ಪಾಸಿಟಿವ್ ಮಾಹಿತಿಗೆ ಆರೋಗ್ಯ ಸೇತು ಆ್ಯಪ್
Team Udayavani, May 12, 2020, 10:45 AM IST
ಚಾಮರಾಜನಗರ: ದೃಢೀಕೃತ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಕೋವಿಡ್-19 ಆ್ಯಪ್ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.ರವಿ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್19 ಮುಂಜಾಗ್ರತಾ ಕ್ರಮಗಳು, ಆರೋಗ್ಯ ಸೇವೆಗಳ ಯೋಜನೆ ಅನುಷ್ಠಾನ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಮೇಲೆ ನಿಗಾ ಇರಿಸುವ ಮತ್ತು ವೈಯಕ್ತಿಕ ಅಲರ್ಟ್ ಸಂದೇಶದ ಮೂಲಕ ಎಚ್ಚರಿಕೆ ನೀಡುವ ವಿಶೇಷತೆಯುಳ್ಳ ಆರೋಗ್ಯ ಸೇತು ಆ್ಯಪ್ ಉಪಯೋಗವಾಗಲಿದೆ. ಆ್ಯಪ್ ಅನ್ನು ಅಳವಡಿಸಿಕೊಂಡಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟ ವ್ಯಕ್ತಿ ಸಮೀಪದಲ್ಲಿ ಇದ್ದಲ್ಲಿ ಕೂಡಲೇ ಆ್ಯಪ್ ಅಲರ್ಟ್ ಎಚ್ಚರಿಸುತ್ತದೆ ಎಂದರು.
ಈ ಆ್ಯಪ್ ಅನ್ನು ಸಾರ್ವಜನಿಕರು, ಸರ್ಕಾರಿ ನೌಕರರು, ಬ್ಯಾಂಕ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ನೌಕರರು, ಖಾಸಗಿ ವಲಯದ ನೌಕರರು ಡೌನ್ ಲೋಡ್ ಮಾಡಿಕೊಂಡು ಅಧಿಕಾರಿಗಳು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು. ಔಷಧ ಮಾರಾಟ ಅಂಗಡಿಗಳು ಅಂಗಡಿಗೆ ಬರುವವರಿಗೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ತಿಳಿವಳಿಕೆ ನೀಡಬೇಕು.
ಮನೆ ಬಾಗಿಲಿಗೆ ಔಷಧ ತಲುಪಿಸುವ ಔಷಧ ಮಿತ್ರ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಟೆಲಿ ಮೆಡಿಸನ್ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಮಹತ್ವ, ಬಳಕೆಗೆ ಪ್ರೋತ್ಸಾಹಿಸಲು ಕರಪತ್ರ, ಪೋಸ್ಟರ್, ವಾಯ್ಸ ಮೆಸೇಜ್ ವಿವಿಧ ಮಾಧ್ಯಮಗಳ ಮುಖೇನ ಹೆಚ್ಚು ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿ ರವಿ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜೀವ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಮನೆ ಕಟ್ಟಲು ಸಾಲ ಮಾಡಿದ್ದ ಪತಿ… ಚಿಂತೆಯಿಂದ ಆತ್ಮಹತ್ಯೆಗೆ ಶರಣಾದ ಪತ್ನಿ
Bandipur ಹೆದ್ದಾರಿಯಲ್ಲಿ ಚೆಲ್ಲಿದ ಅಕ್ಕಿ ಮೆಲ್ಲುತ್ತ ನಿಂತ ಕಾಡಾನೆಗಳು: ಟ್ರಾಫಿಕ್ ಜಾಮ್
Gundlupete: ಕಂದೇಗಾಲದಲ್ಲಿ ಬೋನಿಗೆ ಬಿದ್ದ ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Gundlupete: ಬಂಡೀಪುರದಲ್ಲಿ ಲಾರಿ ಅಡ್ಡಗಟ್ಟಿದ ಕಾಡಾನೆ: ತರಕಾರಿ ಚೆಲ್ಲಾಪಿಲ್ಲಿ
Kollegala: ಆನೆ ದಂತ ಸಾಗಿಸುತ್ತಿದ್ದ ಮೂವರಲ್ಲಿ ಇಬ್ಬರ ಬಂಧನ, ಓರ್ವ ಪರಾರಿ
MUST WATCH
ಹೊಸ ಸೇರ್ಪಡೆ
Uppala: ಲಾರಿಯ ಚಕ್ರ ಹರಿದು ಬೆನ್ನೆಲುಬು ಮುರಿತ: ಫೊರೆನ್ಸಿಕ್ ತಜ್ಞರ ವರದಿ
ಯಕ್ಷಗಾನ ಕಲಾವಿದನಿಗೆ ಹಲ್ಲೆ ಪ್ರಕರಣ: ಆರೋಪಿಯ ಜಾಮೀನು ರದ್ದುಪಡಿಸಲು ಮನವಿ
Mangaluru: ಜಪ್ಪು ಬಪ್ಪಾಲ್ ನಿವಾಸಿ ನಾಪತ್ತೆ: ನೇತ್ರಾವತಿ ದಡದಲ್ಲಿ ಸ್ಕೂಟರ್ ಪತ್ತೆ
ಗಂಜಿಮಠ ಪ್ಲಾಸ್ಟಿಕ್ ಪಾರ್ಕ್: ವಿವಾದಿತ ಭೂಮಿ ಕೈಬಿಟ್ಟು ಪರಿಷ್ಕೃತ ಯೋಜನೆ ರೂಪಿಸಿ: ಸಂಸದ
Mudubidire: ಕಡಲಕೆರೆ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಚಾಲನೆ