ತನ್ನ ಉದ್ಯೋಗಿಗಳಿಗೆ ‘ಶಾಶ್ವತವಾಗಿ ಮನೆಯಿಂದಲೇ ಕೆಲಸ’ ಮಾಡಲು ಅನುಮತಿ ನೀಡಿದ ಟ್ವಿಟ್ಟರ್
Team Udayavani, May 13, 2020, 7:56 AM IST
ನ್ಯೂಯಾರ್ಕ್: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್, ಲಾಕ್ ಡೌನ್ ಕಾರಣದಿಂದ ತನ್ನ ಕಚೇರಿಗಳನ್ನು ಸೆಪ್ಟೆಂಬರ್ ಮೊದಲು ತೆರೆಯುವ ಸಾಧ್ಯತೆಯಿಲ್ಲವಾದ್ದರಿಂದ, ಕೋವಿಡ್ 19 ಲಾಕ್ ಡೌನ್ ಮುಗಿದ ನಂತರವೂ ತನ್ನ ಅನೇಕ ಉದ್ಯೋಗಿಗಳಿಗೆ ಮನೆಯಿಂದ ಶಾಶ್ವತವಾಗಿ ಕೆಲಸ ಮಾಡಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಟ್ವಿಟ್ಟರ್ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಕಂಪನಿಯಾಗಿದ್ದು, ಕೋವಿಡ್ ಕಾಣಿಸಿಕೊಂಡತಕ್ಷಣ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ ಮೊದಲ ಸಂಸ್ಥೆಯಾಗಿತ್ತು. ಇದೀಗ ವರ್ಕ್ ಫ್ರಂ ಹೋಮ್ ಅನಿರ್ದಿಷ್ಟವಾಗಿ ಮುಂದುವರಿಸುತ್ತದೆ ಎಂದು ತಿಳಿಸಿದೆ.
ಕೆಲವು ತಿಂಗಳಿಂದ ಮನೆಯಲ್ಲೇ ಕುಳಿತು ಅಥವಾ ಎಲ್ಲಿಂದಾದರೂ ಸಂಸ್ಥೆಯ ಕೆಲಸ ಮಾಡಬಹುದೆಂದು ಉದ್ಯೋಗಿಗಳು ನಿರೂಪಿಸಿದ್ದಾರೆ. ಇಂತಹ ಆರೋಗ್ಯ ಬಿಕ್ಕಟ್ಟಿನ ನಡುವೆಯೂ ತ್ವರಿತವಾಗಿ ಪ್ರತಿಕ್ರಿಯಿಸಲು ನಮಗೆ ಸಾಧ್ಯವಾಗಿದೆ. ನಮ್ಮ ಸಂಸ್ಥೆಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವ ಉತ್ಸಾಹ ತೋರಿದರೆ ಇನ್ನು ಶಾಶ್ವತವಾಗಿ ಅದನ್ನು ಮುಂದುವರಿಸಲಾಗುವುದು ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳ ದಿಗ್ಗಜರಾದ ಫೇಸ್ ಬುಕ್ ಮತ್ತು ಗೂಗಲ್ ಈ ವರ್ಷದ ಕೊನೆಯವರೆಗೂ ವರ್ಕ್ ಫ್ರಂ ಹೋಮ್ ಮುಂದುವರೆಸುವ ಇಚ್ಚೆಯನ್ನು ವ್ಯಕ್ತಪಡಿಸಿದೆ ಎಂದು ಎನ್ ಡಿಟಿವಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.