ಲಾಕ್‌ಡೌನ್‌ ಎಫೆಕ್ಟ್ ರಕ್ಷಿತ್‌ ಹೊಸ ಅವತಾರ

Team Udayavani, May 12, 2020, 7:52 AM IST

rak

ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಚಿತ್ರರಂಗದ ಸಂಪೂರ್ಣ ಚಟುವಟಿಕೆಗಳು ಸ್ತಬಟಛಿವಾಗಿದ್ದು, ನಟ, ನಟಿಯರು ಸಹ ತಮ್ಮದೇ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕೆಲವು ತಾರೆಯರು ಬೇಜಾರಿನಲ್ಲಿ ಈ ಸಮಯ ಕಳೆಯುತ್ತಿದ್ದರೆ,  ಇನ್ನೂ ಹಲವರು ತಮ್ಮ ಮುಂದಿನ ಚಿತ್ರಗಳಿಗೆ ತೆರೆಮರೆಯಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಒಂದಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ಹೀಗೆ ಬಹುತೇಕ ಎಲ್ಲ ತಾರೆಯರು ತಮ್ಮದೇ ಕೆಲಸದಲ್ಲಿ ನಿರತರಾಗಿರುವಂತೆಯೇ, ನಟ ರಕ್ಷಿತ್‌ ಶೆಟ್ಟಿ ಸಹ ತಮ್ಮ ಸಿನಿಮಾ ಕಾರ್ಯದಲ್ಲಿ ತೊಡಗಿದ್ದು, ತಮ್ಮ ಹೊಸ ಹೊಸ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ತಮ್ಮ ಎರಡ್ಮೂರು ಸಿನಿಮಾಗಳ ಕಾರ್ಯದಲ್ಲಿ  ತೊಡಗಿರುವ ಕುರಿತು ಮಾಹಿತಿ ನೀಡಿದ್ದ ರಕ್ಷಿತ್‌ ಶೆಟ್ಟಿ, ಇದೀಗ ತಮ್ಮ ಸ್ಥಿತಿ ಕುರಿತು ಫೋಟೋ ಹಾಕಿದ್ದಾರೆ. ರಕ್ಷಿತ್‌ ಶೆಟ್ಟಿ ತಾವೇ ನಿರ್ದೇಶಿಸುತ್ತಿರುವ ಪುಣ್ಯಕೋಟಿ ಚಿತ್ರದ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದು, ಇತ್ತೀಚೆಗೆ ಕಾಡಿಗೆ ಸಹ ಹೋಗಿದ್ದರು.

ಇದೀಗ ಹೋಮ್‌ ಕ್ವಾರಂಟೈನ್‌ ನಲ್ಲಿದ್ದು, ಇದರ ನಡುವೆಯೇ ಸಿನಿಮಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಕ್ಷಿತ್‌ ಶೆಟ್ಟಿ ತಮ್ಮ ಮೂವರು ರೂಮ್‌ ಮೇಟ್ಸ್‌ ಜೊತೆಗೆ ಬೆಂಗಳೂರಿನ ಮನೆಯಲ್ಲಿ ಬ್ಯಾಚ್ಯುಲರ್‌ ಲೈಫ್ ಕಳೆಯುತ್ತಿದ್ದಾರೆ. ಈ ಮಧ್ಯೆ ಹತ್ತು ಹಲವು ಕೆಲಸಗಳಲ್ಲಿ ತೊಡಗಿದ್ದಾರೆ. ಕಥೆಗಳನ್ನು ಬರೆಯುವುದು, ಜೊತೆಗೆ ಚಾರ್ಲಿ ಸಿನಿಮಾದ ಕೆಲಸಗಳನ್ನು ಸಹ ಮಾಡುವುದು, ಪುಸ್ತಕ ಓದುವುದು, ಕಥೆ ಬರೆಯುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿರುವುದಾಗಿ ಈ ಹಿಂದೆ ಲೈನ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದರು.

