ಇದು ಜೀನ್ಸ್ ಲೋಕ: ಯುವಕರ ಮೈ ಮೇಲೆ ಡೆನಿಮ್‌ ಕಾಯಂ


Team Udayavani, May 12, 2020, 7:06 PM IST

ಇದು ಜೀನ್ಸ್ ಲೋಕ: ಯುವಕರ ಮೈ ಮೇಲೆ ಡೆನಿಮ್‌ ಕಾಯಂ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಣಿಪಾಲ: ನಿಸ್ಸಂದೇಹವಾಗಿ ಡೆನಿಮ್‌ ದಿರಿಸನ್ನು ಮೆಚ್ಚದವರು ಸಿಗುವುದು ಅಪರೂಪ.

ಜೀನ್ಸ್‌ನಿಂದ ಜಾಕೆಟ್‌ಗಳವರೆಗೆ ಎಲ್ಲರೂ ಡೆನಿಮ್‌ ಅನ್ನು ಇಷ್ಟಪಡುತ್ತೇವೆ. ಡೆನಿಮ್‌ ಟೈಮ್‌ಲೆಸ್‌ ಫ್ಯಾಶ‌ನ್‌ಗಳಲ್ಲಿ ಒಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಫ್ಯಾಶ‌ನ್‌ ಪ್ರಿಯರು ಎಂದಿಗಿಂತಲೂ ಹೆಚ್ಚು ಡೆನಿಮ್‌ ಬಟ್ಟೆಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಡೆನಿಮ್‌ ಬ್ರಾಂಡ್‌ಗಳು ಗ್ರಾಹಕರ ಬೇಡಿಕೆಗಳು ಮತ್ತು ಅಗತ್ಯಗಳನ್ನು ಪೂರೈಸುವಂತಹ ಪರಿಪೂರ್ಣವಾದ ಜೀನ್ಸ್‌ ತಯಾರಿಸಲು ಗಮನ ಹರಿಸುತ್ತಿವೆ.

ಹೊಸ ಡೆನಿಮ್‌ ಪ್ರವೃತ್ತಿಗಳಂತೂ ಫಾರೆವರ್‌ಕ್ಲಾಸಿಕ್‌ ಎನ್ನುವಂತಹದ್ದಾಗಿದೆ. ಡೆನಿಮ್‌ ಬೇಡಿಕೆಯೊಂದಿಗೆ ಬೆಲೆಯೂ ಹೆಚ್ಚುತ್ತಿದೆ. ಹೆಚ್ಚೇನೂ ದುಬಾರಿ ಅಲ್ಲದೆ ಇರುವುದರಿಂದ ಖರೀದಿಗೂ ಅನುಕೂಲವಾಗಿದೆ.

ಹೆಚ್ಚಿನ ಬೇಡಿಕೆ
ತನ್ನ ಹಲವು ವಿಭಿನ್ನ ವಿನ್ಯಾಸಗಳು ಮತ್ತು ಗುಣಮಟ್ಟಗಳಿಂದ ಡೆನಿಮ್‌ ಯುವ ಜನತೆಯ ನೆಚ್ಚಿನ ಆಯ್ಕೆಯಾಗಿದೆ. ಡೆನಿಮ್‌ ಜೀನ್ಸ್‌ಗಳಿಗಿರುವ ಗತ್ತೇ ಅಂತಹದ್ದು. 80ರ ದಶಕದಿಂದಲೂ ವಿಶೇಷ ಮಾದರಿಯ ಜೀನ್ಸ್‌ ಜಾಕೆಟ್‌ಗಳು ಮತ್ತು ಸುದೃಢ ಜೀನ್ಸ್‌ ಬಾಟಂಗಳಿಗೆ ತನ್ನದೇ ಆದ ಮೌಲ್ಯವನ್ನು ಹೊಂದಿದೆ.


ಡೆನಿಮ್‌ ಜೀನ್ಸ್‌ನಲ್ಲಿ ವೈವಿಧ್ಯಗಳು

ಸ್ಲಿಟ್‌ ಜೀನ್ಸ್‌
ಸ್ಲಿಟ್‌ ಜೀನ್ಸ್‌ ಫ್ಯಾಶನ್‌ ಜಗತ್ತಿನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಸ್ಲಿಟ್‌ ಜೀನ್ಸ್‌ನಲ್ಲಿ ಸ್ಲಿಮ್‌-ಟ್ರೆಂಡ್‌ಗಳು ಬಹುತೇಕ ಸಾಮಾನ್ಯವಾಗಿದೆ. ಸ್ಲಿಮ್‌ ಜೀನ್ಸ್‌, ವಿಂಟೇಜ್‌ ಫಿಟ್‌ ಜೀನ್ಸ್‌ ಮತ್ತು ಅಗಲ ಕಾಲಿನ ಜೀನ್ಸ್‌, ಸೈಡ್‌ ಸ್ಲಿಟ್‌ ಅಥವಾ ಫ್ರಂಟ್‌ ಸ್ಲಿಟ್‌ ಮೊದಲಾದ ವೈವಿಧ್ಯವೂ ಇದರಲ್ಲಿದೆ. ಸ್ಲಿಟ್‌ ಜೀನ್ಸ್‌ ಪ್ರಸ್ತುತ ಡೆನಿಮ್‌ ಅತ್ಯಧಿಕ ಮಾರುಕಟ್ಟೆ ಇರುವ ವಿನ್ಯಾಸವಾಗಿದೆ.

ಡಿಸ್ಟ್ರೋಯಿಡ್‌ ಜೀನ್ಸ್‌
ಹಿರಿಯರಿಗೆ ಇದು ಅಷ್ಟು ಇಷ್ಟವಾಗಲಿಕ್ಕಿಲ್ಲ. ಮೊಣಕಾಲು ಹರಿದಿರುವ ಪ್ಯಾಂಟ್‌ಗಳನ್ನು ಧರಿಸಿ ಮದುವೆ ಸಮಾರಂಭದಲ್ಲೂ ಭಾಗವಹಿಸುವಷ್ಟು ಟ್ರೆಂಡ್‌ ಸೆಟ್‌ ಮಾಡಿವೆ ಈ ಡ್ರೆಸ್ಟ್ರೋಯಿಡ್‌ ಜೀನ್ಸ್‌ಗಳು.
ಮೊಣಕಾಲು ಹರಿದಿರುವ ಮಾದರಿ, ಇಲ್ಲವೇ ಬಣ್ಣವನ್ನು ಆಸಿಡ್‌ ಬಳಸಿ ಗಾಢವಾಗಿ ಉಜ್ಜಿ ನೂಲುಗಳು ಎದ್ದು ಕಾಣುವಂತೆ ಮಾಡಿರುವುದು ಯುವಕರನ್ನು ಬೇಗ ಸೆಳೆಯುತ್ತಿದೆ ಆದರೆ ಹೆತ್ತವರ ಮತ ಇದಕ್ಕೆ ಅಷ್ಟಾಗಿ ಸಿಕ್ಕಿಲ್ಲ. ಡಿಸ್ಟ್ರೋಯಿಡ್‌ ಜೀನ್ಸ್‌ಗಳು ಬ್ಲೇಜರ್‌, ಚೆಕ್ಸ್‌ ಶರ್ಟ್‌ಗಳೊಂದಿಗೆ ಉತ್ತಮ ಮ್ಯಾಚಿಂಗ್‌ ಆಗಿದೆ.

ಕಸೂತಿ ಜೀನ್ಸ್‌
ಮಹಿಳಾ ವಿನ್ಯಾಸಕರು ಯಾವಾಗಲೂ ಡೆನಿಮ್‌ ಕ್ಲಾಸಿಕ್‌ಗಳಲ್ಲಿ ತಮ್ಮ ಕಸೂತಿ ಕಲೆಯನ್ನು ಪ್ರದರ್ಶಿಸಿ ಹೆಣ್ಣು ಮಕ್ಕಳಲ್ಲೂ ಡೆನಿಮ್‌ ಪ್ರೀತಿ ಮೂಡಿಸುತ್ತಿದ್ದಾರೆ. ಕಸೂತಿ ಜೀನ್ಸ್‌ ಯುವತಿರ ನೆಚ್ಚಿನ ಆಯ್ಕೆಯಲ್ಲಿ ಒಂದಾಗಿದೆ.
ಇಂದಿನ ಪೀಳಿಗೆಯ ಯುವತಿಯರು ಹೆಚ್ಚಿನ ಜೀನ್ಸ್‌ಗಳಲ್ಲಿ ಕಸೂತಿ ಕಲೆಯನ್ನು ಬಯಸುತ್ತಾರೆ. ಕಸೂತಿ ಜೀನ್ಸ್‌ ಅನ್ನು ಸರಳ ಟೀಸ್‌, ಟಾಪ್ಸ್‌, ಟೀ ಶರ್ಟ್‌, ಶರ್ಟ್‌ ಧರಿಸಬಹುದಾಗಿದೆ.

