ಎಂದು ದೀಪಾ ಸ್ಪಷ್ಟನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.