ಇದೀಗ ಇದ್ದಕ್ಕಿದ್ದಂತೆ ಗಡ್ಡಬಿಟ್ಟಿರುವ ಚಿತ್ರಗಳನ್ನು ಸಾಮಾಜಿಕ  ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿಯನ್ನುಂಟು ಮಾಡಿದ್ದಾರೆ. ಲಾಕ್‌ ಡೌನ್‌ ಹಿನ್ನೆಲೆ ಹೇರ್‌ ಕಟಿಂಗ್‌ ಸಲೂನ್‌ ತೆರೆದಿಲ್ಲ. ಅಲ್ಲದೆ ಸಿನಿಮಾಗಳ ಸಿದಟಛಿತೆಯಲ್ಲಿ ಬ್ಯುಸಿಯಾಗಿರುವ ರಕ್ಷಿತ್‌ ಶೆಟ್ಟಿ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಇದೇ ಚಿತ್ರಗಳನ್ನು ಇನ್‌ ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪೋಟೊಗೆ ಹ್ಯಾಶ್‌ ಟ್ಯಾಗ್‌ನೊಂದಿಗೆ ಲಾಕ್‌ಡೌನ್‌ ಎಫೆಕ್ಟ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್‌ ಮಾಡಿ, ಇದು ನಿಮ್ಮ ಮುಂದಿನ ಚಿತ್ರದ ಓಪನಿಂಗ್‌ ಸೀನ್‌ ಲುಕ್‌ ಅನ್ಸುತ್ತೆ ಎಂದು ಕಮೆಂಟ್‌ ಮಾಡಿದ್ದಾರೆ.

ಸದ್ಯ ರಕ್ಷಿತ್‌ ಶೆಟ್ಟಿ ಚಾರ್ಲಿ ಚಿತ್ರೀಕರಣವನ್ನು ನಿಲ್ಲಿಸಿದ್ದು, ಮತ್ತೆ ಯಾವಾಗ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂಬುದು ಇನ್ನೂ ನಿಶ್ಚಯವಾಗಿಲ್ಲ. ವಾತಾವರಣ ಸರಿಯಾಗಿದೆ ಎಂದು ಸರ್ಕಾರ  ಹೇಳುವವರೆಗೆ ಚಿತ್ರೀಕರಣ ಪ್ರಾರಂಭಿಸುವುದಿಲ್ಲ. ಎಲ್ಲರೂ ಅವರ ಮನೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದೇವೆ. ಕಿರಣ್‌ ರಾಜ್‌ ಅವರು ಚಾರ್ಲಿ ಸಿನಿಮಾದ ಫ‌ಸ್ಟ್‌ ಹಾಫ್ ಅನ್ನು ಎಡಿಟ್‌ ಮಾಡಿ, ಬ್ಯಾಗ್ರೌಂಡ್‌ ಕೆಲಸ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

army-1

Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

arrested

ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ

hk-patil

John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್

Supreme Court: ಆರೋಪಿ, ಅಪರಾಧಿ ಮನೆಯನ್ನು ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

Supreme Court: ಆರೋಪಿ, ಅಪರಾಧಿ ಮನೆಯನ್ನು ಏಕಾಏಕಿ ನೆಲಸಮ ಮಾಡುವಂತಿಲ್ಲ: ಸುಪ್ರೀಂ ತೀರ್ಪು

3-belagavi

Belagavi: ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಸ್ಥಾನಕ್ಕೆ ಢವಳೇಶ್ವರ ದಿಢೀರ್ ರಾಜೀನಾಮೆ

1-eqwqwewe

Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

Bhairathi Ranagal: ಭೈರತಿಗೆ ಸ್ಯಾಂಡಲ್‌ವುಡ್‌ ಆರತಿ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

Sandalwood: ಪ್ಯಾನ್‌ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್‌ ಆಗಲಿದೆ ಕನ್ನಡದ ʼಭಗತ್‌ʼ

Sandalwood: ಪ್ಯಾನ್‌ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್‌ ಆಗಲಿದೆ ಕನ್ನಡದ ʼಭಗತ್‌ʼ

Sandalwood: ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

Sandalwood: ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

Toxic Movie: ಯಶ್‌ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್‌ ದಾಖಲು

Toxic Movie: ಯಶ್‌ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್‌ ದಾಖಲು

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

1(1

Vitla: ಉದ್ಘಾಟನೆಯಾದ ನಾಡಕಚೇರಿ ತೆರೆದಿಲ್ಲ !

army-1

Manipur; ಹಿಂಸಾಚಾರದ ಬಳಿಕ ಕೇಂದ್ರದಿಂದ 20 CAPF ತುಕಡಿಗಳ ರವಾನೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್‌ʼ ಚಿತ್ರದ ಟೈಟಲ್‌ ಬದಲಾವಣೆ

arrested

ED; ಅಕ್ರಮವಾಗಿ ಒಳನುಸುಳಿದ ಇಬ್ಬರು ಬಾಂಗ್ಲಾ ಪ್ರಜೆಗಳು ಸೇರಿ ಮೂವರ ಬಂಧನ

hk-patil

John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.