ಬೂಟ್ಕಟ್‌ ಜೀನ್ಸ್‌
90ರ ದಶಕದ ಜನಪ್ರಿಯ ಶೈಲಿ ಮತ್ತೆ ಬಂದಿದೆ. ಬೂಟ್ಕಟ್‌ ಜೀನ್ಸ್‌ ಸೊಂಟ ಮತ್ತು ತೊಡೆಯ ವರಗೆ ಸ್ಲಿಮ್‌ ಆಗಿದ್ದು ಪಾದದ ಮಣಿಗಂಟಿನಲ್ಲಿ ಅಗಲವಾಗಿರುತ್ತದೆ. ಈ ಜೀನ್ಸ್‌ಗಳು ಯಾವುದೇ ಸಂದರ್ಭದಲ್ಲಿ ಧರಿಸಲು ಸೂಕ್ತವಾಗಿದೆ. ಟಾರ್ಟನ್‌ ಬ್ಲೇಜರ್‌, ಮುದ್ರಿತ ಸ್ಕಾರ್ಫ್ ಹೊಂದಿರುವ ಶರ್ಟ್‌ಗಳಿಗೆ ಮ್ಯಾಚಿಂಗ್‌ ಆಗಿ ಧರಿಸಿದರೆ ಹೊಸ ಮೆರುಗು ಸಿಗುತ್ತದೆ.

ಕಫ್ಡ್ ಜೀನ್ಸ್‌
ಕ್ಲೀನ್‌ ಮತ್ತು ಗರಿಗರಿಯಾದ ಕಫ್ಡ್ ಜೀನ್ಸ್‌ ಕ್ಲಾಸಿಕ್‌ ನೋಟವನ್ನು ನೀಡುತ್ತದೆ. ಉದ್ದವಾದ ಜೀನ್ಸ್‌ ಅನ್ನು ಕತ್ತರಿಸದೆ ಅದನ್ನು ಮೇಲಕ್ಕೆ ಮಡಚಲಾಗಿರುತ್ತದೆ. ಕ್ಯಾನ್‌ವಾಶ್‌ ಶೂಗಳೊಂದಿಗೆ ಈ ಜೀನ್ಸ್‌ಗಳು ನಿಮ್ಮ ಸೌಃದರ್ಯ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.

ಮತ್ತೂಂದು ವಿಶೇಷವೆಂದರೆ ಈ ಬಗೆಯ ಜೀನ್ಸ್‌ಗಳನ್ನು ಪುರುಷ, ಮಹಿಳೆಯರು ಯಾರು ಉಟ್ಟರೂ ಸೊಗಸೇ. ಇಂತಹ ಜೀನ್ಸ್‌ಗಳಿಗೆ ಮ್ಯಾಚಿಂಗ್‌ ಆಗಿ ನೀಲಕೈ ಚೆಕ್ಸ್‌ ಶರ್ಟ್‌ಗಳು, ಬ್ಲೇಜರ್‌ಗಳು, ಫಿಟ್ಟಿಂಗ್‌ ಇರುವ ಟಿ ಶರ್ಟ್‌ಗಳನ್ನು ಬಳಸಬಹುದು.

ಅಪ್‌ಶಾರ್ಟ್‌
ಅಪ್‌ಶಾರ್ಟ್‌ ಜೀನ್ಸ್‌ಗಳು ತಮ್ಮ ವಾರ್ಡ್‌ರೋಬ್‌ನಲ್ಲಿ ಇರಬೇಕೆಂದು ಪ್ರತಿಯೊಬ್ಬ ಫ್ಯಾಶನ್‌ ಪ್ರಿಯರೂ ಬಯಸುತ್ತಾರೆೆ. ಇದು ಪ್ರಸ್ತುತ ಹೆಚ್ಚಿನವರ ಅಚ್ಚು ಮೆಚ್ಚಿನ ದಿರಿಸಾಗಿದೆ. ಅದಕ್ಕೆ ಕಾರಣವೇನೆಂದರೆ ಯಾವುದಕ್ಕಾದರೂ ಸುಲಭದಲ್ಲಿ ಮ್ಯಾಚಿಂಗ್‌ ಮಾಡಲು ಸಾಧ್ಯವಾಗಿರುವುದು.

ಟಿ ಶರ್ಟ್‌, ಶರ್ಟ್‌ಗಳಿಗೆ ಉತ್ತಮ ಸಂಯೋಜನೆಯಾಗಿದೆ. ಈ ಡೆನಿಮ್‌ ಜೀನ್ಸ್‌ ಜಗತ್ತಿನಾದ್ಯಂತ ಫ್ಯಾಶನ್‌ ಉದ್ಯಮವನ್ನು ಆಳುತ್ತಿದೆ. ಪ್ರತಿ ಕಾಲಘಟ್ಟಕ್ಕೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳುತ್ತ ಡೆನಿಮ್‌ ಪ್ರತಿ ಸಲವೂ ಆಯ್ಕೆಗೆ ಇಷ್ಟದ ಸಂಗತಿಯಾಗಿದೆ.

ಟಾಪ್ ನ್ಯೂಸ್

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.