![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-415x234.jpg)
ಕಾರ್ಮಿಕರನ್ನು ಊರಿಗೆ ಕಳಿಸುವಲ್ಲಿ ಗೊಂದಲ ಸೃಷ್ಟಿಸಿದ ಸರ್ಕಾರ
Team Udayavani, May 12, 2020, 5:55 AM IST
![ಕಾರ್ಮಿಕರನ್ನು ಊರಿಗೆ ಕಳಿಸುವಲ್ಲಿ ಗೊಂದಲ ಸೃಷ್ಟಿಸಿದ ಸರ್ಕಾರ](https://www.udayavani.com/wp-content/uploads/2020/05/Kopala-tdy-1-9-620x386.jpg)
ಕುಷ್ಟಗಿ: ರಾಜ್ಯದ ಒಂದೆರೆಡು ಲಕ್ಷ ಕಾರ್ಮಿಕರನ್ನು ಅವರ ಊರುಗಳಿಗೆ ಮಾನವೀಯತೆ ಹಿನ್ನೆಲೆಯಲ್ಲಿ ತಲುಪಿಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ವಿಷಯವಾಗಿರಲಿಲ್ಲ. ಆದರೂ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸುವಲ್ಲಿ ಗೊಂದಲ ಸೃಷ್ಟಿಸಿತು ಎಂದು ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಸುರಪುರಕ್ಕೆ ಹೋಗುವ ಮಾರ್ಗದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಾರಿಗೆ ಬಸ್‌ಗಳು ಖಾಲಿ ಇದ್ದವು. ಚಾಲಕರಿಗೆ ಕೆಲಸ ಇರಲಿಲ್ಲ. ಡೀಸೆಲ್ ಖರ್ಚು ಮಾತ್ರ ಬರುತ್ತಿತ್ತು. ನಮ್ಮ ಪಕ್ಷದಿಂದ ಕೂಲಿಕಾರರ ಪ್ರಯಾಣ ದರ ಭರಿಸುವ ಪ್ರಸ್ತಾಪದಿಂದಾಗಿ ರಾಜ್ಯ ಸರ್ಕಾರ ವಿಧಿ ಇಲ್ಲದೇ ಉಚಿತ ಪ್ರಯಾಣಕ್ಕೆ ಅನುಮತಿ ನೀಡಿತು ಎಂದರು.
ಇಡೀ ದೇಶ ಮಹಾಮಾರಿ ಕೋವಿಡ್ ಸಂಕಷ್ಟದಲ್ಲಿರುವಾಗ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರದ ನಡೆ ಖಂಡನೀಯ. ಲಾಕ್‌ಡೌನ್ ಜಾರಿಯಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಆರ್ಥಿಕ ಚೇತರಿಕೆಗಾಗಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಸರ್ಕಾರಕ್ಕೆ ಮದ್ಯ ಮಾರಾಟದಿಂದ ಮೂಲ ಆದಾಯ ಬಂದರೂ, ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿತ್ತು. ನಮ್ಮ ಅಂದಾಜಿನಲ್ಲಿ ಲಾಕ್‌ಡೌನ್ ಮೇ ಅಂತ್ಯದವರೆಗೂ ಮುಂದೂಡಬೇಕಿತ್ತು. ಪ್ರತಿಯೊಂದು ರೋಗಕ್ಕೂ ಅಂತ್ಯ ಇದ್ದೆ ಇರುತ್ತದೆ. ಸಾರ್ವಜನಿಕರು ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ, ಶೇಖರಗೌಡ ಮಾಲಿಪಾಟೀಲ ಮತ್ತೀತರಿದ್ದರು.
ಟಾಪ್ ನ್ಯೂಸ್
![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![3-gangavathi](https://www.udayavani.com/wp-content/uploads/2024/12/3-gangavathi-1-150x90.jpg)
Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು
![2-koppala](https://www.udayavani.com/wp-content/uploads/2024/12/2-koppala-150x90.jpg)
Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ
![ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ](https://www.udayavani.com/wp-content/uploads/2024/12/Hanumamala-150x106.jpg)
ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ
![5-govt-office](https://www.udayavani.com/wp-content/uploads/2024/12/5-govt-office-150x90.jpg)
ಕೃಷ್ಣ ನಿಧನ;ಪ್ರಮುಖ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ
![1-gangavathi](https://www.udayavani.com/wp-content/uploads/2024/12/1-gangavathi-150x90.jpg)
ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ
MUST WATCH
ಹೊಸ ಸೇರ್ಪಡೆ
![Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು](https://www.udayavani.com/wp-content/uploads/2024/12/mumbai4-150x84.jpg)
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
![Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ](https://www.udayavani.com/wp-content/uploads/2024/12/chik-150x87.jpg)
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
![9](https://www.udayavani.com/wp-content/uploads/2024/12/9-26-150x80.jpg)
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
![8](https://www.udayavani.com/wp-content/uploads/2024/12/8-26-150x80.jpg)
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
![0055](https://www.udayavani.com/wp-content/uploads/2024/12/0055-150x90.jpg)
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.