ಜಿಪಂ ಉಪಾಧ್ಯಕ್ಷೆ ಪದಚ್ಯುತಿಗೆ ಮುಹೂರ್ತ ಫಿಕ್ಸ್!
20ಕ್ಕೆ ಉಪಾಧ್ಯಕ್ಷೆ ನಿರ್ಮಲಾ ಭವಿಷ್ಯ ನಿರ್ಧಾರ; ಸ್ವಪಕ್ಷೀಯರಿಂದಲೇ ಅವಿಶ್ವಾಸ?
Team Udayavani, May 12, 2020, 6:26 AM IST
ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಜಿಪಂನ ಆಡಳಿತರೂಢ ಕಾಂಗ್ರೆಸ್ ಸದಸ್ಯರ ನಡುವೆ ಮತ್ತೆ ಭಿನ್ನಮತ ಸ್ಫೋಟಗೊಂಡಿದ್ದು, ಇದೀಗ ಉಪಾಧ್ಯಕ್ಷರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಲು ಮೇ
20ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅವಿಶ್ವಾಸ ಮಂಡನೆಗೆ ಕರೆದಿರುವ ಸಭೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಒಟ್ಟು 28 ಸದಸ್ಯ ಬಲ ಇರುವ ಜಿಪಂನಲ್ಲಿ 21 ಕಾಂಗ್ರೆಸ್, 5 ಜೆಡಿಎಸ್ ಹಾಗೂ ಸಿಪಿಎಂ ಹಾಗೂ ಬಿಜೆಪಿ ತಲಾ ಒಬ್ಬರು ಸದಸ್ಯರು ಇದ್ದಾರೆ. ಅಧಿಕಾರ ಹಿಡಿಯುವಷ್ಟು ಸಂಖ್ಯಾ ಬಲ ಇದ್ದರೂ ಕಾಂಗ್ರೆಸ್ನಲ್ಲಿ ಪದೇ ಪದೆ ಸ್ಫೋಟಗೊಳ್ಳುತ್ತಿರುವ ಭಿನ್ನಮತ ಈಗಾಗಲೇ ಜಿಪಂನಲ್ಲಿ ಮೂರು ಮಂದಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದೆ.
ಅವಿಶ್ವಾಸಕ್ಕೆ ನಿರ್ಧಾರ: ಕಳೆದ ಬಾರಿ ಜಿಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಪಿ.ಎನ್. ಪ್ರಕಾಶ್ರನ್ನು ಸೋಲಿಸಿ ಬಂಡಾಯ ಕಾಂಗ್ರೆಸ್
ಅಭ್ಯರ್ಥಿಯಾಗಿದ್ದ ಎಂ.ಬಿ.ಚಿಕ್ಕನರ ಸಿಂಹಯ್ಯ ಗೆಲುವು ಸಾಧಿಸಿದ್ದರು. ಆದರೆ ಮಾತುಕತೆಯಿಂದ ಎರಡೂವರೆ ವರ್ಷ ಅಧಿಕಾರ ಅವಧಿ ಮುಗಿದರೂ ಉಪಾಧ್ಯಕ್ಷೆ ಪಿ.ನಿರ್ಮಲಾ ಕುರ್ಚಿಗೆ ಅಂಟಿ ಕೊಂಡಿದ್ದಾರೆಂದು ಅವರ ವಿರುದ್ಧ ಸ್ವಪಕ್ಷೀಯ ಸದಸ್ಯರೆ ಅವಿಶ್ವಾಸ ಮಂಡನೆ ಮಾಡಲು ಮುಂದಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿರೊಧಿ ಬಣದ ನಡೆ ಏನು?: ಮೊದಲ ಬಾರಿಗೆ ಜಿಪಂ ಅಧ್ಯಕ್ಷರಾಗಿ ಪಿ.ಎನ್.ಕೇಶವ ರೆಡ್ಡಿ ಜೊತೆ ಶಿಡ್ಲಘಟ್ಟ ತಾಲೂಕಿನ ಜಂಗಮ ಕೋಟೆ ಕ್ಷೇತ್ರದ ಪಿ . ನಿರ್ಮಲಾ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಆದರೆ ಪಕ್ಷ ದೊಳಗೆ ಪೂರ್ವ ನಿಗದಿಯಂತೆ ಎರಡೂವರೆ ವರ್ಷ ಮುಗಿದರೂ ರಾಜೀನಾಮೆ ನೀಡುವಂತೆ ಪಕ್ಷ ಸೂಚಿಸಿದರೂ ಕ್ಯಾರೆ ಎನ್ನದ ಉಪಾಧ್ಯಕ್ಷೆ ಮೇಲೆ ಈಗ ಕಾಂಗ್ರೆಸ್ ಅವಿಶ್ವಾಸ ಮಂಡನೆಯ ಬ್ರಹ್ಮಾಸ್ತ್ರ ಪ್ರಯೋಗಿಸಿದರೂ ಅದು ಯಶಸ್ಸು ಆಗುತ್ತದೆಯೆ? ಕಾಂಗ್ರೆಸ್ ವಿರೋಧಿ ರಾಜಕೀಯ ಬಣ ಈ ವಿಚಾರದಲ್ಲಿ ಯಾವ ಹೆಜ್ಜೆ ಇಡುತ್ತದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಜಿಪಂ ಆರಿಸಿ ಬಂದಿರುವವರ ಪೈಕಿ ಬಿಸಿಎಂ (ಎ) ಮಹಿಳಾ ಮೀಸಲಿಗೆ ನಿರ್ಮಿಲ ಬಿಟ್ಟರೆ ಗೌರಿಬಿದನೂರು ತಾಲೂಕಿನ ತೊಂಡೇ ಬಾವಿ ಜಿಪಂ ಸದಸ್ಯೆ ಸರಸ್ವತಮ್ಮ ಮಾತ್ರ
ಇದ್ದು, ಇವರ ಆಯ್ಕೆ ಅವಿರೋಧ ನಡೆಯುತ್ತಾ ಅಥವಾ ಕಳೆದ ಬಾರಿ ಜಿಪಂ ಅಧ್ಯಕ್ಷರ ಚುನಾವಣೆಯಂತೆ ಉಪಾಧ್ಯಕ್ಷರ ಅವಿಶ್ವಾಸ ಮಂಡನಾ ಸಭೆ ಮೇಲಾಟಗಳಿಗೆ ಸಾಕ್ಷಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಬೆಳಗ್ಗೆ 11:30ಕ್ಕ ಸಭೆ: ಉಪಾಧ್ಯಕ್ಷೆ ನಿರ್ಮಲಾ ವಿರುದ್ಧ ಅವಿಶ್ವಾಸ ನಿಟ್ಟಿನಲ್ಲಿ ಮೇ 20 ರಂದು ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಸಭೆಯನ್ನು ಬೆಂಗಳೂರು ಪ್ರಾದೇಶಿಕ ಅಭಿವೃದ್ಧಿ ಆಯುಕ್ತರಾದ ವಿ.ಪಿ.ಇಕ್ಕೇರಿ ಸಭೆ ಕರೆದಿದ್ದಾರೆ.
ಮೇ 20ಕ್ಕೆ ಜಿಪಂ ಉಪಾಧ್ಯಕ್ಷೆ ನಿರ್ಮಲಾ ವಿರುದ್ಧ ಅವಿಶ್ವಾಸ
ಮಂಡನೆ ಸಭೆ ಕರೆಯಲಾಗಿದೆ. ಇದು ಪಕ್ಷದ ನಿರ್ಧಾರ. ಈ ಹಿಂದೆಯು ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅವರು ನೀಡಿರಲಿಲ್ಲ. ಅವರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ತೊಂಡೇಬಾವಿ ಕ್ಷೇತ್ರದ ಸದಸ್ಯೆ ಸರಸ್ವತಮ್ಮ ಅವಿರೋಧವಾಗಿ ಆಯ್ಕೆ ಯಾಗುವ ವಿಶ್ವಾಸವಿದೆ.
● ಪಿ.ಎನ್.ಪ್ರಕಾಶ್, ಕಾಂಗ್ರೆಸ್ ಜಿಪಂ ಸದಸ್ಯ
● ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chintamani: ಭೀಕರ ಅಪಘಾತ; ಬಸ್ ಚಕ್ರದ ಕೆಳಗೆ ಬೈಕ್ ಸಿಲುಕಿ ದಂಪತಿ ಸಾವು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದೆ: ಸರಕಾರ
Chennai: ಐಶ್ವರ್ಯ ರಜನಿಕಾಂತ್, ಧನುಷ್ಗೆ ವಿಚ್ಛೇದನ ನೀಡಿದ ಕೋರ್ಟ್
information Technology Appointment: ಬೆಂಗಳೂರಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್ಗೆ ಸೋಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.