ಅಭ್ಯಾಸಕಾಗಿ ಸಚಿವರನ್ನು ಒತ್ತಾಯಿಸಿದ ವೇಟ್ಲಿಫ್ಟರ್ ಮೀರಾಭಾಯಿ ಚಾನು
Team Udayavani, May 12, 2020, 11:05 AM IST
ನವದೆಹಲಿ: ಭಾರತದ ಖ್ಯಾತ ವೇಟ್ಲಿಫ್ಟರ್ ಮೀರಾಭಾಯಿ ಚಾನು ಸೇರಿದಂತೆ ಹಲವಾರು ವೇಟ್ ಲಿಫ್ಟರ್ಗಳು ಅಭ್ಯಾಸ ನಡೆಸಲು ಅವಕಾಶ ನೀಡಬೇಕೆಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರನ್ನು ಒತ್ತಾಯಿಸಿದ್ದಾರೆ.
“ವೇಟ್ ಲಿಫ್ಟಿಂಗ್ ತರಬೇತಿಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಲು ಅವಕಾಶ ನೀಡಬೇಕೆಂದು ಕ್ರೀಡಾ ಸಚಿವರಿಗೆ ಒತ್ತಾಯಿಸಿರುವುದಾಗಿ ಮೀರಾಭಾಯಿ ಚಾನು ತಿಳಿಸಿದ್ದಾರೆ.
ಒಂದು ವಾರದೊಳಗೆ ಇದಕ್ಕೆ ಪರಿಹಾರ ಹುಡುಕುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಮೀರಾಭಾಯಿ ಚಾನು ಹೇಳಿದ್ದಾರೆ.
ಸದ್ಯ ಮಿರಾಭಾಯಿ ಚಾನು, ಯೂತ್ ಒಲಿಂಪಿಕ್ಸ್ ಬಂಗಾರದ ಪದಕ ವಿಜೇತೆ ಜೆರೆಮಿ ಲ್ಯಾಲ್ರಿನ್ನುಂಗಾ, ಎರಡು ಬಾರಿಯ ಕಾಮನ್ ವೆಲ್ತ್ ಚಾಂಪಿಯನ್ ಸತೀಶ್ ಸಿವಲಿಂಗಮ್ ಸೇರಿದಂತೆ ಒಂಬತ್ತು ಮಂದಿ ವೇಟ್ ಲಿಫ್ಟರ್ ಗಳು ಪಟಿಯಾಲಾ ಕ್ಯಾಂಪ್ ನಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.