ಆರೋಗ್ಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುತ್ತಾ ಕೋವಿಡ್ ?
Team Udayavani, May 12, 2020, 2:42 PM IST
ರೋಮ್ : ಕೋವಿಡ್ ಸೊಂಕಿಗೆ ತುತ್ತಾಗಿದ್ದ ಮೋರೆನಾ ಕೊಲಂಬಿ ಮಾ.16ರಂದು ನೆಗೆಟಿವ್ ವರದಿ ಪಡೆದುಕೊಂಡು ಆಸ್ಪತ್ರೆಯಿಂದ ಹೊರ ಬಂದರು. ಕೋವಿಡ್ ಗೆ ತುತ್ತಾದ ಐದು ವಾರಗಳ ಬಳಿಕ ಅಂದರೆ ಎ.21ರಂದು ಅವರು ಪ್ರಸಾಧನ ವಸ್ತುಗಳಿಗೆ ಬಣ್ಣ ಸರಬರಾಜು ಮಾಡುವ ತನ್ನ ಕಂಪೆನಿಯ ನೌಕರಿಗೆ ಹಾಜರಾದರು. ಆದರೆ ಆಕೆಗೆ ಒಂದು ದಿನವೂ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಉಸಿರಾಟದ ಸಮಸ್ಯೆ ಮತ್ತು ಮೈಕೈ ನೋವು ಅವರನ್ನು ಕಾಡ ತೊಡಗಿತು. ಆದರೆ ಮತ್ತೂಮ್ಮೆ ಪರೀಕ್ಷೆ ಮಾಡಿಕೊಂಡಾಗಲೂ ವರದಿ ನೆಗೆಟಿವ್ ಬಂತು.
ರೋಮ್‌ನಲ್ಲಿ ಕೋವಿಡ್ ಸೋಂಕಿಗೊಳಗಾದ ಮೊದಲ ರೋಗಿಗಳಲ್ಲಿ ಕೊಲಂಬಿಯೂ ಸೇರಿದ್ದಾರೆ. ಆದರೆ 11 ವಾರಗಳ ಬಳಿಕವೂ ಅವರ ಆರೋಗ್ಯ ಸಹಜ ಸ್ಥಿತಿಗೆ ಬಂದಿಲ್ಲ. ಮಿಲನ್ ನಗರದ ಹೊರಭಾಗದ ಬಡಾವಣೆಯಲ್ಲಿ ವಾಸವಾಗಿರುವ ಕೊಲಂಬಿ “ನನ್ನ ಮಾಮೂಲು ದಿನಚರಿಗೆ ಮರಳಲು ಸಾಧ್ಯವಾಗುತ್ತಿಲ್ಲ’ ಎಂದು ದುಃಖ ವ್ಯಕ್ತಪಡಿಸುತ್ತಿದ್ದಾರೆ.
ಇದು ಕೊಲಂಬಿ ಒಬ್ಬರ ಕತೆಯಲ್ಲ. ಇಟಲಿಯಲ್ಲಿ ಈ ರೀತಿ ವರದಿ ನೆಗೆಟಿವ್ ಬಂದಿದ್ದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ನೂರಾರು ಮಂದಿಯಿದ್ದಾರೆ.
ಕೋವಿಡ್ ಸೋಂಕಿನ ವರದಿ ನೆಗೆಟಿವ್ ಆದರೂ ಕೆಲವರು ಪೂರ್ಣವಾಗಿ ಚೇತರಿಸದೆ ಇರುವುದು ಅಥವಾ ಅವರ ಆರೋಗ್ಯ ಹಿಂದಿನ ಸಹಜ ಸ್ಥಿತಿಗೆ ಮರಳದೇ ಇರುವುದು ಒಂದು ಹೊಸ ಬೆಳವಣಿಗೆ. ಇದು ಕೋವಿಡ್ ವೈರಸ್ ತಾತ್ಕಾಲಿಕ ಮಾತ್ರವಲ್ಲ ದೀರ್ಘಕಾಲೀನವಾದ ಅಥವಾ ಶಾಶ್ವತವಾದ ಆರೋಗ್ಯ ಸಂಬಂಧಿ ಪರಿಣಾಮಗಳನ್ನು ಉಂಟು ಮಾಡಲು ಶಕ್ತವಾಗಿದೆ ಎಂಬ ಅಂಶವನ್ನು ಸ್ಪಷ್ಟಪಡಿಸುತ್ತದೆ ಎನ್ನುತ್ತಿದ್ದಾರೆ ವೈದ್ಯರು.
ಚೇತರಿಸಿಕೊಳ್ಳುವ ಅವಧಿಯೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ. ಕೆಲವರು ಶೀಘ್ರ ಚೇತರಿಸಿಕೊಂಡರೆ ಕೆಲವರು 40-50 ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಿದ್ದಾರೆ.
ಹಾಗೆಯೇ ಎಲ್ಲ ಔಷಧಗಳೂ ಎಲ್ಲರೂ ಮೇಲೂ ಒಂದೇ ರೀತಿಯ ಪರಿಣಾಮವನ್ನು ಬೀರುತ್ತಿಲ್ಲ. ಈ ಎಲ್ಲ ಅಂಶಗಳು ಕೋವಿಡ್ ಒಂದು ಸಂಕೀರ್ಣವಾದ ವೈರಸ್ ಎನ್ನುವುದನ್ನು ತಿಳಿಸುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.