ಪೋಖರಣ್ ವಿಜ್ಞಾನಿಗಳ ನೆನೆದ ಪ್ರಧಾನಿ ನರೇಂದ್ರ ಮೋದಿ
Team Udayavani, May 12, 2020, 6:41 AM IST
ಹೊಸದಿಲ್ಲಿ: ರಾಷ್ಟ್ರೀಯ ತಂತ್ರಜ್ಞಾನ ದಿನವಾದ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ, 1998ರ ಪೋಖರಣ್ ಅಣ್ವಸ್ತ್ರ ಪರೀಕ್ಷೆ ಯಶಸ್ಸಿಗೆ ಕಾರಣಕರ್ತರಾದ ವಿಜ್ಞಾನಿಗಳನ್ನು ಸ್ಮರಿಸಿದರು.
ಅಲ್ಲದೆ, ‘ಇಂದು ಕೋವಿಡ್ ಸೋಂಕಿನಿಂದ ದೇಶವನ್ನು ಮುಕ್ತಗೊಳಿಸಲು ಕೂಡ ತಂತ್ರಜ್ಞಾನಗಳು ನೆರವಾಗುತ್ತಿವೆ. ವೈರಾಣುವನ್ನು ಸೋಲಿಸುವ ತಂತ್ರ ಜ್ಞಾನ ಮಾರ್ಗಗಳ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆರೋಗ್ಯಕರ ಪೃಥ್ವಿ ವಾತಾವರಣವನ್ನು ನಿರ್ಮಿಸಲು ಪಣತೊಡೋಣ’ ಎಂದು ಕರೆಕೊಟ್ಟರು. ವಿಶೇಷವಾಗಿ ಪೋಖ್ರಾನ್ ಪರೀಕ್ಷೆ ವೇಳೆ ವಾಜಪೇಯಿ ಅವರು ವಹಿಸಿದ್ದ ದಿಟ್ಟ ನಾಯಕತ್ವವನ್ನು ಮೋದಿ ಶ್ಲಾಘಿಸಿದರು.
ಏನಿದು ತಂತ್ರಜ್ಞಾನ ದಿನ?: 1998ರ ಮೇ 11ರಂದು ರಾಜಸ್ಥಾನದ ಪೋಖರಣ್‌ನಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ವಿಜ್ಞಾನಿ ಅಬ್ದುಲ್ ಕಲಾಂ ನೇತೃತ್ವದಲ್ಲಿ ಭಾರತ ಪ್ರಬಲ ಅಣ್ವಸ್ತ್ರ ಪರೀಕ್ಷೆ ನಡೆಸಿ, ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಸಾಲಿನಲ್ಲಿ ನಿಂತಿತ್ತು.
‘ಜೈ ಜವಾನ್, ಜೈ ಕಿಸಾನ್, ಜೈ ತಂತ್ರಜ್ಞಾನ್’ ಎನ್ನುವ ಘೋಷಣೆಯೂ ಮೊಳಗಿತ್ತು. ವಾಜಪೇಯಿ ಅವರು ಆ ದಿನವನ್ನು “ರಾಷ್ಟ್ರೀಯ ತಂತ್ರಜ್ಞಾನ ದಿವಸ್’ ಅಂತಲೇ ಆಚರಣೆಗೆ ತಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.