ಲಾಕ್ಡೌನ್ನಲ್ಲಿ ಸುದೀಪ್ ವರ್ಕೌಟ್
Team Udayavani, May 12, 2020, 7:55 AM IST
ಪೈಲ್ವಾನ್ ಚಿತ್ರಕ್ಕಾಗಿ ಸುದೀಪ್ ಜಿಮ್ನಲ್ಲಿ ಕಸರತ್ತು ಮಾಡಿ, ಬಾಡಿ ಬಿಲ್ಡ್ ಮಾಡಿರೋದು ನಿಮಗೆ ಗೊತ್ತೇ ಇದೆ. ಜಿಮ್ ಕಡೆಗೆ ಮುಖ ಮಾಡದೇ ಇದ್ದ ಸುದೀಪ್ ಆ ಚಿತ್ರಕ್ಕಾಗಿ ಕಟ್ಟುನಿಟ್ಟಿನ ಡಯೆಟ್ ಪಾಲಿಸಿ, ಫಿಟ್ ಆಗಿದ್ದರು. ಈಗ ಸುದೀಪ್ ಮತ್ತೂಮ್ಮೆ ಬಾಡಿ ಬಿಲ್ಡ್ ಮಾಡಲು ಹೊರಟಿದ್ದಾರೆ. ಅದಕ್ಕೆ ಮುಖ್ಯವಾಗಿ ಎರಡು ಕಾರಣ, ಮೊದಲನೇಯದಾಗಿ ಲಾಕ್ಡೌನ್ ಸಮಯದ ಸದುಪಯೋಗ, ಎರಡನೇಯದಾಗಿ ಫ್ಯಾಂಟಮ್. ಹೌದು, ಲಾಕ್ ಡೌನ್ನಿಂದಾಗಿ ಸುದೀಪ್ ಮನೆಯಲ್ಲೇ ಇದ್ದಾರೆ.
ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ ಸುದೀಪ್ ಮತ್ತೆ ಜಿಮ್ ಮಾಡಿದ್ದಾರೆ. ತಮ್ಮ ಮನೆಯಲ್ಲೇ ಜಿಮ್ ಜೊತೆಗೆ ಡಯೆಟ್ ಪಾಲಿಸಿ ಫಿಟ್ ಆಗಿದ್ದಾರೆ. ಇತ್ತೀಚೆಗೆ ಸುದೀಪ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟ ಮತ್ತೂಮ್ಮೆ ಬಾಡಿ ಬಿಲ್ಡ್ ಮಾಡಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಅಂದಹಾಗೆ, ಸುದೀಪ್ ಅವರ ಈ ವರ್ಕೌಟ್ ಗೆ ಮತ್ತೂಂದು ಕಾರಣ ಫ್ಯಾಂಟಮ್ ಚಿತ್ರ. ಈ ಚಿತ್ರದಲ್ಲಿ ಸುದೀಪ್ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳುತಿದ್ದು, ಆ ಕಾರಣದಿಂದಲೂ ರ್ಕೌಟ್ ಮಾಡುತ್ತಿದ್ದಾರೆನ್ನಲಾಗಿದೆ.
ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇದು ಔಟ್ ಅಂಡ್ ಔಟ್ ಅಕ್ಷನ್ ಸಿನಿಮಾವಾಗಿದ್ದು, ಈ ಲಾಕ್ಡೌನ್ನಲ್ಲಿ ಸುದೀಪ್ ವರ್ಕೌಟ್ ಹಿಂದೆ ಅಭಿಮಾನಿಗಳು ನೋಡಿರದ ರೀತಿಯಲ್ಲಿ ಸುದೀಪ್ ಅವರನ್ನು ತೋರಿಸಬೇಕೆಂಬ ಉದ್ದೇಶ ಚಿತ್ರತಂಡದಕ್ಕಿರೋದರಿಂದ ಅವರ ಕನಸಿಗೆ ಸುದೀಪ್ ಕೂಡಾ ಸಾಥ್ ನೀಡುತ್ತಿದ್ದಾರೆ. ಸುದೀಪ್ ಅವರ ವರ್ಕೌಟ್ ಫೋಟೋಗೆ ಚಿತ್ರರಂಗದ ಮಂದಿ ಕೂಡಾ ಫಿದಾ ಆಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.